ಬೆಳಾಲು: ಬೆಳಾಲು ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಪ್ರೌಢಶಾಲೆಯಲ್ಲಿ ಪೋಷಕರ ಸಮಾವೇಶ ಜರಗಿತು.
ಸಭೆಯ ಅಧ್ಯಕ್ಷತೆಯನ್ನು ವಹಿಸಿದ್ದ ಪೋಷಕ ಸಂಘದ ಅಧ್ಯಕ್ಷರಾದ ಶೇಖರ್ ಗೌಡ ಕೊಲ್ಲಿಮಾರ್ ರವರು ಮಾತನಾಡುತ್ತಾ, ಬೆಳಾಲು ಪ್ರೌಢಶಾಲೆ ನಮ್ಮೂರಿಗೆ ಶ್ರೀ ಕ್ಷೇತ್ರದಿಂದ ನೀಡಿದ ವರದಾನ. ಸ್ಪೋಕನ್ ಇಂಗ್ಲಿಷ್ , ಉಚಿತ ಕಂಪ್ಯೂಟರ್ ಶಿಕ್ಷಣದೊಂದಿಗೆ ಗುಣಮಟ್ಟದ ಶಿಕ್ಷಣಕ್ಕೆ ಹೆಸರು ಪಡೆದಿದೆ. ಮಕ್ಕಳಿಗೆ ಸಹಪಠ್ಯ ಚಟುವಟಿಕೆಗಳ ಮೂಲಕ ಪ್ರಾಯೋಗಿಕ ಕಲಿಕಾ ಅನುಭವವೂ ಇಲ್ಲಿ ದೊರೆಯುತ್ತಿದೆ. ಮಕ್ಕಳ ಕಲಿಕಾ ಪ್ರಗತಿಯಲ್ಲಿ ಶಿಕ್ಷಕರ ಪಾತ್ರ ಎಷ್ಟು ಮುಖ್ಯವೋ ಅಷ್ಟೇ ಮುಖ್ಯ ಪೋಷಕರ ಪಾತ್ರವೂ ಇದೆ. ಅದಕ್ಕಾಗಿ ಪೋಷಕರು ಮಕ್ಕಳ ಕಲಿಕಾ ಪ್ರಗತಿಗೆ ವಿಶೇಷ ಗಮನನೀಡಬೇಕು ಎಂದು ಅನಿಸಿಕೆಯನ್ನು ವ್ಯಕ್ತಪಡಿಸಿದರು.
ಮುಖ್ಯೋಪಾಧ್ಯಾಯರಾದ ರಾಮಕೃಷ್ಣ ಭಟ್ ರವರು ಪ್ರಸ್ತಾವನೆಯೊಂದಿಗೆ ಶೈಕ್ಷಣಿಕ ಚಟುವಟಿಕೆಗಳ ಕುರಿತು ಅವಲೋಕನ ಮಾಡಿದರು. ವೇದಿಕೆಯಲ್ಲಿ ಪೋಷಕ ಸಮಿತಿಯ ನಿಕಟಪೂರ್ವ ಅಧ್ಯಕ್ಷರಾದ ಸುಲೈಮಾನ್ ಭೀಮಂಡೆ, ಉಪಾಧ್ಯಕ್ಷರಾದ ಶ್ರೀಮತಿ ವಸಂತಿ ಹಾಗೂ ಶಿಕ್ಷಕರು ಉಪಸ್ಥಿತರಿದ್ದರು.
ಗಣಿತ ಶಿಕ್ಷಕರಾದ ಗಣೇಶ್ವರ ರವರು ಸ್ವಾಗತಿಸಿ, ವಿಜ್ಞಾನ ಶಿಕ್ಷಕಿ ಕು.ಕೋಕಿಲಾರವರು ವಂದಿಸಿದರು. ಕನ್ನಡ ಶಿಕ್ಷಕರಾದ ಸುಮನ್ ರವರು ಕಾರ್ಯಕ್ರಮ ನಿರ್ವಹಿಸಿದರು. ಪ್ರಾರ್ಥನಾ ಮತ್ತು ತೃಷಾ ಪ್ರಾರ್ಥನೆಯನ್ನು ಮಾಡಿದರು.