24 C
ಪುತ್ತೂರು, ಬೆಳ್ತಂಗಡಿ
April 3, 2025
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿ

ಕೊಕ್ರಾಡಿ ಬೊಳ್ಳಕುಮೇರುನಲ್ಲಿ ಸುಲ್ಕೇರಿ ನದಿಯಲ್ಲಿ ಅಕ್ರಮ ಮರಳು ದಂಧೆ ವೇಣೂರು ಪೊಲೀಸರ ದಾಳಿ – ಡ್ರಜ್ಜಿಂಗ್ ಮಿಶನ್ ವಶ ಇಬ್ಬರ ಮೇಲೆ ಪ್ರಕರಣ ದಾಖಲು

ಬೆಳ್ತಂಗಡಿ : ಕೊಕ್ರಾಡಿ ಗ್ರಾಮದ ಬೊಳ್ಳಕುಮೇರು ಎಂಬಲ್ಲಿ ಸುಲ್ಕೇರಿ ನದಿ ನೀರಿನಲ್ಲಿ ಡ್ರಜ್ಜಿಂಗ್ ಮಿಶನ್ ಅಳವಡಿಸಿ ಅಕ್ರಮವಾಗಿ ನಡೆಯುತ್ತಿದ್ದ ಮರಳು ದಂಧೆಯನ್ನು ವೇಣೂರು ಪೊಲೀಸರು ನ.20ರಂದು ಪತ್ತೆ ಹಚ್ಚಿದ್ದಾರೆ. ಅಬ್ಬಾಸ್ ಎಂಬುವರ ತೋಟದಲ್ಲಿ ಚಂದ್ರಶೇಖರ್ ಹೆಗ್ಡೆ ಎಂಬುವರು ಅಕ್ರಮವಾಗಿ ಮರಳುಗಾರಿಕೆ ಮಡುತ್ತಿದ್ದಾರೆ ಎಂಬ ಬಗ್ಗೆ ಖಚಿತ ಮಾಹಿತಿ ಮೇರೆಗೆ ರಾತ್ರಿ 9ಕ್ಕೆ ಪೊಲೀಸರು ಸ್ಥಳಕ್ಕೆ ದಾಳಿ ನಡೆಸಿದಾಗ ಆರೋಪಿತರುಗಳು ಅಕ್ರಮವಾಗಿ ಮರಳುಗಾರಿಕೆ ಮಾಡುತ್ತಿರುವುದು ಕಂಡುಬಂದಿತ್ತು .

ಡ್ರಜ್ಜಿಂಗ್ ಮಶಿನ್ ಅಳವಡಿಸಿದ ಸ್ಥಳದಲ್ಲಿ ನದಿಯ ನೀರು ಜಾಸ್ತಿ ಇದ್ದುದರಿಂದ ರಾತ್ರಿಯಾಗಿರುವುದರಿಂದ ಸದ್ರಿ ಮಿಶನ್ ಹಾಗೂ ಸೊತ್ತುಗಳನ್ನು ಸ್ವಾಧೀನ ಪಡಿಸಿಕೊಂಡು ಅಬ್ಬಾಸ್ಮತ್ತು ಚಂದ್ರಶೇಖರ ಹೆಗ್ಡ ವಿರುದ್ದ ಸ್ವ- ಪಿರ್ಯಾದಿಯನ್ನು ತಯಾರಿಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

Related posts

ಮದುವೆ ಸಮಾರಂಭದಲ್ಲಿ ಮಾದರಿ ಕಾರ್ಯ ವರನ ತಂದೆ ಮುಳುಗು ತಜ್ಞ ರಿಗೆ ಬಂಧು ಮಿತ್ರರಿಂದ ಸನ್ಮಾನ: ತನ್ನ ಪ್ರಾಯ ಲೆಕ್ಕಿಸದೆ ಇನ್ನೊಬ್ಬರ ಪ್ರಾಣ ರಕ್ಷಿಸುವ ಬಂದಾರು ಮಹಮ್ಮದರ ಸೇವೆ ಅನುಕರಣೀಯ :ಕೆ. ಎಂ.ಮುಸ್ತಫ

Suddi Udaya

ಕನ್ಯಾಡಿ ಗ್ರಾಮದ ಪಾರ್ನಡ್ಕ ದಲ್ಲಿ ದಿ| ರಾಜೇಂದ್ರ ಎಸ್ ಸುರಕ್ಕ್ಯೆಗುತ್ತು ಇವರ ಸ್ಮರಣಾರ್ಥ ಬಸ್ ತಂಗುದಾಣ ಉದ್ಘಾಟನೆ

Suddi Udaya

ಮೂಡುಕೋಡಿ: ನಡ್ತಿಕಲ್ಲು ಶ್ರೀ ರಾಮ ಮಹಿಳಾ ಸಮಿತಿಯಿಂದ ವರಮಹಾಲಕ್ಷ್ಮೀ ಪೂಜೆ

Suddi Udaya

ತಾಲೂಕಿನಲ್ಲಿ ಹದಗೆಟ್ಟಿರುವ ರಸ್ತೆ ಗುಂಡಿ ಮುಚ್ಚಲು ಗುತ್ತಿಗೆದಾರರೇ ಹಿಂದೇಟು: ಸಾಮಾಜಿಕ ಜಾಲ ತಾಣಗಳಲ್ಲಿ ಪೋಸ್ಟ್ ವೈರಲ್

Suddi Udaya

ತಾಲೂಕು ಮಟ್ಟದ ವಾಲಿಬಾಲ್ ಪಂದ್ಯಾಟ:‌ ಬಂದಾರು ಶಾಲೆಯ ವಿದ್ಯಾರ್ಥಿಗಳು ಪ್ರಥಮ ಸ್ಥಾನ

Suddi Udaya

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಕಂಪ್ಯೂಟರ್ ತರಬೇತಿಯ ಪ್ರಮಾಣ ಪತ್ರ ವಿತರಣೆ

Suddi Udaya
error: Content is protected !!