24.8 C
ಪುತ್ತೂರು, ಬೆಳ್ತಂಗಡಿ
April 1, 2025
ಅಪರಾಧ ಸುದ್ದಿಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿವರದಿ

ಯೂಟ್ಯೂಬ್ ಚಾನಲ್ ನ ಸಂದರ್ಶನದ ವಿಡಿಯೋವನ್ನು ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟು ಜೈನ ಧರ್ಮದ ಜನರ ನಿಂದಿಸಿದ ಆರೋಪ : ಬೆಳ್ತಂಗಡಿ ಠಾಣೆಯಲ್ಲಿ ಗಿರೀಶ್ ಮಟ್ಟಣ್ಣವನವರ್ ಮತ್ತು ಶ್ರೀಮತಿ ರಾಧಿಕಾ ಕಾಸರಗೋಡು ಇವರ ಮೇಲೆ ಕೇಸು

ಬೆಳ್ತಂಗಡಿ: ಮಂಗಳೂರಿನ ಯೂಟ್ಯೂಬ್ ಚಾನಲ್ ನಲ್ಲಿ ಗಿರೀಶ್ ಮಟ್ಟಣ್ಣನವರ ಸಂದರ್ಶನ ಮಾಡಿದ ವಿಡಿಯೋವನ್ನು ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟು ಜೈನ ಧರ್ಮದ ಜನರನ್ನು ನಿಂದಿಸಿದ ಆರೋಪದಲ್ಲಿ ಗಿರೀಶ್ ಮಟ್ಟಣ್ಣವನವರ್ ಮತ್ತು ಶ್ರೀಮತಿ ರಾಧಿಕಾ ಕಾಸರಗೋಡು ಇವರ ಮೇಲೆ .ನ. 18 ರಂದು ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಮಂಗಳೂರಿನ Human Rights news world tv ಚಾನೆಲ್ ನವರು, ಗಿರೀಶ್ ಮಟ್ಟಣ್ಣನವರ್ ಸಂದರ್ಶನದ ವಿಡಿಯೋವನ್ನು ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟು ‘ಜೈನ ಧರ್ಮದ ಜನರನ್ನು ನಿಂದಿಸಿ ವೇದವಳ್ಳಿ ಹಿಂದೂ, ಪದ್ಮಲತಾ ಹಿಂದೂ, ಮಾವುತ ನಾರಾಯಣ ಹಿಂದೂ, ಯಮುನಾ ಹಿಂದೂ, ಸೌಜನ್ಯ ಹಿಂದೂ, ಸತ್ತಂತಹ ಸಾಕ್ಷಿಗಳು ರವಿ ಪೂಜಾರಿ ಹಿಂದೂ ಎಲ್ಲರೂ ಹಿಂದೂಗಳೇ. ಉಳಿದವರು ಯಾರು? ಇದ್ದವರು ಯಾರು? ಜೈನರು ತಾನೆ?. ಕೊಲೆಯಾಗುತ್ತಿರುವವರು ಯಾರು? ಹಿಂದೂಗಳು, ಕೊಲೆ ಮಾಡಿಸುತ್ತಾ ಇದ್ದವರು ಯಾರು ಜೈನರು ತಾನೆ’ ಎಂದು ಹೇಳಿಕೆ ನೀಡಿ ಒಂದು ಧರ್ಮವನ್ನು ಇನ್ನೊಂದು ಧರ್ಮದ ವಿರುದ್ಧ ಎತ್ತಿಕಟ್ಟಿ ಸಮಾಜದ ಸ್ವಾಸ್ಥವನ್ನು ಕೆಡಿಸುವ ವಿಡಿಯೋವನ್ನು ಹರಿಬಿಟ್ಟು ಧಾರ್ಮಿಕ ಭಾವನೆಗಳಿಗೆ ಧಕ್ಕೆ ಉಂಟುಮಾಡುವ ಗಿರೀಶ್ ಮಟ್ಟಣ್ಣವನವರ್ ಮತ್ತು ಶ್ರೀಮತಿ ರಾಧಿಕಾ ಕಾಸರಗೋಡು ಯಾನೆ ಅನಿತಾ ಕಾಸರಗೋಡು ಕೂಡಾ ಶ್ರೀ ಕ್ಷೇತ್ರ ಧರ್ಮಸ್ಥಳದ ಬಗ್ಗೆ ಅಲ್ಲಿ ಅಡಳಿತ ನಡೆಸುತ್ತಿರುವ ಜೈನ ಧರ್ಮಿಯರಾದ ಡಾ.ಡಿ.ವೀರೇಂದ್ರ ಹೆಗ್ಗಡೆಯವರ ಬಗ್ಗೆ ಅವರ ಕುಟುಂಬದ ಬಗ್ಗೆ ಹಾಗೂ ಜೈನ ಧರ್ಮದ ಆಚರಣೆಯ ಬಗ್ಗೆ ಸದಾ ಅವಹೇಳಕಾರಿಯಾಗಿ ಮಾತಾನಾಡಿರುವ ಅವರುಗಳ ಮೇಲೆ ಸೂಕ್ತ ಕ್ರಮ ಕೈಗೊಳ್ಳಬೇಕಾಗಿ ಬೆಳ್ತಂಗಡಿ ಪೊಲೀಸ್ ಠಾಣೆಗೆ ಭಾರತೀಯ ಜೈನ್ ಮಿಲನ್ ಅಧ್ಯಕ್ಷರಾದ ಡಾ.ನವೀನ್ ಕುಮಾರ್ ಮತ್ತು ಸದಸ್ಯರು ದೂರು ನೀಡಿದ್ದರು. ದೂರನ್ನು ಸ್ವೀಕರಿಸಿದ ಬೆಳ್ತಂಗಡಿ ಪೊಲೀಸರು ಗಿರೀಶ್ ಮಟ್ಟಣ್ಣವರು ಮತ್ತು ರಾಧಿಕಾ ಕಾಸರಗೋಡು ವಿರುದ್ಧ ಐಪಿಸಿ 1860 (u/s -153A,298) ಅಡಿಯಲ್ಲಿ ಪ್ರಕರಣ ದಾಖಲಿಸಿ ತನಿಖೆ ನಡೆಸುತ್ತಿದ್ದಾರೆ.

Related posts

ಬಂದಾರು: ಶ್ರೀ ಕ್ಷೇ.ಧ.ಗ್ರಾ. ಯೋಜನೆ ಕಣಿಯೂರು ವಲಯದ ಮೈರೋಳ್ತಡ್ಕ ಕಾರ್ಯಕ್ಷೇತ್ರದ ಸದಸ್ಯೆ ಚೆನ್ನಮ್ಮ ಖಂಡಿಗ ರಿಗೆ ಗೌರವಾರ್ಪಣೆ

Suddi Udaya

ಅಳದಂಗಡಿ: ಉಚಿತ ನೇತ್ರ ಚಿಕಿತ್ಸಾ ಶಿಬಿರ

Suddi Udaya

ಅಳದಂಗಡಿ ಗ್ರಾಮ ಪಂಚಾಯತ್ ನ ನೂತನ ಅಧ್ಯಕ್ಷರಾಗಿ ಸರಸ್ವತಿ, ಉಪಾಧ್ಯಕ್ಷರಾಗಿ ಶಾಲಿನಿ ಅವಿರೋಧವಾಗಿ ಆಯ್ಕೆ

Suddi Udaya

ವೇಣೂರು ಪೊಲೀಸ್ ಠಾಣೆಯ ಎಎಸ್ಐ ಆಗಿ ಬೆನ್ನಿಚ್ಛನ್ ಅಧಿಕಾರ ಸ್ವೀಕಾರ

Suddi Udaya

ಧರ್ಮಸ್ಥಳ ಗ್ರಾ.ಪಂ. ಯಿಂದ ಏಕಬಳಕೆ ಪ್ಲಾಸ್ಟಿಕ್ ನಿಷೇಧವಾಗಿರುವ ಬಗ್ಗೆ ಪರಿಸರ ಅಧಿಕಾರಿಯವರ ಕಾರ್ಯಾಚರಣೆ ಸಭೆ

Suddi Udaya

ಮಾ.8: ಬಳಂಜ ಬ್ರಹ್ಮಶ್ರೀ ನಾರಾಯಣಗುರು ಸೇವಾ ಸಮಿತಿ ಯುವ ಬಿಲ್ಲವ ವೇದಿಕೆ ಮತ್ತು ಮಹಿಳಾ ಬಿಲ್ಲವ ವೇದಿಕೆ ಯಿಂದ ಶ್ರೀ ಸತ್ಯನಾರಾಯಣ ಪೂಜೆ, ಶ್ರೀ ಗುರು ಪೂಜೆ, ಶ್ರೀ ಸರ್ವೇಶ್ವರೀ ದೇವಿಯ ಪೂಜೆ ಹಾಗೂ ಧಾರ್ಮಿಕ ಸಭೆ

Suddi Udaya
error: Content is protected !!