ಸರಕಾರದಿಂದ 2024ರ ಸಾರ್ವತ್ರಿಕ ರಜೆ ದಿನ ಪ್ರಕಟ

Suddi Udaya

2024ನೇ ಸಾಲಿನ ಸಾರ್ವತ್ರಿಕ ರಜಾ ದಿನಗಳ ಪಟ್ಟಿಯನ್ನು ಸರಕಾರ ಪ್ರಕಟಿಸಿದೆ. ಒಟ್ಟು 21 ಸರಕಾರಿ ರಜೆ ದಿನಗಳನ್ನು ಮಂಜೂರು ಮಾಡಿದ್ದು, ಈ ರಜಾಪಟ್ಟಿಯಲ್ಲಿ ಎ.14 ರ ರವಿವಾರ ಬರುವ ಡಾ| ಬಿ.ಆರ್. ಅಂಬೇಡ್ಕರ್ ಜಯಂತಿ, ಎ.21ರ ರವಿವಾರದ ಮಹಾವೀರ ಜಯಂತಿ ಹಾಗೂ ಅ.12ರ ಎರಡನೇ ಶನಿವಾರದಂದು ಬರುವ ವಿಜಯ ದಶಮಿಯ ರಜೆಯನ್ನು ಸೇರಿಸಿಲ್ಲ.

ಜ.15ರ ಸೋಮವಾರ ಮಕರ ಸಂಕ್ರಾಂತಿ, ಜ.26ರ ಶುಕ್ರವಾರ ಗಣರಾಜ್ಯೋತ್ಸವ, ಮಾ.8ರ ಶುಕ್ರವಾರ ಮಹಾಶಿವರಾತ್ರಿ, ಮಾ.29ರ ಶುಕ್ರವಾರ ಗುಡ್‌ ಫ್ರೈಡೆ, ಎ.9ರ ಮಂಗಳವಾರ ಯುಗಾದಿ ಹಬ್ಬ ಎ. 11ರ ಗುರುವಾರ ರಂಜಾನ್ ಹಬ್ಬ, ಮೇ 1ರ ಬುಧವಾರ ಕಾರ್ಮಿಕರ ದಿನಾಚರಣೆ, ಮೇ 10ರ ಶುಕ್ರವಾರ ಬಸವ ಜಯಂತಿ, ಅಕ್ಷಯ ತೃತೀಯ, ಜೂ.17ರ ಸೋಮವಾರ ಬಕ್ರೀದ್, ಜು.17ರ ಬುಧವಾರ ಮೊಹರಂ, ಆ.15ರ ಗುರುವಾರ ಸ್ವಾತಂತ್ರ್ಯ ದಿನಾಚರಣೆ.

ಸೆ.7ರ ಶನಿವಾರ ವರಸಿದ್ಧಿ ವಿನಾಯಕ ವ್ರತ, ಸೆ.16ರ ಸೋಮವಾರ ಈದ್-ಮಿಲಾದ್, ಅ.2ರ ಬುಧವಾರ ಗಾಂಧಿ ಜಯಂತಿ, ಮಹಾಲಯ ಅಮಾವಾಸ್ಯೆ, ಅ.11ರ ಶುಕ್ರವಾರ ಮಹಾನವಮಿ, ಆಯುಧ ಪೂಜೆ, ಅ.17ರ ಗುರುವಾರ ಮಹರ್ಷಿ ವಾಲ್ಮೀಕಿ ಜಯಂತಿ.

ಅ.31ರ ಗುರುವಾರ ನರಕ ಚತುರ್ದಶಿ ನ.1ರ ಶುಕ್ರವಾರ ಕನ್ನಡ ರಾಜ್ಯೋತ್ಸವ, ನ.2ರ ಶನಿವಾರ ಬಲಿ ಪಾಡ್ಯಮಿ, ದೀಪಾವಳಿ, ನ.18ರ ಸೋಮವಾರ ಕನಕದಾಸ ಜಯಂತಿ, ಡಿ.25ರ ಬುಧವಾರ ಕ್ರಿಸ್‌ಮಸ್.

Leave a Comment

error: Content is protected !!