26.3 C
ಪುತ್ತೂರು, ಬೆಳ್ತಂಗಡಿ
May 18, 2025
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿವರದಿ

ಬೆಳ್ತಂಗಡಿ: ಕೇಂದ್ರ ಸರಕಾರದ ವಿದ್ಯುತ್ ಖಾಸಗೀಕರಣ ವಿರೋಧಿಸಿ ಮೆಸ್ಕಾಂ ಕಚೇರಿ ಎದುರು ಪ್ರತಿಭಟನೆ

ಬೆಳ್ತಂಗಡಿ: ವಿದ್ಯುತ್ ಖಾಸಗೀಕರಣ ನಿಲ್ಲಿಸಿ ವಿದ್ಯುತ್ ತಿದ್ದುಪಡಿ ಮಸೂದೆ 2022 ನ್ನು ಹಿಂಪಡೆಯಿರಿ ಎಂದು ವಿದ್ಯುತ್ ಮಾರಾಟ ಮಾಡುವ ಕೇಂದ್ರ ಸರಕಾರ ಜನವಿರೋಧಿ ಧೋರಣೆ ಖಂಡಿಸಿ ಸಮಾನ ಮನಸ್ಕ ಸಂಘಟನೆಗಳ, ಸಮಾನ ಮನಸ್ಕ ರಾಜಕೀಯ ಪಕ್ಷಗಳ ನೇತೃತ್ವದಲ್ಲಿ ಜಂಟಿ ಪ್ರತಿಭಟನೆಯು ನ.22 ರಂದು ಮೆಸ್ಕಾಂ ಕಚೇರಿ ಎದುರು ನಡೆಯಿತು.

ಬೆಳ್ತಂಗಡಿ ನಿಲ್ದಾಣದಿಂದ ಮೆಸ್ಕಾಂ ಕಚೇರಿ ತನಕ ಕೇಂದ್ರ ಸರಕಾರ ನಡೆಯನ್ನು ಖಂಡಿಸಿ ಕಾಲ್ನಡಿಗೆ ಜಾಥಾ ನಡೆಯಿತು.

ನಂತರ ಮೆಸ್ಕಾಂ ಇಲಾಖೆಯ ಪ್ರಭಾರ ಎಇಇ ಕ್ಲೆಮೆಂಟ್ ಬೆಂಜಮಿನ್ ಬ್ರಕ್ಸ್ ರವರ್ ಮೂಲಕ ಮನವಿಯನ್ನು ಪ್ರಧಾನಿ ಮೋದಿಯವರಿಗೆ ಸಲ್ಲಿಸಲಾಯಿತು.

ಈ ಸಂದರ್ಭದಲ್ಲಿ ಮಾಜಿ ಶಾಸಕ ವಸಂತ ಬಂಗೇರ, ಸಿಪಿಎಂ ಮುಖಂಡ ಬಿ.ಎಂ ಭಟ್, ಬ್ಲಾಕ್ ಕಾಂಗ್ರೆಸ್ ಉಭಯ ಘಟಕದ ಅಧ್ಯಕ್ಷರುಗಳಾದ ನಾಗೇಶ್, ಸತೀಶ್ ಕಾಶಿಪಟ್ಣ , ಜಯವಿಕ್ರಮ ಕಲ್ಲಾಪು, ಉಷಾ ಶರತ್, ಧರಣೇಂದ್ರ ಕುಮಾರ್, ಕರ್ನಾಟಕ ರೈತ ಸಂಘದ ಸಂಚಾಲಕ ಆದಿತ್ಯ ನಾರಾಯಣ್ ಕೊಲ್ಲಾಜೆ, ಕಾಂಗ್ರೇಸ್ ಪಕ್ಷದ ವಿವಿಧ ಘಟಕದ ಅಧ್ಯಕ್ಷರುಗಳು, ಸದಸ್ಯರು ಉಪಸ್ಥಿತರಿದ್ದರು.

Related posts

ಪತ್ನಿ-ಮಗಳ ಮೇಲೆ ಪತಿಯಿಂದ ಮಾರಾಣಾಂತಿಕ ಹಲ್ಲೆ: ಇಬ್ಬರು ಆಸ್ಪತ್ರೆಗೆ ದಾಖಲು: ಪೊಲೀಸರ ತನಿಖೆ

Suddi Udaya

ಬೆಳ್ತಂಗಡಿ ರಬ್ಬರ್ ಟ್ಯಾಪರ್ಸ್ ಮತ್ತು ಕೃಷಿ ಮಜ್ದೂರ್ ಸಂಘದ ಸಭೆ: ನೂತನ ಸಮಿತಿ ರಚನೆ

Suddi Udaya

ಉಜಿರೆ-ಉಪ್ಪಿನಂಗಡಿ ಶ್ರೀ ದುರ್ಗಾ ಟೆಕ್ಸ್‌ಟೈಲ್ಸ್‌ನಲ್ಲಿ ಬೃಹತ್ ಸಾರಿ ಮೇಳ: ಸೀರೆಗಳ ಮೇಲೆ ಶೇ.50 ಡಿಸ್ಕೌಂಟ್: ಕೆಲವೇ ದಿನಗಳು ಮಾತ್ರ

Suddi Udaya

ಮುಂಡಾಜೆ ಅಂಗನವಾಡಿಗೆ ಲಯನ್ಸ್ ಕ್ಲಬ್ ನಿಂದ ಚಾಪೆ ಕೊಡುಗೆ

Suddi Udaya

ಕೊಕ್ಕಡ: ಶ್ರೀ ಕ್ಷೇತ್ರ ಸೌತಡ್ಕ ದೇವಸ್ಥಾನದ ಆಸ್ತಿ ಉಳಿಸಲು ಅನಿರ್ದಿಷ್ಟಾವಧಿ ಧರಣಿ ಸತ್ಯಾಗ್ರಹ

Suddi Udaya

ಧರ್ಮಸ್ಥಳ-ಮಂಗಳೂರು ವೇಗದೂತ ಬಸ್ಸಿನ ಬೇಡಿಕೆಗಾಗಿ ರಾಜ್ಯ ಸಾರಿಗೆ ಅಧಿಕಾರಿಗಳನ್ನು ಭೇಟಿಯಾದ ಎಸ್‌ಡಿಪಿಐ ಬೆಳ್ತಂಗಡಿ ನಿಯೋಗ

Suddi Udaya
error: Content is protected !!