27.9 C
ಪುತ್ತೂರು, ಬೆಳ್ತಂಗಡಿ
March 6, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿ

ಬೆಳ್ತಂಗಡಿ ತಹಸೀಲ್ದಾರ್ ಪೃಥ್ವಿ ಸಾನಿಕಂ ಅಧಿಕಾರ ಸ್ವೀಕಾರ

ಬೆಳ್ತಂಗಡಿ: ಬೆಳ್ತಂಗಡಿ ತಾಲೂಕು ತಹಶೀಲ್ದಾರ್ ಆಗಿ ಪೃಥ್ವಿ ಸಾನಿಕಂ ಬುಧವಾರ ಅಧಿಕಾರ ಸ್ವೀಕರಿಸಿದರು.

ಈ ಹಿಂದೆಯೂ ಬೆಳ್ತಂಗಡಿ ತಾಲೂಕಿನ ತಹಸೀಲ್ದಾರ್ ಆಗಿ ಕಾರ್ಯನಿರ್ವಹಿಸಿದ್ದ ಅವರು ಮತ್ತೆ ಇಲ್ಲಿಗೆ ವರ್ಗಾವಣೆಗೊಂಡಿದ್ದಾರೆ.

ಪೃಥ್ವಿ ಸಾನಿಕಂ ಅವರು 2022ರ ಜೂನ್ 28ರಿಂದ 2023ರ ಫೆಬ್ರವರಿ 2ರವರೆಗೆ ಕಾರ್ಯ ನಿರ್ವಹಿಸಿದ್ದರು.ಬಳಿಕ ವಿಧಾನಸಭಾ ಚುನಾವಣೆಯ ಹಿನ್ನೆೆಲೆಯಲ್ಲಿ ಹರಿಹರಕ್ಕೆ ವರ್ಗಾವಣೆಗೊಂಡಿದ್ದರು. ಇವರ ವರ್ಗಾವಣೆಯ ಬಳಿಕ ಸಚ್ಚಿದಾನಂದ ಎಸ್. ಕುಚನೂರು ಬಳಿಕ ಟಿ.ಸುರೇಶ್ ಕುಮಾರ್ ಕಾರ್ಯ ನಿರ್ವಹಿಸುತ್ತಿದ್ದರು. ಪೃಥ್ವಿ ಸಾನಿಕಂ ಅವರು ಬೆಳ್ತಂಗಡಿಯಲ್ಲಿ ತಾಲೂಕು ತಹಸೀಲ್ದಾರ್ ಮತ್ತು ದಂಡಾಧಿಕಾರಿಯಾಗಿ ಕಾರ್ಯ ನಿರ್ವಹಿಸಲಿದ್ದಾಾರೆ. ಬೆಳ್ತಂಗಡಿ ತಾಲೂಕಿನ 52ನೇ ತಹಸೀಲ್ದಾರ್ ಆಗಿ ಕಾರ್ಯ ನಿರ್ವಹಿಸಲಿರುವ ಚಿತ್ರದುರ್ಗ ಜಿಲ್ಲೆೆಯ ಪೃಥ್ವಿ ಸಾನಿಕಂ ಅವರು ಬೆಳ್ತಂಗಡಿ ಪಟ್ಟಣ ಪಂಚಾಯಿತಿಯ ಆಡಳಿತಾಧಿಕಾರಿಯೂ ಆಗಿದ್ದಾರೆ. ನಿರ್ಗಮಿತ ತಹಸೀಲ್ದಾರ್ ಟಿ.ಸುರೇಶ್ ಕುಮರ್ ಅವರು ಪೃಥ್ವಿ ಸಾನಿಕಂ ಅವರಿಗೆ ಅಧಿಕಾರ ಹಸ್ತಾಂತರಿಸಿದರು.

Related posts

ಶ್ರೀ ಧ. ಮಂ. ಕಾಲೇಜಿನಲ್ಲಿ ತುಳು ಜಾನಪದ ಮಹಾಕವಿ ಮಾಚಾರ್ ಗೋಪಾಲ ನಾಯ್ಕ ಸಂಸ್ಮರಣೆ ಮತ್ತು ತುಳುವ ಮೌಖಿಕ ಪರಂಪರೆ ವಿಷಯದ ಕುರಿತು ವಿಶೇಷ ಉಪನ್ಯಾಸ

Suddi Udaya

ಯಶೋಧ ಕೃಷ್ಣ ವೀಡಿಯೋ ಸ್ಪರ್ಧೆ: ಕಲ್ಮಂಜದ ರಿದ್ವಿ ಡಿ.ಆರ್ ಹಾಗೂ ಭಕ್ತಿ ಜಿ. ವಿನ್ನರ್

Suddi Udaya

ಅಳದಂಗಡಿ ಆಮಂತ್ರಣ ಸೇವಾ ಪ್ರತಿಷ್ಠಾನದ ಉದ್ಘಾಟನಾ ಸಮಾರಂಭದ ಆಮಂತ್ರಣ ಪತ್ರಿಕೆ ಬಿಡುಗಡೆ

Suddi Udaya

ಗುರಿಪಳ್ಳ: ವಿದ್ಯುತ್ ಶಾಕ್ ಹೊಡೆದು ವ್ಯಕ್ತಿ ಸಾವು

Suddi Udaya

ಚಾರ್ಮಾಡಿ ಘಾಟಿ: ಅರಣ್ಯ ಇಲಾಖೆ ಗಸ್ತು

Suddi Udaya

ಉಜಿರೆ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಅನುದಾನಿತ ಹಿರಿಯ ಪ್ರಾಥಮಿಕ ಶಾಲಾ ಶತಮಾನೋತ್ಸವ ಸಂಭ್ರಮ

Suddi Udaya
error: Content is protected !!