24 C
ಪುತ್ತೂರು, ಬೆಳ್ತಂಗಡಿ
April 3, 2025
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಪ್ರಮುಖ ಸುದ್ದಿಬೆಳ್ತಂಗಡಿವರದಿ

ಮೋದಿ ಅಭಿಮಾನಿ ಶಿಶಿಲ ದೇನೋಡಿ ಯುವ ಬ್ರಿಗೇಡ್‌ ಕಾರ್ಯಕರ್ತ ತಿಲಕ್ ರ ಮದುವೆ: ಮೋದಿಮಯವಾಗಿ ಪರಿವರ್ತನೆಯಾದ ಮದುವೆ ಮಂಟಪ: “ಮದುವೆ ಒಮ್ಮೆ ಮಾತ್ರ.. ಆದರೆ ಮೋದಿ ಮತ್ತೆ ಮತ್ತೆ ಪ್ರಧಾನಿಯಾಗಬೇಕು” ಎಂಬ ಸಂದೇಶ

ಶಿಶಿಲ: ಮತ್ತೆ, ಮತ್ತೆ ಮೋದಿಯವರು ಪ್ರಧಾನಿಯಾಗಬೇಕು ಎಂಬ ಸಂದೇಶವನ್ನು ತಮ್ಮ ಮದುವೆ ಆಮಂತ್ರಣ ಪತ್ರದಲ್ಲಿ ಮುದ್ರಿಸಿ, ಮೋದಿ ಪರ ಪ್ರಚಾರ ಕಾರ್ಯವನ್ನು ದೇನೋಡಿ ತಿಲಕ್ ಅವರು ನಡೆಸಿ ಎಲ್ಲರ ಗಮನವನ್ನು ಸೆಳೆದಿದ್ದರು.


ಇಂದು ಅವರ ಮದುವೆಯು ಸೌತಡ್ಕ ಶ್ರೀ ಗಣೇಶ್ ಕಲಾಮಂದಿರದಲ್ಲಿ ನಡೆದಿದ್ದು ಮದುವೆ ಮಂಟಪವನ್ನು ಮೋದಿಮಯವಾಗಿ ಪರಿವರ್ತಿಸಿ, ತಮ್ಮ ಅಭಿಮಾನವನ್ನು ತೋಪ೯ಡಿಸಿ, ಎಲ್ಲರ ಪ್ರಶಂಸೆಗೆ ಪಾತ್ರರಾದರು.
ಶಿಶಿಲ ಗ್ರಾಮದ ದೇನೋಡಿ ತಿಲಕ್ ಯುವ ಬ್ರಿಗೇಡ್‌ನಲ್ಲಿ ಕಾರ್ಯಕರ್ತರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಪ್ರಧಾನಿ ಮೋದಿಯವರ ಕಟ್ಟಾ ಅಭಿಯಾನಿಯಾಗಿರುವ ಇವರು ಸಭಾಂಗಣದ ಸುತ್ತಲ್ಲೂ ಮೋದಿಯವರ ಪೋಸ್ಟರ್ ಗಳನ್ನು ಹಾಕಿದ್ದು, ಸಭಾಂಗಣದ ಮುಂದೆ ಮೋದಿಯವರ ಮೂರ್ತಿಯನ್ನು ಸಹ ಇಟ್ಟಿದ್ದರು. ಅದರಲ್ಲಿ “ಮದುವೆ ಒಮ್ಮೆ ಮಾತ್ರ.. ಆದರೆ ಮೋದಿ ಮತ್ತೆ ಮತ್ತೆ ಪ್ರಧಾನಿಯಾಗಬೇಕು” ಎಂಬ ಸಂದೇಶವನ್ನು ಹಾಕಲಾಗಿತ್ತು.

Related posts

ಬೆಳ್ತಂಗಡಿ ತಾಲೂಕು ಬೀಡಿ ಗುತ್ತಿಗೆ ಸಂಘದ ನೂತನ ಅಧ್ಯಕ್ಷರಾಗಿ ಸಿ. ಮಹಮ್ಮದ್ ಕಕ್ಕಿಂಜೆ, ಕಾರ್ಯದರ್ಶಿಯಾಗಿ ರಫಾಯಲ್ ವೇಗಸ್ ಆಯ್ಕೆ

Suddi Udaya

ಉಜಿರೆ ಎಸ್.ಡಿ.ಎಮ್ ಆಂ.ಮಾ. (ಸಿ.ಬಿ.ಎಸ್‌.ಇ) ಶಾಲೆಯಲ್ಲಿ ಯಕ್ಷಗಾನ ತರಬೇತಿ ತರಗತಿಗೆ ಚಾಲನೆ

Suddi Udaya

ಮದ್ದಡ್ಕ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಭಜನಾ ಸಮಿತಿಯಿಂದ ತುಮಕೂರು ಜಿಲ್ಲೆಯ ಶಿರಾದಲ್ಲಿ ಸುಮಾರು 5೦ ಮಕ್ಕಳಿಗೆ ಉಚಿತ ಭಜನಾ ತರಬೇತಿ

Suddi Udaya

ವಿದ್ಯುತ್ ಪರಿವರ್ತಕದಿಂದ ಕಿಡಿಗಳು ಸಿಡಿದು ವ್ಯಾಪಿಸಿದ ಬೆಂಕಿ; ಅನಾಹುತ ತಪ್ಪಿಸಿದ ಸ್ಥಳೀಯ ನಾಗರಿಕರು

Suddi Udaya

ಕನ್ಯಾಡಿ ll ಸರಕಾರಿ ಉನ್ನತೀಕರಿಸಿದ ಹಿರಿಯ ಪ್ರಾಥಮಿಕ ಶಾಲಾ ವಾರ್ಷಿಕೋತ್ಸವ

Suddi Udaya

ಉಜಿರೆ ಹಳೆಪೇಟೆ ಮಸೀದಿಯಲ್ಲಿ ಉಚಿತ ದಂತ ಚಿಕಿತ್ಸಾ ಶಿಬಿರ

Suddi Udaya
error: Content is protected !!