ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿವರದಿ

ಬರೋಡಾದ ಶಶಿ ಕ್ಯಾಟರಿಂಗ್ ಸರ್ವೀಸಸ್ ಮಾಲಕ,ಸಾಮಾಜಿಕ, ಧಾರ್ಮಿಕ, ಶೈಕ್ಷಣಿಕ ಕ್ಷೇತ್ರದ ಮುಂದಾಳು ಪ್ರಸಿದ್ದ ಉದ್ಯಮಿ ಶಶಿಧರ ಬಿ.ಶೆಟ್ಟಿ ನವಶಕ್ತಿಯವರಿಂದ ದೇವಸ್ಥಾನಗಳಿಗೆ ರೂ.30 ಲಕ್ಷ ದೇಣಿಗೆ

ಬೆಳ್ತಂಗಡಿ: ಅಭಿವೃದ್ಧಿಯ ಮಂತ್ರದೊಂದಿಗೆ ಧಾರ್ಮಿಕ ಶ್ರದ್ದಾ ಕೇಂದ್ರಗಳ ಗತ ವೈಭವಕ್ಕೆ ಸಂಕಲ್ಪತೊಟ್ಟು ನಾಡಿನ ಮೂರು ದೇವಸ್ಥಾನಗಳಿಗೆ ಗುಜರಾತ್ ನ ಪ್ರಸಿದ್ದ ಉದ್ಯಮಿ, ಬರೋಡಾದ ಶಶಿ ಕ್ಯಾಟರಿಂಗ್ ಸರ್ವೀಸಸ್ ಮಾಲಕ, ಸಾಮಾಜಿಕ, ಧಾರ್ಮಿಕ, ಶೈಕ್ಷಣಿಕ ಕ್ಷೇತ್ರದ ಮುಂದಾಳು ಶಶಿಧರ ಬಿ ಶೆಟ್ಟಿ ನವಶಕ್ತಿ ಗುರುವಾಯನಕೆರೆ ಇವರು ರೂ.30 ಲಕ್ಷ ದೇಣಿಗೆ ನೀಡಿ ಸಹಕರಿಸಿದ್ದಾರೆ.

ಶ್ರೀ ವೀರಾಂಜನೆಯ ಸ್ವಾಮಿ ದೇವಸ್ಥಾನ ಅಡ್ಯಾರು ಮಂಗಳೂರು ಕ್ಷೇತ್ರಕ್ಕೆ ರೂ- 20 ಲಕ್ಷ,ಮುಂಡೆತ್ತಾಯ ದೇವಸ್ಥಾನ ಕೊಡೆಕ್ಕಲ್ ಅಳಪೆ ಕಣ್ಣೂರು ರೂ- 5 ಲಕ್ಷ ಮತ್ತು ಕೃಷ್ಣ ಗೋಕುಲ ಗೋಪಾಲಕೃಷ್ಣ ಟ್ರಸ್ಟ್‌ ಮುಂಬಯಿ ರೂ- 5 ಲಕ್ಷ ದೇಣಿಗೆ ನೀಡಿ ಕ್ಷೇತ್ರದ ಅಭಿವೃದ್ಧಿ ಕೆಲಸ ಕಾರ್ಯಗಳಿಗೆ ಸಹಕರಿಸಿದ್ದಾರೆ.

ಶಶಿಧರ ಬಿ ಶೆಟ್ಟಿಯವರು ಉದ್ಯಮದೊಂದಿಗೆ ಸಮಾಜಮುಖಿ ಚಿಂತನೆಯ ಮೂಲಕ ಗುರುತಿಸಿಕೊಂಡಿದ್ದಾರೆ. ವಿಶೇಷವಾಗಿ ಬೆಳ್ತಂಗಡಿ ತಾಲೂಕಿನ ಹಲವಾರು ದೈವಸ್ಥಾನ, ದೇವಸ್ಥಾನಗಳ ಜಿರ್ಣೋದ್ಧಾರ, ಬ್ರಹ್ಮಕಲಶೋತ್ಸವ ಹಾಗೂ ವಿವಿಧ ಸಾಮಾಜಿಕ, ಧಾರ್ಮಿಕ, ಶೈಕ್ಷಣಿಕ,ಕಲೆ, ಸಾಹಿತ್ಯ ಕ್ಷೇತ್ರಗಳಿಗೆ ದೇಣಿಗೆ ನೀಡುವುದರೊಂದಿಗೆ ಮತ್ತು ದಾನ ಧರ್ಮಗಳ ಮೂಲಕ ಸಮಾಜದಲ್ಲಿ ಗುರುತಿಸಿಕೊಂಡಿದ್ದಾರೆ. ಸಾವಿರಾರು ಯುವಕರಿಗೆ ಉದ್ಯೋಗದಾತರಾಗಿ, ಹೊಸ ಅಲೋಚನೆಯ ಯುವಕರಿಗೆ ಸ್ಫೂರ್ತಿಯ ಸೆಲೆಯಾಗಿದ್ದಾರೆ.

Related posts

ಕಳಿಯ ವೈಷ್ಣವಿ ಸಂಜೀವಿನಿ ಗ್ರಾಮ ಪಂಚಾಯಿತಿ ಮಟ್ಟದ ಒಕ್ಕೂಟದ ಮಹಾಸಭೆ

Suddi Udaya

ಕೊಕ್ಕಡ ಕೇಸರಿ ಟೈಗರ್ಸ್ ವತಿಯಿಂದ ನಗರ ಭಜನಾ ಸಪ್ತಾಹ ಅಂಗವಾಗಿ 3ನೇ ವರ್ಷದ ಪಿಲಿ ನಲಿಕೆ: ಆಮಂತ್ರಣ ಪತ್ರಿಕೆ ಬಿಡುಗಡೆ

Suddi Udaya

ಉಜಿರೆ ಎಸ್.ಡಿ.ಎಂ. ಮಹಿಳಾ ಐಟಿಐ ಕಾಲೇಜಿನಲ್ಲಿ ಪ್ರಥಮ ಚಿಕಿತ್ಸೆ ಹಾಗೂ ಹೃದಯ-ಶ್ವಾಸ ಪುನಶ್ಚೇತನ ಕುರಿತು ಮಾಹಿತಿ, ಪ್ರಾತ್ಯಕ್ಷಿಕೆ ಕಾರ್ಯಕ್ರಮ

Suddi Udaya

ಅಲ್ಯೂಮಿನಿಯಂ ಏಣಿ ವಿದ್ಯುತ್ ತಂತಿಗೆ ತಾಗಿ ವಿದ್ಯುತ್ ಶಾಕ್: ತೋಟದಲ್ಲಿ ಸೊಪ್ಪು ಕಡಿಯಲು ಹೋಗಿದ್ದ ಬಾಲಕೃಷ್ಣ ಶೆಟ್ಟಿ ಮೃತ್ಯು

Suddi Udaya

ದ.ಕ. ಲೋಕಸಭಾ ಕ್ಷೇತ್ರದ ಚುನಾವಣಾ ಫಲಿತಾಂಶ: ಬಿಜೆಪಿ ಅಭ್ಯರ್ಥಿ ಬ್ರಿಜೇಶ್ ಚೌಟ 50453 ಅಂತರದಿಂದ ಭಾರಿ ಮುನ್ನಡೆ: ಕಾಂಗ್ರೆಸ್ ಅಭ್ಯರ್ಥಿ ಪದ್ಮರಾಜ್ ಪೂಜಾರಿ ಹಿನ್ನಡೆ

Suddi Udaya

ಬೆಳ್ತಂಗಡಿ ತಾಲೂಕಿನಲ್ಲಿ ಅಪಾಯಕಾರಿ ಸ್ಥಳಗಳಲ್ಲಿರುವ ಮನೆಗಳಲ್ಲಿರುವವರಿಗೆ ಗ್ರಾಮ ಪಂಚಾಯತಿನಿಂದ ನೋಟೀಸು

Suddi Udaya
error: Content is protected !!