24 C
ಪುತ್ತೂರು, ಬೆಳ್ತಂಗಡಿ
April 3, 2025
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿ

ಬೆಳ್ತಂಗಡಿ ತಹಸೀಲ್ದಾರ್ ಪೃಥ್ವಿ ಸಾನಿಕಂ ಅಧಿಕಾರ ಸ್ವೀಕಾರ

ಬೆಳ್ತಂಗಡಿ: ಬೆಳ್ತಂಗಡಿ ತಾಲೂಕು ತಹಶೀಲ್ದಾರ್ ಆಗಿ ಪೃಥ್ವಿ ಸಾನಿಕಂ ಬುಧವಾರ ಅಧಿಕಾರ ಸ್ವೀಕರಿಸಿದರು.

ಈ ಹಿಂದೆಯೂ ಬೆಳ್ತಂಗಡಿ ತಾಲೂಕಿನ ತಹಸೀಲ್ದಾರ್ ಆಗಿ ಕಾರ್ಯನಿರ್ವಹಿಸಿದ್ದ ಅವರು ಮತ್ತೆ ಇಲ್ಲಿಗೆ ವರ್ಗಾವಣೆಗೊಂಡಿದ್ದಾರೆ.

ಪೃಥ್ವಿ ಸಾನಿಕಂ ಅವರು 2022ರ ಜೂನ್ 28ರಿಂದ 2023ರ ಫೆಬ್ರವರಿ 2ರವರೆಗೆ ಕಾರ್ಯ ನಿರ್ವಹಿಸಿದ್ದರು.ಬಳಿಕ ವಿಧಾನಸಭಾ ಚುನಾವಣೆಯ ಹಿನ್ನೆೆಲೆಯಲ್ಲಿ ಹರಿಹರಕ್ಕೆ ವರ್ಗಾವಣೆಗೊಂಡಿದ್ದರು. ಇವರ ವರ್ಗಾವಣೆಯ ಬಳಿಕ ಸಚ್ಚಿದಾನಂದ ಎಸ್. ಕುಚನೂರು ಬಳಿಕ ಟಿ.ಸುರೇಶ್ ಕುಮಾರ್ ಕಾರ್ಯ ನಿರ್ವಹಿಸುತ್ತಿದ್ದರು. ಪೃಥ್ವಿ ಸಾನಿಕಂ ಅವರು ಬೆಳ್ತಂಗಡಿಯಲ್ಲಿ ತಾಲೂಕು ತಹಸೀಲ್ದಾರ್ ಮತ್ತು ದಂಡಾಧಿಕಾರಿಯಾಗಿ ಕಾರ್ಯ ನಿರ್ವಹಿಸಲಿದ್ದಾಾರೆ. ಬೆಳ್ತಂಗಡಿ ತಾಲೂಕಿನ 52ನೇ ತಹಸೀಲ್ದಾರ್ ಆಗಿ ಕಾರ್ಯ ನಿರ್ವಹಿಸಲಿರುವ ಚಿತ್ರದುರ್ಗ ಜಿಲ್ಲೆೆಯ ಪೃಥ್ವಿ ಸಾನಿಕಂ ಅವರು ಬೆಳ್ತಂಗಡಿ ಪಟ್ಟಣ ಪಂಚಾಯಿತಿಯ ಆಡಳಿತಾಧಿಕಾರಿಯೂ ಆಗಿದ್ದಾರೆ. ನಿರ್ಗಮಿತ ತಹಸೀಲ್ದಾರ್ ಟಿ.ಸುರೇಶ್ ಕುಮರ್ ಅವರು ಪೃಥ್ವಿ ಸಾನಿಕಂ ಅವರಿಗೆ ಅಧಿಕಾರ ಹಸ್ತಾಂತರಿಸಿದರು.

Related posts

ಶಾಸಕ ಹರೀಶ್ ಪೂಂಜರ ನೇತೃತ್ವದಲ್ಲಿ ಬಿಜೆಪಿ ಶಾಸಕರ ಹೋರಾಟ ಯಶಸ್ವಿ -ಕಳೆಂಜ ದೇವಣ್ಣ ಗೌಡರ ಮನೆ ತೆರವು ಅರಣ್ಯ ಇಲಾಖೆಯ ಪ್ರಯತ್ನ ವಿಫಲ – ಜಂಟಿ ಸರ್ವೆಗೆ ಸಮ್ಮತಿ: ಸರ್ವೆ ನಡೆಸುವವರೆಗೆ ಯಥಾ ಸ್ಥಿತಿ ಮುಂದುವರಿಕೆ

Suddi Udaya

ನಾವೂರು: ಸುಳ್ಯೋಡಿ ಸ.ಕಿ.ಪ್ರಾ. ಶಾಲಾ ವಾರ್ಷಿಕೋತ್ಸವದ ಆಮಂತ್ರಣ ಪತ್ರಿಕೆ ಬಿಡುಗಡೆ

Suddi Udaya

ಅಂತಾರಾಷ್ಟ್ರೀಯ ಕಾರ್ಮಿಕರ ದಿನಾಚರಣೆಯ ಮಹತ್ವ ಮತ್ತು ಕಾನೂನು ಅರಿವು ಕಾರ್ಯಕ್ರಮ

Suddi Udaya

ಆ.2 : ವೇಣೂರು ವಿದ್ಯುತ್ ನಿಲುಗಡೆ

Suddi Udaya

ಉಮಾಮಹೇಶ್ವರ ಭಜನಾ ಮಂಡಳಿಯ ಸುವರ್ಣ ಮಹೋತ್ಸವದ ಸವಿನೆನಪಿಗಾಗಿ ಕಿರಿಯಾಡಿ ವೃತ್ತ ಲೋಕಾರ್ಪಣೆ

Suddi Udaya

ಎಂಡೋ ಸಲ್ಫಾನ್ ಪಾಲನಾ ಕೇಂದ್ರ ಹಾಗೂ ಕೊಕ್ಕಡ, ಹಳ್ಳಿಂಗೇರಿ, ಸೌತಡ್ಕ ಕಿ.ಪ್ರಾ. ಶಾಲಾ ವಿದ್ಯಾರ್ಥಿಗಳಿಗೆ ಕೊಡೆ ಹಾಗೂ ಹಣ್ಣು ಹಂಪಲು ಗಿಡ ವಿತರಣೆ

Suddi Udaya
error: Content is protected !!