April 2, 2025
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿವರದಿ

ಚಿಕ್ಕಮಗಳೂರಿನಲ್ಲಿ ಕಳ್ಳತನವಾದ ಓಮಿನಿ ಕಾರು ಉಜಿರೆಯಲ್ಲಿ ಪತ್ತೆ: ಮಾಲೀಕನ ಸ್ನೇಹಿತರ ಮೂಲಕ 10 ದಿನದಲ್ಲಿ ಕಾರು ಪತ್ತೆ

ಬೆಳ್ತಂಗಡಿ : ಚಿಕ್ಕಮಗಳೂರು ನಗರ ಪೊಲೀಸ್ ಠಾಣಾ ವ್ಯಾಪ್ತಿಯಿಂದ ಕಳ್ಳತನವಾಗಿದ್ದ ಓಮಿನಿ ಕಾರು ಉಜಿರೆಯ ಟಿ.ಬಿ.ಕ್ರಾಸ್ ನಲ್ಲಿ ನ.21 ರಂದು ಸಂಜೆ ಪತ್ತೆಯಾಗಿದೆ. ಬೆಳ್ತಂಗಡಿ ಸಂಚಾರಿ ಪೊಲೀಸರು ಓಮಿನಿ ಕಾರನ್ನು ಚಿಕ್ಕಮಗಳೂರು ನಗರ ಪೊಲೀಸರ ವಶಕ್ಕೆ ನೀಡಿದ್ದಾರೆ.

ಚಿಕ್ಕಮಗಳೂರು ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಿಲ್ಲಿಸಿದ KA-05-Z-7189 ಸಂಖ್ಯೆಯ ಓಮಿನಿ ಕಾರನ್ನು ನ.11 ರಂದು ಯಾರೋ ಕಳ್ಳರು ಕಳ್ಳತನ ಮಾಡಿದ್ದರು. ಈ ಬಗ್ಗೆ ಕಾರು ಮಾಲೀಕ ವೆಂಕಟೇಶ್ ಚಿಕ್ಕಮಗಳೂರು ನಗರ ಠಾಣೆಗೆ ದೂರು ನೀಡಿದ್ದರು. ಬಳಿಕ ಕಾರಿನ ಬಗ್ಗೆ ಮಾಲೀಕ ಸ್ನೇಹಿತರ ಮುಖಾಂತರ ಎಲ್ಲಾ ಕಡೆ ಸಾಮಾಜಿಕ ಜಾಲತಾಣಗಳಲ್ಲಿ ಕಳ್ಳತನವಾಗಿದ್ದ ಕಾರಿನ ಬಗ್ಗೆ ಮಾಹಿತಿ ಹಂಚಿಕೊಂಡಿದ್ದರು. ನ.21 ರಂದು ಸಂಜೆ ಉಜಿರೆಯ ಟಿ.ಬಿ.ಕ್ರಾಸ್ ಬಳಿಯ ರಸ್ತೆ ಬದಿಯಲ್ಲಿ ಧೂಳು ಹಿಡಿದ ರೀತಿಯಲ್ಲಿ ನಿಲ್ಲಿಸಿದ್ದು ಮಾಲೀಕನ ಸ್ನೇಹಿತರಿಗೆ ಕಂಡಿದ್ದು ತಕ್ಷಣ ಮಾಲೀಕರಿಗೆ ಕರೆ ಮಾಡಿ ಮಾಹಿತಿ ನೀಡಿದ್ದರು.

ಚಿಕ್ಕಮಗಳೂರು ನಗರ ಪೊಲೀಸರಿಗೆ ಮಾಲೀಕ ಮಾಹಿತಿ ನೀಡಿ ನಂತರ ಸ್ಥಳಕ್ಕೆ ಬಂದು ಬೆಳ್ತಂಗಡಿ ಸಂಚಾರಿ ಪೊಲೀಸರ ವಶಕ್ಕೆ ನೀಡಿದ್ದರು.ನಂತರ ಕಾನೂನು ಪ್ರಕ್ರಿಯೆ ಪೂರ್ತಿಗೊಳಿಸಲು ಚಿಕ್ಕಮಗಳೂರು ನಗರ ಪೊಲೀಸ್ ಠಾಣೆಗೆ ತೆಗೆದುಕೊಂಡು ಹೋಗಿ ನ.22 ರಂದು ಮಾಲೀಕ ವೆಂಕಟೇಶ್ ನೀಡಿದ್ದಾರೆ. ಕಾರು ಕಳ್ಳತನವಾದ ಬಳಿಕ ದೂರು ನೀಡಿ ಮಾಲೀಕನ ಕೆಲಸದ ನಡುವೆಯೂ ಕಠಿಣ ಶ್ರಮದಿಂದ ಗೆಳೆಯರ ಮೂಲಕ 10 ದಿನದಲ್ಲಿ ಓಮಿನಿ ಕಾರನ್ನು ಪತ್ತೆಹಚ್ಚಿ ಸಹಸ ಮೇರೆದಿದ್ದಾರೆ ವೆಂಕಟೇಶ್.

Related posts

ಶಿರ್ಲಾಲು: ಬಸ್ಸ್ ಚಾಲಕ, ಯುವಕ ಶಶಿಧರ ದೇವಾಡಿಗ ನಿಧನ

Suddi Udaya

ಬಳಂಜ ಬ್ರಹ್ಮಶ್ರೀ ನಾರಾಯಣ ಗುರು ಸೇವಾ ಸಮಿತಿಯ ಧತ್ತಿ ನಿಧಿಯಿಂದ ಉಚಿತ ಪುಸ್ತಕ ವಿತರಣೆ

Suddi Udaya

ಕಿಲ್ಲೂರು ನಿವಾಸಿ ರಾಯಿ ಶ್ರೀ ನಾಗಭೂಷಣ್ ರಾವ್ ನಿಧನ

Suddi Udaya

ತಾಲೂಕಿನ ಮೂರು ಮಂದಿಗೆ ಜಿಲ್ಲಾ ಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿ

Suddi Udaya

ಎಸ್‌ಡಿಪಿಐ ಬೆಳ್ತಂಗಡಿ ಕ್ಷೇತ್ರ ಸಮಿತಿ ಮಾಸಿಕ ಸಭೆ

Suddi Udaya

ಎಸ್ ಸಿಡಿಸಿಸಿ ಬ್ಯಾಂಕ್‌ ಅಧ್ಯಕ್ಷ ಡಾ| ಎಂ.ಎನ್. ರಾಜೇಂದ್ರ ಕುಮಾರ್ ರವರಿಗೆ ‘ಸಹಕಾರ ಭೂಷಣ’ ಪ್ರಶಸ್ತಿ

Suddi Udaya
error: Content is protected !!