September 6, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿ

ಕುಕ್ಕೇಡಿ ಗ್ರಾಮದ ಪಾಳ್ಯ ದರ್ಖಾಸು ನಿವಾಸಿ ವಿಶ್ವನಾಥ ವಿಷ ಸೇವಿಸಿ ಅತ್ಮಹತ್ಯೆ

ಬೆಳ್ತಂಗಡಿ: ಕುಕ್ಕೇಡಿ ಗ್ರಾಮದ ಪಾಳ್ಯ ದರ್ಖಾಸು ನಿವಾಸಿ ವಿಶ್ವನಾಥ (45ವ) ಎಂಬವರು, ವಿಷ ಸೇವಿಸಿ ಅತ್ಮಹತ್ಯೆ ಮಾಡಿಕೊಂಡ ಘಟನೆ ನ.16 ರಂದು ವರದಿಯಾಗಿದೆ.

ಅಂದು ಬೆಳಿಗ್ಗೆ ವಿಶ್ವನಾಥರು ತನ್ನ ಕುಡಿತದ ಚಟದಿಂದ ಅಥವಾ ಇನ್ನಾವುದೋ ವೈಯಕ್ತಿಕ ಕಾರಣಗಳಿಂದ ಬೇಸತ್ತು ತನ್ನ ವಾಸದ ಮನೆಯಾದ ಕುಕ್ಕೇಡಿ ಗ್ರಾಮದ ಪಾಳ್ಯ ದರ್ಖಾಸು ಎಂಬಲ್ಲಿ ಕಳೆನಾಶಕ ವಿಷವನ್ನು ಸೇವಿಸಿ ಅಸ್ವಸ್ಥಗೊಂಡವರನ್ನು ಬೆಳ್ತಂಗಡಿ ಸರಕಾರಿ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ಕೊಡಿಸಿ ಹೆಚ್ಚಿನ ಚಿಕಿತ್ಸೆಯ ಬಗ್ಗೆ ಮಂಗಳೂರಿನ ವೆನ್‌ ಲಾಕ್‌ ಆಸ್ಪತ್ರೆಗೆ ದಾಖಲಿಸಿದ್ದು ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾರೆ ಎಂದು ಅವರ ಸಹೋದರ ಶಶಿಧರ ಅವರು ನೀಡಿದ ದೂರಿನಂತೆ ವೇಣೂರು ಪೊಲೀಸ್ ಠಾಣಾ ಯು ಡಿಆರ್ ನಂಬ್ರ: 19-2023 ಕಲಂ:174 ಸಿ ಆರ್ ಪಿ ಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.

Related posts

ಬಾರ್ಯ- ಪುತ್ತಿಲ ಸಾರ್ವಜನಿಕ ಶ್ರೀ ಗಣೇಶೋತ್ಸವದ ಆಮಂತ್ರಣ ಪತ್ರಿಕೆ ಬಿಡುಗಡೆ

Suddi Udaya

ಆಟೋರಿಕ್ಷಾ ಕಾರ್ಮಿಕರ ಬದುಕು ಉಳಿಸಲು ದರ ಪರಿಷ್ಕರಣೆ ಅನಿವಾರ್ಯ: ಬಿ.ಎಂ.ಎಸ್

Suddi Udaya

ತೋಟತ್ತಾಡಿಯಲ್ಲಿ ಗೇರು ತೋಟಕ್ಕೆ ಬೆಂಕಿ

Suddi Udaya

ಆಂಧ್ರಪ್ರದೇಶದಲ್ಲಿ ನಡೆಯುವ, ದಕ್ಷಿಣ ಭಾರತದ ವಿಜ್ಞಾನ ಮೇಳ: ಬೆಳ್ತಂಗಡಿ ಎಸ್. ಡಿ. ಎಂ ಶಾಲಾ ವಿದ್ಯಾರ್ಥಿ ಅಧಿಶ್ ಬಿ.ಸಿ ಆಯ್ಕೆ

Suddi Udaya

ಕರಾಟೆ ಪಂದ್ಯಾಟ: ವಾಣಿ ಆಂ.ಮಾ. ಶಾಲೆಯ ವಿದ್ಯಾರ್ಥಿನಿ ಕು. ಸಂಜ್ಞಾ ಜಿಲ್ಲಾ ಮಟ್ಟಕ್ಕೆ ಆಯ್ಕೆ

Suddi Udaya

ಹುಣ್ಸೆಕಟ್ಟೆಯ ಪಂಜಿರ್ಪು ಬಳಿ ಚಿರತೆ ಓಡಾಟ: ಭಯಭೀತರಾದ ಜನರು

Suddi Udaya
error: Content is protected !!