ಬೆಳ್ತಂಗಡಿ: ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಸ್ಥಳೀಯ ಸಂಸ್ಥೆಯಿಂದ ದ್ವಿತೀಯ ಸೋಪಾನ, ಗರಿ, ಚರಣ ಪರೀಕ್ಷೆ

Suddi Udaya

ಬೆಳ್ತಂಗಡಿ : ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಸ್ಥಳೀಯ ಸಂಸ್ಥೆ ಬೆಳ್ತಂಗಡಿ ವತಿಯಿಂದ ದ್ವಿತೀಯ ಸೋಪಾನ, ಗರಿ, ಚರಣ ಪರೀಕ್ಷೆಯು ವಾಣಿ ಆಂಗ್ಲ ಮಾಧ್ಯಮ ಶಾಲೆ ಬೆಳ್ತಂಗಡಿಯಲ್ಲಿ ನಡೆಯಿತು. ವಾಣಿ ಆಂಗ್ಲಮಾಧ್ಯಮ ಶಾಲೆ, ಬೆಳ್ತಂಗಡಿಯ ಮುಖ್ಯ ಶಿಕ್ಷಕರಾದ ಲಕ್ಷ್ಮಿನಾರಾಯಣ ಕೆ. ಮಕ್ಕಳಿಗೆ ಪರೀಕ್ಷಾ ಪತ್ರಿಕೆಯನ್ನು ಕೊಟ್ಟು ಪರೀಕ್ಷಾ ಶಿಬಿರವನ್ನು ಉದ್ಘಾಟಿಸಿ , ಮಕ್ಕಳಿಗೆ ಶುಭ ಹಾರೈಸಿದರು.


ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಸ್ಥಳೀಯ ಸಂಸ್ಥೆಯ ಅಧ್ಯಕ್ಷರಾದ ಪದ್ಮ ಕುಮಾರ್ ಆಗಮಿಸಿ ಮಕ್ಕಳಿಗೆ ಶುಭ ಕೋರಿದರು. ಸಂಸ್ಥೆಯ ಕೋಶಾಧಿಕಾರಿ ಬೆಳಿಯಪ್ಪ ಕೆ ಯವರು ಉಪಸ್ಥಿತರಿದ್ದರು. ಶಿಬಿರದ ನಾಯಕತ್ವ ವಿನ್ಸೆಂಟ್ ಸಿಕ್ವೇರಾ ( HWB) ವಹಿಸಿದ್ದರು. ಸ್ಥಳೀಯ ಸಂಸ್ಥೆಯ ಕಾರ್ಯದರ್ಶಿ ಪ್ರಮೀಳಾ ರವರ ನೇತೃತ್ವದಲ್ಲಿ ನಡೆದಂತಹ ಪರೀಕ್ಷಾ ಶಿಬಿರದಲ್ಲಿ ಸುಮಾರು 370 ಕಬ್ಸ್, ಬುಲ್ ಬುಲ್ಸ್, ಸ್ಕೌಟ್ಸ್ ಗೈಡ್ಸ್ ವಿದ್ಯಾರ್ಥಿಗಳು ಭಾಗವಹಿಸಿದ್ದರು.
ಎಸ್ ಡಿ ಎಂ ಬೆಳ್ತಂಗಡಿ, ವಾಣಿ ಆಂಗ್ಲ ಮಾಧ್ಯಮ ಶಾಲೆ, ಬೆಳ್ತಂಗಡಿ, ಸೈಂಟ್ ತೆರೇಸಾ ಬೆಳ್ತಂಗಡಿ, ಸೈಂಟ್ ಮೇರಿಸ್ ಆಂಗ್ಲ ಮಾಧ್ಯಮ ಶಾಲೆ ಬೆಳ್ತಂಗಡಿ, ಎಸ್ ಡಿ ಎಂ . ಸಿ ಬಿ ಎಸ್ ಸಿ ಉಜಿರೆ, ಎಸ್ ಡಿ ಎಂ ಧರ್ಮಸ್ಥಳ, ಅನುಗ್ರಹ ಆಂಗ್ಲ ಮಾಧ್ಯಮ ಶಾಲೆ ಉಜಿರೆ ವಿದ್ಯಾರ್ಥಿಗಳು ಭಾಗವಹಿಸಿದ್ದರು. ಸ್ಕೌಟ್ಸ್ ಮತ್ತು ಗೈಡ್ಸ್ ಶಿಕ್ಷಕರಾದ ಗೈಡರ್ ಉಮ್ಮಕ್ಕ ಸಂತ ತೆರೇಸಾ, ಗೈಡರ್ ಸುಮಲತಾ ವಾಣಿ ಆಂಗ್ಲ ಮಾಧ್ಯಮ ಶಾಲೆ, ಗೈಡರ್ ನಿಶಾ ಭಿ , ಕುಸುಮ , ಕುಸುಮ ಕೆ ಶ್ರೀಜಾ ಪಿ. ಎಸ್ ಸೈಂಟ್ ಮೇರಿಸ್ ಆಂಗ್ಲ ಮಾಧ್ಯಮ ಶಾಲೆ ಬೆಳ್ತಂಗಡಿ, ರವಿಕುಮಾರ್ ಅನುಗ್ರಹ ಆಂಗ್ಲ ಮಾಧ್ಯಮ ಶಾಲೆ ಉಜಿರೆ, ಮಮತಾ ಎಲ್, ಉಷಾ ಕೆ, ಸ್ವಾತಿ, ಗೀತಾ, ಎಸ್ ಡಿ. ಎಂ ಸಿಬಿಎಸ್‌ಸಿ ಉಜಿರೆ, ಗೀತಾ ಕೆ ಎಸ್ ಡಿ ಎಂ ಧರ್ಮಸ್ಥಳ ಇವರುಗಳು ಶಿಬಿರದ ಸಹಾಯಕರಾಗಿ ಭಾಗವಹಿಸಿದ್ದರು.

ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಪದವಿ ಕಾಲೇಜು ಉಜಿರೆಯ ರಾಜ್ಯ ಪುರಸ್ಕೃತ ರೋವರ್ ವಿದ್ಯಾರ್ಥಿಗಳಾದ ಸಾತ್ವಿಕ್, ಹರ್ಷ, ಪೃತ್ವಿಕ್, ಪವನ್, ಸುಚಿತ್,  ಶಶಾಂಕ್ ಬಿಜೆ  ಶಿಬಿರದ ಸಹಾಯಕರಾಗಿ ಭಾಗವಹಿಸಿದ್ದರು. ವಾಣಿ ಪದವಿ ಪೂರ್ವ ಕಾಲೇಜಿನ  ಯಶ್ಮಿತಾ, ಸಿಂಚನ, ಚಿತ್ರ ಭವ್ಯ, ಗ್ರೀಷ್ಮ, ಹಸ್ತ, ಪ್ರಜ್ವಲ್ , ಚಿನ್ಮಯ್ , ಕೌಶಿಕ್  ರೋವರ್ಸ್ ರೇಂಜರ್ಸ್ ಸ್ವಯಂಸೇವಕರಾಗಿ ಪರೀಕ್ಷಾ ಶಿಬಿರದಲ್ಲಿ ಭಾಗವಹಿಸಿ ಪರೀಕ್ಷಾ ಶಿಬಿರವನ್ನು ಯಶಸ್ವಿಗೊಳಿಸಿದರು.

Leave a Comment

error: Content is protected !!