32.6 C
ಪುತ್ತೂರು, ಬೆಳ್ತಂಗಡಿ
November 24, 2024
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿವರದಿ

ಕನ್ಯಾಡಿ ಶ್ರೀ ಹರಿದ್ವಾರ ಶಾಖಾ ಮಠದಲ್ಲಿ 7ನೇ ವರ್ಷದ ವಾರ್ಷಿಕೋತ್ಸವ

ಬೆಳ್ತಂಗಡಿ : ಗುರುಗಳ ಆಶೀರ್ವಾದವಿಲ್ಲದೆ ಈ ಭೂಮಿಯಲ್ಲಿ ಯಾವುದೂ ನೆರವೇರುವುದಿಲ್ಲ. ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿಗಳ ಆಶೀರ್ವಾದದಿಂದ ಸಕಲವೂ ನೆರವೇರುತ್ತಿದೆ. ಅವರ ಇಚ್ಚೆಯಂತೆ ತಿರುಪತಿಯಲ್ಲಿ ಶೀಘ್ರವೇ ಶಾಖಾ ಮಠ ಮಾಡಬೇಕೆಂಬ ಅವರ ಆಭಿಲಾಶೆಗೆ ನಮ್ಮ ಸಂಪೂರ್ಣ ಸಹಕಾರವಿದೆ. ಸರಕಾರದಿಂದಲೂ ಪೂರಕ ನೆರವು ಒದಗಿಸಲಾಗುವುದು ಎಂದು ಕರ್ನಾಟಕ ಸರಕಾರದ ಮೀನುಗಾರಿಕೆ ಮತ್ತು ಬಂದರು, ಒಳನಾಡು ಜಲ ಸಾರಿಗೆ ಸಚಿವ ಮಾಂಕಾಳ್ ಎಸ್.ವೈದ್ಯ ಹೇಳಿದರು.

ಶ್ರೀ ರಾಮ ಕ್ಷೇತ್ರ ಮಹಾ ಸಂಸ್ಥಾನಮ್ ನಿತ್ಯಾನಂದ ನಗರದ ಜಗದ್ಗುರು ಪೀಠದ ಪೀಠಾಧೀಶ ಸದ್ಗುರು ಶ್ರೀ ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿಯವರ ನೇತೃತ್ವದಲ್ಲಿ ಕ್ಷೇತ್ರದ ಶಾಖಾ ಮಠ ಉತ್ತರಾಖಂಡದ ದೇವ ಭೂಮಿ ಹರಿದ್ವಾರ ಶಾಖಾ ಮಠದಲ್ಲಿ ನ.25 ರಂದು ಹಮ್ಮಿಕೊಂಡ 7ನೇ ವರ್ಷದ ವಾರ್ಷಿಕ ಉತ್ಸವದಲ್ಲಿ ಮಾತನಾಡಿದರು.

ಅಧ್ಯಕ್ಷತೆ ವಹಿಸಿದ್ದ ಶ್ರೀ ರಾಮ ಕ್ಷೇತ್ರ ಮಹಾ ಸಂಸ್ಥಾನಮ್ ನಿತ್ಯಾನಂದ ನಗರದ ಜಗದ್ಗುರು ಪೀಠದ ಪೀಠಾಧೀಶ ಸದ್ಗುರು ಶ್ರೀ ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿ ಆಶೀರ್ವಚನ ನೀಡಿ, ಪಂಚೇಂದ್ರಿಯಗಳು ಮನುಷ್ಯನನ್ನು ನಿಯಂತ್ರಿಸುವುದರಿಂದ ಯಾವುದರಲ್ಲೂ ನೈಜ ಆನಂದವಿಲ್ಲ ಎಂಬಂತಾಗಿದೆ.‌ ಇದಕ್ಕೆಲ್ಲ ಧ್ಯಾನ ಅನಿವಾರ್ಯವಾಗಿದೆ, ಧ್ಯಾನ ನಮ್ಮ ಮನೋಬಲಕ್ಕಾಗಿ ಅತ್ಯವಶ್ಯವಾಗಿದೆ. ಮನುಷ್ಯ ಜನ್ಮನಲ್ಲಿ ಆಧ್ಯಾತ್ಮದ ರುಚಿ‌ ಹೆಚ್ಚಿಸಬೇಕಾದ ಅನಿವಾರ್ಯವಿದೆ. ಆ ಕಾರ್ಯ ಸಂತರಿಂದ ಮಾತ್ರ ಸಾಧ್ಯ‌ ಎಂದು ಹೇಳಿದರು.

ಸಂಸದ ನಳಿನ್‌ ಕುಮಾರ್ ಕಟೀಲು ಮಾತನಾಡಿ, ಸಂತರ‌ ಆಶೀರ್ವಾದಿಂದ ದಕ್ಷಿಣ ಭಾರತ ಮತ್ತು ಉತ್ತರ ಭಾರತ ಸಂಘಮವಾಗಿದೆ. ಅರಮನೆ‌ ಮತ್ತು ಗುರುಮನೆ ಹತ್ತಿರವಿದ್ದರೆ ರಾಜನೀತಿ ಸುಂದರವಾಗಿರುತ್ತದೆ. ಶಂಕರಾಚಾರ್ಯರ ಬಳಿಕ ಸದ್ಗರು ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿಗಳು ಮಠ ಪರಂಪರೆಯನ್ನು ವಿಸ್ತರಿಸಿದ ಮಹಾತ್ಮರು ಎಂದು ಹೇಳಿದರು.

ಶಾಸಕ ಹರೀಶ್ ಪೂಂಜ ಮಾತನಾಡಿ, ಶಂಕರಾಚಾರ್ಯರು ಉತ್ತರದಿಂದ ದಕ್ಷಿಣವನ್ನು ಜೋಡಿಸುವ ಕಾರ್ಯಮಾಡಿದ್ದರು. ಈಗ ನಮ್ಮ ಸ್ವಾಮೀಜಿಗಳು ಉತ್ತರದಿಂದ ಬಂದು ದಕ್ಷಿಣದಲ್ಲಿ ಶಾಖಾ ಮಠ ಸ್ಥಾಪಿಸಿ ಶಂಕರಾಚಾರ್ಯ ಪರಂಪರೆಯನ್ನು‌ ಮುಂದುವರಿಸುವ ಕಾರ್ಯವಾಗಿದೆ. ಈ ಹಿಂದೆ ಧರ್ಮ ಸಂಸತ್ ಗೆ ಕನ್ಯಾಡಿಯಲ್ಲಿ ಭಾರತದ ಸಂತರು ಆಗಮಿಸಿದ್ದರು. ಮಗದೊಮ್ಮೆ ಕನ್ಯಾಡಿ ಕ್ಷೇತ್ರಕ್ಕೆ ಆಗಮಿಸಿ ಆಶೀರ್ವದಿಸಬೇಕೆಂದು ಆಹ್ವಾನಿಸಿದರು.

ಈ ಸಂದರ್ಭದಲ್ಲಿ ಅಂತಾರಾಷ್ಟ್ರೀಯ ಶ್ರೀ ಪಂಚದಶನಾಮ ಮಾನಿರ್ವಾಣಿ ಅಖಾಡ ಸಚಿವ ರವೀಂದ್ರ ಪುರೀಜಿ ಮಹರಾಜ್, ಅಖಿಲ ಭಾರತೀಯ ಅಖಾಡ ಪರಿಷತ್ ಅಧ್ಯಕ್ಷ ಶ್ರೀ ಮಹಂತ ರವೀಂದ್ರ ಪುರಿಜೀ ಮಹರಾಜ್, ಅಂತಾರಾಷ್ಟ್ರೀಯ ಶ್ರೀ ಪಂಚದರ್ಶನಂ ಜ್ಞಾನ ಅಖಾಡ ಉಪಾಧ್ಯಕ್ಷ
ಮಹಾಂತ್ ವಿಜ್ಞಾನಂದ ಸರಸ್ವತಿ ಜಿ ಮಹರಾಜ್, ಮಹಾಮಂಡಲೇಶ್ವರ್ 1008 ಶ್ರೀ ಸ್ವಾಮಿ ವಿಜ್ಞಾನಂದ ಸರಸ್ವತಿ ಜಿ.ಮಹರಾಜ್, ಮಹಾಮಂಡಲೇಶ್ವರ 1008 ಜಿ ಲಲಿತಾನಂದ ಗಿರೀಜಿ ಮಹರಾಜ್, ಮಹಾಮಂಡಲೇಶ್ವರ 1008 ಆನಂದ ಚೈತನ್ಯ ಸರಸ್ವತಿ‌ ಜಿ ಮಹರಾಜ್, ಮಹಾಮಂಡಲೇಶ್ವರ 1008 ಸ್ವಾಮಿ ಯಮುನಾಪುರಿ ಜಿ ಮಹಾರಜ್, ಶ್ರೀ ಮಹಂತ್ ದೇವಾನಂದ್ ಸರಸ್ವತಿ ಜಿ ಮಹರಾಜ್, ಉತ್ತರ ಖಂಡದ ಮಾಜಿ ಮಂತ್ರಿ, ಹರಿದ್ವಾರದ ಹಾಲಿ ಶಾಸಕ ಮದನ್ ಕೌಶಿಕ್, ಕಾರ್ಪೋರೆಟ್ ಅನಿಲ್ ಮಿಶ್ರ, ಬಿಜೆಪಿ ಜಿಲ್ಲಾ ಉಪಾಧ್ಯಕ್ಷ, ಹರಿಕೃಷ್ಣ ಬಂಟ್ವಾಳ್, ಮನಪಾ ಸದಸ್ಯ ಕಿರಣ್ ಉಪಸ್ಥಿತರಿದ್ದರು.

ದೇಶದ ವಿವಿಧ ಮೂಲೆಗಳಿಂದ ಭಕ್ತರು ಭಾಗವಹಿಸಿದರು. ಸಂಜೆ ಸಚಿವರು, ಸಂಸದರ ನೇತೃತ್ವದಲ್ಲಿ ಪವಿತ್ರ ಗಂಗಾ ಆರತಿ ನಡೆಯಿತು. ಮುಂಜಾನೆ ಮಠದಲ್ಲಿ ಹೋಮ ನೆರವೇರಿತು.

Related posts

ಮದ್ದಡ್ಕ: ಬೈಕ್ ನ್ನು ತಪ್ಪಿಸಲು ಹೋಗಿ ಚರಂಡಿಗೆ ಬಿದ್ದ ಕೆಎಸ್ ಆರ್ ಟಿಸಿ ಬಸ್ಸು

Suddi Udaya

ಜೆಸಿಐ ಬೆಳ್ತಂಗಡಿ ಮಂಜುಶ್ರೀಯಲ್ಲಿ ಲೇಡಿ ಜೇಸಿ ಮತ್ತು ಜೆಜೆಸಿ ಸಮ್ಮೇಳನದ ಪ್ರಯುಕ್ತ ಅಭಿನಂದನಾ ಕಾರ್ಯಕ್ರಮ

Suddi Udaya

ಕಲ್ಮಂಜ : ಕಲ್ಲೆ ನಿವಾಸಿ ದೇವಕಿ ಕೊಳ್ತಿಗೆ ನಿಧನ

Suddi Udaya

ಉಜಿರೆ ಆಟೋ ಚಾಲಕರ ಮಹಾಸಭೆ

Suddi Udaya

ಭಾರತೀಯ ಜನತಾ ಪಾರ್ಟಿಯ ಗರ್ಡಾಡಿ ಶಕ್ತಿ ಕೇಂದ್ರದ ನೂತನ‌ ಬೂತ್ ಸಮಿತಿ ಅಧ್ಯಕ್ಷ ಹಾಗೂ ಕಾರ್ಯದರ್ಶಿಗಳ ಆಯ್ಕೆ

Suddi Udaya

ಗುರುವಾಯನಕೆರೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘಕ್ಕೆ ಪ್ರೋತ್ಸಾಹಕ ಪ್ರಶಸ್ತಿಯ ಗೌರವ

Suddi Udaya
error: Content is protected !!