23.3 C
ಪುತ್ತೂರು, ಬೆಳ್ತಂಗಡಿ
May 23, 2025
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿವರದಿ

ಬೆಳ್ತಂಗಡಿ : ಲಾರಿ- ಬೈಕ್ ಅಪಘಾತದಲ್ಲಿ ಇಬ್ಬರು ಸಾವು ಪ್ರಕರಣ: ಬೆಳ್ತಂಗಡಿ ನ್ಯಾಯಾಲಯದಿಂದ ಲಾರಿ ಚಾಲಕನಿಗೆ ದಂಡ ಹಾಗೂ ಜೈಲು ಶಿಕ್ಷೆ ಪ್ರಕಟ

ಬೆಳ್ತಂಗಡಿ : ಲಾರಿ ಚಾಲಕ ನಿರ್ಲಕ್ಷ್ಯತನದ ಚಾಲನೆಯಿಂದ ಬೈಕ್ ಗೆ ಡಿಕ್ಕಿ ಹೊಡೆದು ಇಬ್ಬರ ಸಾವಿಗೆ ಕಾರಣವಾದ ಲಾರಿ ಚಾಲಕನಿಗೆ 20,000 ಸಾವಿರ ದಂಡ ಹಾಗೂ ಎರಡು ವರ್ಷ ಒಂದು ತಿಂಗಳ ಜೈಲು ಶಿಕ್ಷೆ ಪ್ರಕಟ ಮಾಡಿ ಬೆಳ್ತಂಗಡಿ ನ್ಯಾಯಾಲಯ ಆದೇಶ ಮಾಡಿದೆ.

ಘಟನೆ ವಿವರ: ದಿನಾಂಕ 17-01-2022 ರಂದು KA-21-K-9502 ಸಂಖ್ಯೆಯ ಮೋಟಾರ್ ಸೈಕಲ್ ನಲ್ಲಿ ಸವಾರ ಮಿಸ್ಸಾವುದ್ದೀನ್ ಎಂಬುವರು ಸಹ ಸವಾರನಾಗಿ ಅಸ್ಮಾನ್ ಎಂಬವರನ್ನು ಕುಳ್ಳಿರಿಸಿಕೊಂಡು ಮಡಂತ್ಯಾರು ಕಡೆಯಿಂದ ಗುರುವಾಯನಕೆರೆ ಕಡೆಗೆ ಸವಾರಿ ಮಾಡಿಕೊಂಡು ಬರುತ್ತಾ ಸಮಯ ಸುಮಾರು ರಾತ್ರಿ 8:30 ಗಂಟೆಗೆ ಬೆಳ್ತಂಗಡಿ ತಾಲೂಕು ಕುವೆಟ್ಟು ಗ್ರಾಮದ ಮದ್ದಡ್ಡ M M ಕಾಂಪ್ಲೆಕ್ಸ್ ಬಳಿ ತಲುಪುತ್ತಿದ್ದಂತೆ ಗುರುವಾಯನಕೆರೆ ಕಡೆಯಿಂದ ಮಡಂತ್ಯಾರು ಕಡೆಗೆ KA-20-B-7574 ಸಂಖ್ಯೆಯ ಈಚರ್ ಲಾರಿಯನ್ನು ಅದರ ಚಾಲಕ ದುಡುಕುತನದಿಂದ ಚಲಾಯಿಸಿಕೊಂಡು ಬಂದು ಮೋಟಾರ್ ಸೈಕಲ್ ಗೆ ಡಿಕ್ಕಿ ಹೊಡೆದ ಪರಿಣಾಮ ಮೋಟಾರ್ ಸೈಕಲ್ ಸವಾರ ಮಿಸ್ಸಾವುದ್ದಿನ್ ರವರು ತಲೆಗೆ, ಮುಖಕ್ಕೆ,ಬಲಕೈ ಗೆ, ಬಲಕಾಲಿಗೆ ತೀವ್ರ ಸ್ವರೂಪದ ಗಾಯ ಹಾಗೂ ಸಹ ಸವಾರ ಅಸ್ಮಾನ್ ರವರು ತಲೆಗೆ, ಮೈ ಕೈಗೆ ಗಂಭೀರವಾಗಿ ಗಾಯಗೊಂಡವರನ್ನು ಬೆಳ್ತಂಗಡಿ ಸರಕಾರಿ ಆಸ್ಪತ್ರೆಗೆ ಸಾಗಿಸಿದ್ದು. ವೈದ್ಯರು ಎರಡೂ ಗಾಯಾಳುಗಳನ್ನು ಪರೀಕ್ಷಿಸಿದಾಗ ಇಬ್ಬರೂ ಗಾಯಾಳುಗಳು ಮೃತಪಟ್ಟಿದ್ದರು.

ಈ ಬಗ್ಗೆ ಬೆಳ್ತಂಗಡಿ ಸಂಚಾರಿ ಪೊಲೀಸ್ ಠಾಣೆಯಲ್ಲಿ U/s 279,304(A) IPC & Sec 5(1) r/w 180 IMV ಅಡಿಯಲ್ಲಿ ಪ್ರಕರಣ ದಾಖಲಿಸಿ ಬೆಳ್ತಂಗಡಿ ನ್ಯಾಯಾಲಯಕ್ಕೆ ಪೊಲೀಸರು ದೋಷರೋಷ ಪಟ್ಟಿಯನ್ನು ಸಲ್ಲಿಸಿದ್ದರು. ಪ್ರಕರಣವು ಬೆಳ್ತಂಗಡಿ Prl C J & JMFC ನ್ಯಾಯಾಲಯದಲ್ಲಿ ವಿಚಾರಣೆಯಾಗಿ ನವೆಂಬರ್ 25 ರಂದು A1 ಆರೋಪಿ ಮಹಮ್ಮದ್ ಸಿನಾನ್ ಎಂಬಾತನ ಅಪಘಾತ ಪ್ರಕರಣ ಆರೋಪ ಸಾಭಿತಾಗಿದ್ದು ಆರೋಪಿಗೆ ನ್ಯಾಯಾಲಯವು ದಂಡ ಹಾಗೂ ಶಿಕ್ಷೆ ಪ್ರಕಟ ಮಾಡಿದೆ.

U/s 279 IPC ಗೆ 1 ತಿಂಗಳ ಕಾರಾಗೃಹ ವಾಸ ಮತ್ತು 1,000 ರೂಪಾಯಿ ದಂಡ ಮತ್ತು ಕಲಂ 304(A) IPC ಗೇ ಎರಡು ವರ್ಷಗಳ ಕಠಿಣ ಕಾರಾಗೃಹ ಶಿಕ್ಷೆ ಮತ್ತು 1,000 ರೂಪಾಯಿ ದಂಡ, ದಂಡ ಕಟ್ಟಲು ತಪ್ಪಿದಲ್ಲಿ 1 ತಿಂಗಳ ಕಾರಾಗೃಹ ಶಿಕ್ಷೆಯನ್ನು ನ.25 ರಂದು ವಿಧಿಸಿ ಆದೇಶಿಸಿ ಆದೇಶ ಮಾಡಿದೆ.

ಪ್ರಕರಣದ ಎಫ್ಐಆರ್ ಬೆಳ್ತಂಗಡಿ ಸಂಚಾರಿ ಪೊಲೀಸ್ ಠಾಣೆಯಲ್ಲಿದ್ದ ಸಬ್ ಇನ್ಸ್ಪೆಕ್ಟರ್ ಅಗಿದ್ದ ಓಡಿಯಪ್ಪ ಗೌಡ ಮಾಡಿದ್ದು.ಪ್ರಕರಣದ ತನಿಖಾಧಿಕಾರಿಯಾಗಿ ನ್ಯಾಯಾಲಯಕ್ಕೆ ದೋಷರೋಪ ಪಟ್ಟಿಯನ್ನು ಬೆಳ್ತಂಗಡಿ ಸರ್ಕಲ್‌ ಇನ್ಸ್ಪೆಕ್ಟರ್ ಅಗಿದ್ದ ಶಿವಕುಮಾರ್ ಮಾಡಿದ್ದರು. ಇವರಿಗೆ ಸಹಾಯಕರಾಗಿ ಸಂಚಾರಿ ಪೊಲೀಸ್ ಠಾಣೆಯ ಎಎಸ್ಐ ರಾಮಚಂದ್ರ ಕರ್ತವ್ಯ ನಿರ್ವಹಿಸಿದ್ದರು.

Related posts

ನಾಲ್ಕೂರು:ಪಿಯುಸಿಯಲ್ಲಿ ಉನ್ನತ ಶ್ರೇಣಿಯೊಂದಿಗೆ ಉತ್ತೀರ್ಣರಾದ ಪ್ರಾಣೇಶ್ ಶೆಟ್ಟಿಯವರಿಗೆ ಸನ್ಮಾನ

Suddi Udaya

ಬಳಂಜ ಶ್ರೀ ಉಮಾಮಹೇಶ್ವರ ಯುವಕ ಮಂಡಲದ ಪದ ಪ್ರದಾನ ಸಮಾರಂಭ

Suddi Udaya

ಅತ್ಯುತ್ತಮ ಪ್ರವಾಸಿ ತಾಣಗಳ ಸ್ಪರ್ಧೆಯಲ್ಲಿ ಕುತ್ಲೂರಿನ ಹರೀಶ್ ಡಾಕಯ್ಯ ಮತ್ತು ಶಿವರಾಜ್ ಅಂಚನ್ ರವರಿಗೆ ಪ್ರಶಸ್ತಿ: ದ.ಕ. ಮತ್ತು ಉಡುಪಿ ಜಿಲ್ಲಾ ಪ್ರವಾಸೋದ್ಯಮ ಇಲಾಖೆಯಿಂದ ಗೌರರ್ವಾಪಣೆ

Suddi Udaya

ಬೆಳ್ತಂಗಡಿ ವಿಶ್ವ ಹಿಂದೂ ಪರಿಷತ್ ಬಜರಂಗದಳ ಆಶ್ರಯದಲ್ಲಿ ಅಖಂಡ ಭಾರತ ಸಂಕಲ್ಪ ದಿನ ಮತ್ತು ಬೃಹತ್ ಪಂಜಿನ ಮೆರವಣಿಗೆ ಕಾರ್ಯಕ್ರಮ

Suddi Udaya

ಬಿಜೆಪಿ ಶಿರ್ಲಾಲು ಬೂತ್ ಸಂಖ್ಯೆ 9ರ ಅಧ್ಯಕ್ಷರಾಗಿ ವಿಜಯಕುಮಾರ್, ಕಾರ್ಯದರ್ಶಿಯಾಗಿ ರಮೇಶ್ ಎನ್ ಆಯ್ಕೆ

Suddi Udaya

ಕರ್ನಾಟಕದ ಆರ್ಥಿಕ ಪರಿಸ್ಥಿತಿ ನಿಭಾಯಿಸುವಲ್ಲಿ ಸಿಎಂ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ವಿಫಲ: ವಿಧಾನಪರಿಷತ್ ಶಾಸಕ ಕೆ‌.ಪ್ರತಾಪ್ ಸಿಂಹ ನಾಯಕ್ ಆರೋಪ

Suddi Udaya
error: Content is protected !!