ಬೆಳ್ತಂಗಡಿ; ಕಕ್ಕಿಂಜೆ ಸಮೀಪ ಬಯಲು ಬಸ್ತಿಯಲ್ಲಿ ಕಾಡಾನೆ ರಸ್ತೆಯಲ್ಲಿ ಓಡಾಟ ನಡೆಸಿ ಕಾರೊಂದರ ಮೇಲೆ ದಾಳಿ ನಡೆಸಿದ ಘಟನೆ ಸೋಮವಾರ ರಾತ್ರಿಯ ವೇಳೆ ಸಂಭವಿಸಿದೆ.

ಆನೆ ಬರುವುದನ್ನು ನೋಡಿ ಕಾರನ್ನು ರಸ್ತೆ ಬದಿಯಲ್ಲಿ ನಿಲ್ಲಿಸಿದ್ದಾರೆ ಕಾರಿನ ಬಳಿ ಬಂದ ಕಾಡಾನೆ ಕಾರಿನ ಮುಂಭಾಗವನ್ನು ಮೇಲೆತ್ತಿ ಕೆಳಗೆ ಬಿಟ್ಟಿದೆ. ಕಾರಿನಲ್ಲಿದ ಒಬ್ನರಿಗೆ ಈ ಸಂದರ್ಭದಲ್ಲಿ ಗಾಯವಾಗಿರುವುದಾಗಿ ತಿಳಿದು ಬಂದಿದೆ. ಬಳಿಕ ಕಾಡಾನೆ ಅಲ್ಲಿಯೇ ಅರಣ್ಯದತ್ತ ಸಾಗಿದೆ.