ಬೆಳ್ತಂಗಡಿ: ಅಭಿವೃದ್ಧಿಯ ಮಂತ್ರದೊಂದಿಗೆ ಧಾರ್ಮಿಕ ಶ್ರದ್ದಾ ಕೇಂದ್ರಗಳ ಗತ ವೈಭವಕ್ಕೆ ಸಂಕಲ್ಪತೊಟ್ಟು ನಾಡಿನ ಮೂರು ದೇವಸ್ಥಾನಗಳಿಗೆ ಗುಜರಾತ್ ನ ಪ್ರಸಿದ್ದ ಉದ್ಯಮಿ, ಬರೋಡಾದ ಶಶಿ ಕ್ಯಾಟರಿಂಗ್ ಸರ್ವೀಸಸ್ ಮಾಲಕ, ಸಾಮಾಜಿಕ, ಧಾರ್ಮಿಕ, ಶೈಕ್ಷಣಿಕ ಕ್ಷೇತ್ರದ ಮುಂದಾಳು ಶಶಿಧರ ಬಿ ಶೆಟ್ಟಿ ನವಶಕ್ತಿ ಗುರುವಾಯನಕೆರೆ ಇವರು ರೂ.30 ಲಕ್ಷ ದೇಣಿಗೆ ನೀಡಿ ಸಹಕರಿಸಿದ್ದಾರೆ.
ಶ್ರೀ ವೀರಾಂಜನೆಯ ಸ್ವಾಮಿ ದೇವಸ್ಥಾನ ಅಡ್ಯಾರು ಮಂಗಳೂರು ಕ್ಷೇತ್ರಕ್ಕೆ ರೂ- 20 ಲಕ್ಷ,ಮುಂಡೆತ್ತಾಯ ದೇವಸ್ಥಾನ ಕೊಡೆಕ್ಕಲ್ ಅಳಪೆ ಕಣ್ಣೂರು ರೂ- 5 ಲಕ್ಷ ಮತ್ತು ಕೃಷ್ಣ ಗೋಕುಲ ಗೋಪಾಲಕೃಷ್ಣ ಟ್ರಸ್ಟ್ ಮುಂಬಯಿ ರೂ- 5 ಲಕ್ಷ ದೇಣಿಗೆ ನೀಡಿ ಕ್ಷೇತ್ರದ ಅಭಿವೃದ್ಧಿ ಕೆಲಸ ಕಾರ್ಯಗಳಿಗೆ ಸಹಕರಿಸಿದ್ದಾರೆ.
ಶಶಿಧರ ಬಿ ಶೆಟ್ಟಿಯವರು ಉದ್ಯಮದೊಂದಿಗೆ ಸಮಾಜಮುಖಿ ಚಿಂತನೆಯ ಮೂಲಕ ಗುರುತಿಸಿಕೊಂಡಿದ್ದಾರೆ. ವಿಶೇಷವಾಗಿ ಬೆಳ್ತಂಗಡಿ ತಾಲೂಕಿನ ಹಲವಾರು ದೈವಸ್ಥಾನ, ದೇವಸ್ಥಾನಗಳ ಜಿರ್ಣೋದ್ಧಾರ, ಬ್ರಹ್ಮಕಲಶೋತ್ಸವ ಹಾಗೂ ವಿವಿಧ ಸಾಮಾಜಿಕ, ಧಾರ್ಮಿಕ, ಶೈಕ್ಷಣಿಕ,ಕಲೆ, ಸಾಹಿತ್ಯ ಕ್ಷೇತ್ರಗಳಿಗೆ ದೇಣಿಗೆ ನೀಡುವುದರೊಂದಿಗೆ ಮತ್ತು ದಾನ ಧರ್ಮಗಳ ಮೂಲಕ ಸಮಾಜದಲ್ಲಿ ಗುರುತಿಸಿಕೊಂಡಿದ್ದಾರೆ. ಸಾವಿರಾರು ಯುವಕರಿಗೆ ಉದ್ಯೋಗದಾತರಾಗಿ, ಹೊಸ ಅಲೋಚನೆಯ ಯುವಕರಿಗೆ ಸ್ಫೂರ್ತಿಯ ಸೆಲೆಯಾಗಿದ್ದಾರೆ.