April 2, 2025
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಧಾರ್ಮಿಕಬೆಳ್ತಂಗಡಿವರದಿ

ತೆಕ್ಕಾರು ಬಟ್ರಬೈಲು ದೇವರಗುಡ್ಡೆ ಶೀ ಗೋಪಾಲಕೃಷ್ಣದಲ್ಲಿ ಮಾಡಾವು ವೆಂಕಟ್ರಮಣ ಭಟ್ ನೇತೃತ್ವದಲ್ಲಿ ಪ್ರಶ್ನಾಚಿಂತನೆ

ಬೆಳ್ತಂಗಡಿ: ಇತ್ತೀಚೆಗೆ ಆಸ್ತಿಕರಲ್ಲಿ ಬಾರಿ ಸಂಚಲಮೂಡಿಸಿದ ಸುದ್ದಿ ಹರಿದಾಡುತ್ತಿದೆ.ಬೆಳ್ತಂಗಡಿ ತಾಲೂಕಿನ ತೆಕ್ಕಾರು ಗ್ರಾಮದ ಬಟ್ರಬೈಲು ಎಂಬಲ್ಲಿ ಪುರಾತನ ಶ್ರೀ ಗೋಪಾಲಕೃಷ್ಣ ದೇವಸ್ಥಾನಕ್ಕೆ ಸಂಬಂಧಪಟ್ಟ ವಿಚಾರದ ಬಗ್ಗೆ ಬಹಳಷ್ಟು ಚರ್ಚೆಗಳು ನಡೆಯುತ್ತಿವೆ. ಕುತೂಹಲ ಸೃಷ್ಟಿಸಿದ ಸಂಗತಿ ಎಂದರೆ ದೇವಸ್ಥಾನದ ಜಮೀನು ಅನ್ಯ ಧರ್ಮೀಯರ ಪಾಲಗಿತ್ತು.

ಒಂದಷ್ಟು ಹೋರಾಟದ ಫಲವಾಗಿ ಶಾಸಕ ಹರೀಶ್ ಪೂಂಜ ಅವರ ಮುತುವರ್ಜಿ ಫಲವಾಗಿ ಆ 25ಸೆನ್ಸ್ ಜಮೀನು ದೇವಸ್ಥಾನ ನಿರ್ಮಾಣದ ಉದ್ದೇಶಕ್ಕಾಗಿ ಮಂಜೂರು ಗೊಳಿಸುವಲ್ಲಿ ಶಾಸಕರ ಪ್ರಯತ್ನ ಇಲ್ಲಿ ಉಲ್ಲೇಖನೀಯ. ನಂತರ ದಿನಗಳಲ್ಲಿ ದೈವಜ್ಞರ ಸಲಹೆಯಂತೆ ದೇವಸ್ಥಾನ ಇದ್ದ ಭೂಮಿಯನ್ನು ಉತ್ಖನನಗೊಳಿಸಿದಾಗ ಬಾವಿ ಪತ್ತೆಯಾಗಿದೆ ಅದನ್ನೆ ಆಳವಾಗಿ ಯಂತ್ರದಲ್ಲಿ ಅಗೆದಾಗ ಸುಮಾರು ಹದಿನೈದು ಅಡಿ ಆಳದಿಂದ ಮಣ್ಣನ್ನು ಹೊರ ತೆಗೆದಾಗ ಶೀ ಗೋಪಾಲಕೃಷ್ಣ ದೇವರ ವಿಗ್ರಹ ಮತ್ತು ದೇವಸ್ಥಾನದ ಇತರ ಅವಶೇಷಗಳು ಸಿಕ್ಕಿದೆ. ಇದಾದ ನಂತರ ಮುಂದಿನ ಅಂಗವಾಗಿ ತೆಕ್ಕಾರು,ಬಾರ್ಯ,ಪುತ್ತಿಲ ಮತ್ತು ಬಂಟ್ವಾಳ ತಾಲೂಕಿನ ಉಳಿ ಗ್ರಾಮದ ಹಿಂದೂ ಬಾಂಧವರು ದೇವಸ್ಥಾನದ ನಿರ್ಮಾಣ ಕಾರ್ಯಕ್ಕೆ ಸಮಾಲೋಚಿಸಿ ಶೀ ಗೋಪಾಲಕೃಷ್ಣ ಬಟ್ರಬೈಲು ದೇವರಗುಡ್ಡೆ ಸೇವಾ ಟ್ರಸ್ಟ್ ಉಸ್ತುವಾರಿಯಲ್ಲಿ ಸೋಮವಾರ ಮಾಡಾವು ವೆಂಕಟ್ರಮಣ ಭಟ್ ನೇತೃತ್ವದಲ್ಲಿ ಪ್ರಶ್ನಾಚಿಂತನೆ ನಡೆಯಿತು.

ಇದು ಒಂದು ಮಠ ಸಂಪ್ರದಾಯದಲ್ಲಿ ಆರಾಧಿಸಿಕೊಂಡು ಬರುತಿದ್ದ ಶೀ ಗೋಪಾಲಕೃಷ್ಣ ದೇವಸ್ಥಾನ.ಅನ್ಯರದಾಳಿಗೆ ತುತ್ತಾಗಿ ದೇವಸ್ಥಾನ ಧ್ವಂಸಗೊಂಡಿದೆ. ಗೋಪಾಲಕೃಷ್ಣ ದೇವರನ್ನು ಪ್ರತಿಷ್ಠಾಪಿಸಿ ಆರಾಧನೆ ಮಾಡಬೇಕು, ಮತ್ತು ಪಂಜುರ್ಲಿ ಗುಳಿಗ ರಕ್ತೇಶ್ವರಿ ದೈವಗಳಿಗೆ ತಂಬಿಲ ಮೂಲಕ ನಂಬಬೇಕು ಅದು ಈ ಬೈಲಿಗೆ ಸಂಬಂಧಪಟ್ಟ ದೈವಗಳು ನಂಬದವರಿಗೆ ಸಮಸ್ಯೆ ಗಳು ಬಾದಿಸಲಿದೆ .ತಂತ್ರಿವರ್ಯಯರ ಸಲಹೆಯಂತೆ ಬಾಲಾಲಯ ಪ್ರತಿಷ್ಠೆ ಮಾಡುವುದು ಮತ್ತು ಗಣಪತಿ ಹೋಮ, ಸುದರ್ಶನ ಹೋಮ, ಆಶ್ಲೇಷಾ ಪೂಜೆ, ದುರ್ಗಾ ಪೂಜಾದಿ ವೈದಿಕ ಕಾರ್ಯ ಮಾಡಿ ನಂತರ ತಂತ್ರಿಯವರ ಸೂಚನೆಯಂತೆ ವಾಸ್ತು ಶಿಲ್ಪಿ ಶಿಲಾಮಯ ಕೆಲಸದ ಶಿಲ್ಪಿಗಳಲ್ಲಿ ಚರ್ಚಿಸಿ ದೇವಸ್ಥಾನದ ನಿರ್ಮಾಣ ಕಾರ್ಯಕ್ಕೆ ಶುಭಲಗ್ನದಲ್ಲಿ ಮುಂದಾಗುವುದು .

ಇನ್ನೂಂದು ಕುತೂಹಲಕಾರಿ ಅಂಶ ಬೆಳಕಿಗೆ ಬಂದಿರುವ ಸಂಗತಿ ಎಂದರೆ ಶೀ ಗೋಪಾಲಕೃಷ್ಣ ದೇವಸ್ಥಾನಕ್ಕೆ ಸಂಬಂಧಪಟ್ಟ ನಾಗಬನ ಇರುವ ಭೂಮಿಯ ಸಂಗತಿ. ಇಲ್ಲೆ ಪೂರ್ವದಿಕ್ಕಿನಲ್ಲಿ ಮುನ್ನೂರು ನಾನೂರು ಮೀಟರ್ ದೂರದಲ್ಲಿರುವ ಪೂದೆಯೊಳಗೆ ಹುಡುಕಾಟ ನಡೆಸಿದಾಗ ಗೋಚರಿಸಲಿದೆ. ಅದರ ಮರ ಕಡಿಯಲಾಗಿದೆ. ಆ ಜಮೀನು ಕೂಡ ಅನ್ಯಧರ್ಮದವರ ಪಾಲಗಿದ್ದು ಅವರಿಗೂ ಸುಖಶಾಂತಿ ನೆಮ್ಮದಿ ಇಲ್ಲ. ವ್ಯವಹಾರದಲ್ಲಿ ಒಳಿತಿಲ್ಲ, ಮುಂದಿನ ದಿನಗಳಲ್ಲಿ ನಿಮಗೆ ಲಭ್ಯವಾಗಿದೆ ನಾಗಬನ.ಅಲ್ಲಿತನಕ ದೇವಸ್ಥಾನ ನಿರ್ಮಿಸಿ ಇಲ್ಲೆ ತಂಬಿಲ ಆಶ್ಲೇಷಾ ಪೂಜೆ ನಾಗಾರಾಧನೆ ಮಾಡಬಹುದು ಎಂದು ಸಲಹೆ ನೀಡಿದರು.ದೈವಜ್ಞರು ನಾಗಬನಕ್ಕೆ ಬಗ್ಗೆ ಕೊಟ್ಟ ಸುಳಿವಿನ ಆಧಾರದಲ್ಲಿ ಅಕ್ಕಪಕ್ಕದ ಜಮೀನಿನ ದಾಖಲೆ ಪರೀಶೀಲನೆ ಮಾಡಿದಾಗ ಹತ್ತಿರದಲ್ಲೇ ಅಲ್ಲೆ ಜಮೀನು ಇದ್ದರು ಕೂಡ ವಾಸ್ತವ್ಯ ಇರದೆ ಕೆಲವು ದಿನಗಳಿಂದ ಊರು ಬಿಟ್ಟಿರುವ ಅನ್ನಧರ್ಮಿಯರ ಪೂರ್ವಜರು ಅತಿಕ್ರಮಣ ಮಾಡಿಕೊಂಡ ಜಾಗ ಪರಂಭೋಕು ಸುಮಾರು 0.17 ಸೆನ್ಸ್ ಪಹಣಿಯಲ್ಲಿ ನಾಗಬನ ದಾಖಲೆ ಇರುವುದು ಕಂಡು ಬಂದಿದೆ. ಈ ಸಂದರ್ಭದಲ್ಲಿ ಟ್ರಸ್ಟ್ ಅಧ್ಯಕ್ಷರಾದ ನಾಗಭೂಷಣ ರಾವ್, ಗೌರವಾಧ್ಯಕ್ಷರಾದ ‌ತುಕರಾಮ್ ನಾಯಕ್, ವಿಶ್ವ ಹಿಂದೂ ಪರಿಷತ್ ಬಜರಂಗದಳ ಜಿಲ್ಲಾ ಕಾರ್ಯದರ್ಶಿ ನವೀನ್ ನೆರಿಯ, ಟ್ರಸ್ಟ್ ಪ್ರಮುಖರು, ಹಾಗೂ ಊರ ಪರ ಊರ ಭಕ್ತರು ಭಾಗವಹಿಸಿದ್ದರು.

ಈ ದೇವಸ್ಥಾನದ ಜಮೀನು ಒತ್ತುವರಿ ಮಾಡಿಕೊಂಡ ವಿಚಾರವನ್ನು ಸೌಹಾರ್ದ ರೀತಿಯಲ್ಲಿ ಮಾತುಕತೆ ಮೂಲಕ ಬಗೆಹರಿಸಿದಂತೆ ನಾಗಬನ ಜಮೀನು ಕೂಡ ಶಾಸಕರ ಮೂಲಕ ಬಗೆಹರಿಯುವ ಭರವಸೆ ಊರಿನ ದೇವಸ್ಥಾನದ ನಿರ್ಮಾಣ ಮಾಡುವ ಭಕ್ತರದ್ದು.

Related posts

ಬಿಜೆಪಿ ಕಾರ್ಯಕರ್ತರ ಮೇಲಿನ ದಬ್ಬಾಳಿಕೆ ಸಹಿಸುವುದಿಲ್ಲ; ಶಾಸಕ ಹರೀಶ್ ಪೂಂಜರ ಬಂಧನ ದುಸ್ಸಾಹಸಕ್ಕೆ ಕೈಹಾಕಿದರೆ ಮುಂದೆ ಆಗುವ ವಿಚಾರಗಳಿಗೆ ಪೊಲೀಸ್ ಇಲಾಖೆ ಹಾಗೂ ಸರಕಾರ ನೇರ ಹೊಣೆ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ ವಿಜಯೇಂದ್ರ ಪ್ರತಿಕ್ರಿಯೆ

Suddi Udaya

ಬೆಳ್ತಂಗಡಿ ಕಾಂಗ್ರೆಸ್ ಪಕ್ಷದ ಜಿಲ್ಲಾ ಪಂಚಾಯತ್ ತಾಲೂಕು ಪಂಚಾಯತ್ ಕ್ಷೇತ್ರದ ಉಸ್ತುವಾರಿಗಳ ಸಭೆ

Suddi Udaya

ಉಜಿರೆ ಕೇರಿಮಾರ್ ನಿವಾಸಿ ಶ್ರೀಮತಿ ಚೆಲುವಮ್ಮ ನಿಧನ

Suddi Udaya

ತೆಕ್ಕಾರು: ಗಾಳಿ ಮಳೆಗೆ ಅಡಿಕೆ ಗಿಡ ಹಾಗೂ ಮನೆಗೆ ಮರ ಬಿದ್ದು ಹಾನಿ

Suddi Udaya

ಕಡಿರುದ್ಯಾವರ ಗ್ರಾ.ಪಂ. ಪಿಡಿಒ ಆಗಿದ್ದ ಶ್ರೀಧರ್ ಹೆಗಡೆ ಆತ್ಮಹತ್ಯೆಗೆ ಯತ್ನ

Suddi Udaya

ತಾಲೂಕು ಯುವಜನ ಒಕ್ಕೂಟದಿಂದ ತಾಲೂಕು ಮಟ್ಟದ ಕೆಸರು ಗದ್ದೆ ಕ್ರೀಡಾಕೂಟ

Suddi Udaya
error: Content is protected !!