ಬೆಳ್ತಂಗಡಿ : ಇಲ್ಲಿಯ ಶ್ರೀ ಗುರುದೇವ ಪ್ರಥಮ ದರ್ಜೆ ಕಾಲೇಜಿನಲ್ಲಿ, 2023 – 24ನೇ ಸಾಲಿನ ರೋವರ್ಸ್ ರೇಂಜರ್ಸ್ ಘಟಕದ ಉದ್ಘಾಟನಾ ಸಮಾರಂಭ ಇತ್ತೀಚೆಗೆ ಜರುಗಿತು.
ಸಮಾರಂಭದ ಉದ್ಘಾಟಕರಾಗಿರುವ ಶ್ರೀ ಗುರುದೇವ ಎಜುಕೇಶನಲ್ ಟ್ರಸ್ಟ್(ರಿ) ಬೆಳ್ತಂಗಡಿ , ಇಲ್ಲಿನ ಅಧ್ಯಕ್ಷರು ಹಾಗೂ ಮಾಜಿ ಶಾಸಕ ಕೆ ವಸಂತ ಬಂಗೇರ , ಇವರು ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ಮಟ್ಟದಲ್ಲಿ ಸಾಧನೆಯನ್ನು ಮಾಡಲು ಇದು ಸ್ಪೂರ್ತಿಯಾಗಿದೆ . ತನ್ನನ್ನು ತಾನು ಜೀವನದಲ್ಲಿ ಹೇಗೆ ಅಳವಡಿಸಿಕೊಳ್ಳಬೇಕು ಎಂಬುದರ ಜೊತೆಗೆ ಇತರರಿಗೆ ಹೇಗೆ ಮಾದರಿಯಾಗಬೇಕು. ಜೊತೆಗೆ ದೇಶ ಪ್ರೇಮ, ಭಕ್ತಿ , ನಡವಳಿಕೆ ಮತ್ತು ಸೇವೆ ಇವೆಲ್ಲವನ್ನು ರೋವರ್ಸ್ ರೇಂಜರ್ಸ್ ಕಲಿಯಲು ಸಾಧ್ಯ ಎಂದು ವಿದ್ಯಾರ್ಥಿಗಳಿಗೆ ತಿಳಿಸಿ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದರು.
ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಯಾಗಿ ಶ್ರೀ ಗುರುದೇವ ಪದವಿ ಪೂರ್ವ ಕಾಲೇಜಿನ ಕನ್ನಡ ಉಪನ್ಯಾಸಕ ರಾಕೇಶ್ ಕುಮಾರ್ ಇವರು ರೋವರ್ಸ್ ರೇಂಜರ್ಸ್ ಘಟಕದ ಕುರಿತು ಸಂಪೂರ್ಣವಾದ ಮಾಹಿತಿಯನ್ನು ವಿದ್ಯಾರ್ಥಿಗಳಿಗೆ ತಿಳಿಸಿ, ಅದರ ಪ್ರಯೋಜನವನ್ನು ವಿದ್ಯಾರ್ಥಿಗಳು ಹೇಗೆ ಪಡೆದುಕೊಳ್ಳಬೇಕು ಎಂದು ತಿಳಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು , ಶ್ರೀ ಗುರುದೇವ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲರು ಡಾ. ಸವಿತಾ,, ಇವರು ವಹಿಸಿ ವಿದ್ಯಾರ್ಥಿಗಳಿಗೆ ಧೈರ್ಯ, ಸೇವೆ, ಮತ್ತು ನಿಸ್ವಾರ್ಥವನ್ನು ಬೆಳೆಸಿಕೊಳ್ಳಲು ಸಾಧ್ಯ. ಅದನ್ನು ಜೀವನದಲ್ಲಿ ಅಳವಡಿಸಿಕೊಳ್ಳಿ ಎಂದು ತಿಳಿಸಿದರು. ವಿದ್ಯಾರ್ಥಿಗಳು ತಮ್ಮ ನಾಯಕತ್ವವನ್ನು ನಿಷ್ಠೆಯಿಂದ ನಿರ್ವಹಿಸಲು ಪ್ರತಿಜ್ಞಾವಿಧಿಯನ್ನು ಸ್ವೀಕರಿಸಿದರು. ಪ್ರಾಂಶುಪಾಲೆ ಡಾ. ಸವಿತಾ ಪ್ರತಿಜ್ಞಾವಿಧಿ ಬೋಧಿಸಿದರು. ರೋವರ್ಸ್ ಘಟಕದ ನಾಯಕನಾದ ಪ್ರೀತಮ್ ಲೋಬೋ, ರೇಂಜರ್ಸ್ ಘಟಕದ ನಾಯಕಿಯಾದ ದೀಕ್ಷಾ ಇವರು ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಶ್ರೀಮತಿ ಪವಿತ್ರ ನಿರೂಪಿಸಿ, ಸತೀಶ ಸ್ವಾಗತಿಸಿ, ಶ್ರೀಮತಿ ಶ್ರೀಜಾ ವಂದಿಸಿದರು.