ಹೊಸಂಗಡಿಯಲ್ಲಿ ಬೆಂಡೆ ಬೆಳೆಯಲ್ಲಿ ಸಮಗ್ರ ಬೆಳೆ ನಿರ್ವಹಣೆ ತರಬೇತಿ ಕಾರ್ಯಕ್ರಮ

Suddi Udaya

ಹೊಸಂಗಡಿ:ಕೃಷಿ ವಿಜ್ಞಾನ ಕೇಂದ್ರ, ಮಂಗಳೂರು ಇವರ ಆಶ್ರಯದಲ್ಲಿ, ಮುಂಚೂಣಿ ಪ್ರಾತ್ಯಕ್ಷಿಕೆ 2023 – 24 ಕಾರ್ಯಕ್ರಮದಡಿಯಲ್ಲಿ, ವಿಜಯ ಗ್ರಾಮ ಅಭಿವೃದ್ಧಿ ಪ್ರತಿಷ್ಠಾನ( ರಿ)ಮಂಗಳೂರು, ಗ್ರಾಮ ಸಮಿತಿ, ಹೊಸಂಗಡಿ ಮತ್ತು ಫ್ರೆಂಡ್ಸ್ ಕ್ಲಬ್ ( ರಿ) ಹೊಸಂಗಡಿ ಇವರ ಸಹಭಾಗಿತ್ವದೊಂದಿಗೆ, ಫ್ರೆಂಡ್ಸ್ ಕ್ಲಬ್ ಸಭಾಭವನ, ಹೊಸಂಗಡಿಯಲ್ಲಿ, ಬೆಂಡೆ ಬೆಳೆಯಲ್ಲಿ ಸಮಗ್ರ ಬೆಳೆ ನಿರ್ವಹಣೆ ತರಬೇತಿ ಕಾರ್ಯಕ್ರಮ ನಡೆಯಿತು.

ಕಾರ್ಯಕ್ರಮದಲ್ಲಿ ಕೃಷಿ ವಿಜ್ಞಾನ ಕೇಂದ್ರದ ತೋಟಗಾರಿಕಾ ವಿಜ್ಞಾನಿಗಳಾದ ಡಾ. ರಶ್ಮಿ ಆರ್. ರವರು ಭಾಗವಹಿಸಿ ಬೆಂಡೆ ಬೆಳೆಯ ಸಮಗ್ರ ನಿರ್ವಹಣೆಯ ಬಗ್ಗೆ ರೈತರಿಗೆ ಮಾಹಿತಿ ನೀಡಿದರು.

ಕಾರ್ಯಕ್ರಮದಲ್ಲಿ ಕೃಷಿ ವಿಜ್ಞಾನ ಕೇಂದ್ರದ ಸಸ್ಯ ಸಂರಕ್ಷಣಾ ವಿಜ್ಞಾನಿಗಳಾದ ಡಾ. ಕೇದಾರನಾಥ ಇವರು, ಬೆಂಡೆ ಗಿಡಗಳಿಗೆ ರೋಗ ಹರಡುವಿಕೆ, ಕೀಟನಾಶಕ ನಿರ್ವಹಣೆಗಳ ಬಗ್ಗೆ ಸಮಗ್ರ ಮಾಹಿತಿ ನೀಡಿದರು. ಕೃಷಿ ವಿಜ್ಞಾನ ಕೇಂದ್ರದ ಮಣ್ಣು ವಿಜ್ಞಾನಿಯಾದ ಮಲ್ಲಿಕಾರ್ಜುನ ಎಲ್. ಮಣ್ಣು ಸಂರಕ್ಷಣೆಯ ಬಗ್ಗೆ ಸಮಗ್ರ ಮಾಹಿತಿ ನೀಡಿದರು.

ಕಾರ್ಯಕ್ರಮದಲ್ಲಿ ಫ್ರೆಂಡ್ಸ್ ಕ್ಲಬ್ ಹೊಸಂಗಡಿ ಇದರ ಅಧ್ಯಕ್ಷರಾದ ಶ್ರೀಪತಿ ಉಪಧ್ಯಾಯ ಉಪಸ್ಥಿತರಿದ್ದರು.

ಕಾರ್ಯಕ್ರಮ ಸಂಯೋಜಕರಾದ ವಿಜಯ ಗ್ರಾಮ ಅಭಿವೃದ್ಧಿ ಪ್ರತಿಷ್ಠಾನ (ರಿ) ಮಂಗಳೂರು, ಗ್ರಾಮ ಸಮಿತಿ ಹೊಸಂಗಡಿ ಇದರ ಅಧ್ಯಕ್ಷರಾದ ಹರಿಪ್ರಸಾದ್ ಪಿ. ಇವರು ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು.

ಕಾರ್ಯಕ್ರಮದಲ್ಲಿ ಒಟ್ಟು 30 ರೈತರು ಭಾಗವಹಿಸಿದ್ದು, ಆಯ್ದ ಹತ್ತು ರೈತರಿಗೆ ಬೆಂಡೆ ಬೀಜ ಮತ್ತು ಕೃಷಿ ಪರಿಕರಗಳನ್ನು ವಿತರಿಸಲಾಯಿತು.

Leave a Comment

error: Content is protected !!