ಬಣಕಲ್ ಸಾಯಿಕೃಷ್ಣ ಹೆಲ್ತ್ ಸೆಂಟರ್ ನಲ್ಲಿ ಉಚಿತ ಆರೋಗ್ಯ ತಪಾಸಣೆ ಮತ್ತು ನೇತ್ರ ತಪಾಸಣೆ ಶಿಬಿರ

Suddi Udaya

ಬಣಕಲ್ : ಸಾಯಿಕೃಷ್ಣ ಹೆಲ್ತ್ ಸೆಂಟರ್ ಬಣಕಲ್, ಮೂಡಿಗೆರೆ ತಾಲೂಕು., ಬಿ.ವಿ.ಕೆ ಇರ್ವತ್ರಾಯ ಮೆಮೋರಿಯಲ್ ಚಾರಿಟೆಬಲ್ ಫೌಂಡೇಶನ್(ರಿ) ಹಾಗೂ ಯೆನೆಪೋಯ ಆಯುರ್ವೇದ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆ ,ಮಂಗಳೂರು. ಇವರ ಸಂಯುಕ್ತ ಆಶ್ರಯದಲ್ಲಿ,ಉಚಿತ ಆಯುರ್ವೇದ ಆರೋಗ್ಯ ತಪಾಸಣಾ ಶಿಬಿರ ಉಚಿತ ನೇತ್ರ ತಪಾಸಣೆ ಶಿಬಿರವು ಸಾಯಿ ಕೃಷ್ಣ ಹೆಲ್ತ್ ಸೆಂಟರ್ ಬಣಕಲ್ ಇಲ್ಲಿ ನಡೆಯಿತು.

ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಶ್ರೀ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಮೂಡಿಗೆರೆ ವಲಯ ನಿರ್ದೇಶಕರಾದ ಶಿವಾನಂದ, ಇಂತಹ ಆರೋಗ್ಯ ಶಿಬಿರವು ಜನರಲ್ಲಿ ಆರೋಗ್ಯದ ಬಗ್ಗೆ ಅರಿವು ಮೂಡಿಸಲು, ಜನರು ಆರೋಗ್ಯವಂತರಾಗಿರಲು ಉಪಯುಕ್ತವಾಗಿದೆ ಮತ್ತು ಸಾಯಿ ಕೃಷ್ಣ ಹೆಲ್ತ್ ಸೆಂಟರ್ ಬಣಕಲ್ ಬಾಗದ ಜನರಿಗೆ ತುರ್ತು ಚಿಕಿತ್ಸೆ ನೀಡಲು ಸಹಕಾರಿಯಾಗಿದೆ. ಆಸ್ಪತ್ರೆಯ ವೈದ್ಯಕೀಯ ನಿರ್ದೇಶಕ ರಾದ ಡಾ.ಮುರಳಿಕೃಷ್ಣ ಇರ್ವತ್ರಾಯ ಮತ್ತು ಆಡಳಿತ ನಿರ್ದೇಶಕರಾದ ನವೀನ್ ಭಟ್ ಇವರ ಕಾರ್ಯವು ಸಮಾಜಮುಖಿಯಾದದ್ದು ಎಂದರು ಮತ್ತು ಅವರಿಗೆ ಅಭಿನಂದನೆ ಸಲ್ಲಿಸಿದರು,ಶ್ರೀ ಕೃಷ್ಣ ಆಸ್ಪತ್ರೆ ಮತ್ತು ಸಮೂಹ ಸಂಸ್ಥೆಗಳ ವೈದ್ಯಕೀಯ ನಿರ್ದೇಶಕರಾದ ಡಾ.ಮುರಳಿಕೃಷ್ಣ ಇರ್ವತ್ರಾಯ ಸ್ವಾಗತಿಸಿ ಪ್ರಸ್ತಾವನೆ ಮಾತನ್ನಾಡಿದರು.


ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದ ಆಸ್ಪತ್ರೆಯ ಆಡಳಿತ ನಿರ್ದೇಶಕರಾದ ನವೀನ್ ಭಟ್ ಬಣಕಲ್ ಹಾಗೂ ಸುತ್ತಲಿನ ಜನರಿಗೆ ಅನಾರೋಗ್ಯದ ತುರ್ತು ಸಂದರ್ಭದಲ್ಲಿ ಉಪಯುಕ್ತವಾಗಲು ಆಸ್ಪತ್ರೆಯನ್ನು ಸ್ಥಾಪಿಸಿದ್ದು ಯಾವುದೇ ವ್ಯವಹಾರಿಕ ದೃಷ್ಟಿಯಿಂದ ಅಲ್ಲ ,ಮತ್ತು ಜನರು ಇಂತಹ ಶಿಬಿರದ ಪ್ರಯೋಜನ ಪಡೆದುಕೊಳ್ಳಬೇಕು ಎಂದರು. ಕಾರ್ಯಕ್ರಮದಲ್ಲಿ ಯೇನೆಪೋಯ ನ್ಯಾಚುರೊಪತಿ ಮತ್ತು ಯೋಗ ವಿಜ್ಞಾನ ಕಾಲೇಜಿನ ಪ್ರಾಂಶುಪಾಲ ಡಾ.ಪುನೀತ್ ರಾಘವೇಂದ್ರ,ಯೆನೆಪೊಯ ಆಯುರ್ವೇದ ವೈದ್ಯಕೀಯ ಕಾಲೇಜು ಕೊಲ್ಲರಕೊಡಿ ನರಿಂಗಾನ ಮಂಗಳೂರು ಇಲ್ಲಿನ ಪ್ರೊಫೆಸರ್ ಡಾ.ಅಜಂತಾ ಶಿವಾಜಿ ಕೊಟೆಕಾರ್,ಶ್ರೀ ಕೃಷ್ಣ ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕರಾದ ಡಾ.ವಂದನಾ ಎಂ ಇರ್ವತ್ರಾಯ ಮಾತನಾಡಿ ಶಿಬಿರದ ಬಗ್ಗೆ ಮಾಹಿತಿ ನೀಡಿದರು,ಬಣಕಲ್ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಅತಿಕಾ ಭಾನು,ಬಿ ಹೊಸಳ್ಳಿ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಆಶ್ರೀತ್ ಗೌಡ ಮಾತನಾಡಿ ಕಾರ್ಯಕ್ರಮಕ್ಕೆ ಶುಭ ಹಾರೈಸಿದರು,ನಜರೆತ್ ಶಾಲೆ ಬಣಕಲ್ ನ ಆಡಳಿತಾಧಿಕಾರಿ ಲವಕುಮಾರ್,ಶ್ರೀ ಕೃಷ್ಣ ಆಸ್ಪತ್ರೆ ಕಕ್ಕಿಂಜೆ ಆಡಳಿತಾಧಿಕಾರಿ ಶ್ರೀಮತಿ ಜ್ಯೋತಿ ವಿ ಸ್ವರೂಪ್,ಸಾಯಿ ಕೃಷ್ಣ ಹೆಲ್ತ್ ಸೆಂಟರ್ ನ ಆಡಳಿತ ನಿರ್ದೇಶಕರಾದ ಭವ್ಯ ನವೀನ್ ಭಟ್,ಆಸ್ಪತ್ರೆಯ ಸ್ಥಾನಿಕ ವೈದ್ಯರುಗಳಾದ ಡಾ.ಮೌಲ್ಯ, ಡಾ.ಮದನ್,ಡಾ.ಅಜಿತ್ ಹರಿ,ಡಾ.ಚೈತನ್ಯ, ಮ್ಯಾನೇಜರ್ ಅನಂತ್ ಪ್ರಸಾದ್,ಪಿ.ಆರ್.ಒ ಗಣೇಶ್,ಶ್ರೀ ಕೃಷ್ಣ ಯೋಗಕ್ಷೇಮ ಕೊಆರ್ಡಿನೆಟರ್ ಹೈದರ್ ಅಲಿ ಹಾಗೂ ಸಿಬ್ಬಂದಿಗಳು ಮೊದಲಾದವರಿದ್ದರು.

ಸುಧಾ ಕಾರ್ಯಕ್ರಮ ನಿರೂಪಿಸಿ, ಡಾ.ಅಜಿತ್ ಹರಿ ಧನ್ಯವಾದವಿತ್ತರು.ಕಾರ್ಯಕ್ರಮದಲ್ಲಿ ಸುಮಾರು ಇನ್ನೂರಕ್ಕೂ ಅಧಿಕ ಸಾರ್ವಜನಿಕರು ಪಾಲ್ಗೊಂಡು ಶಿಬಿರದ ಪ್ರಯೋಜನ ಪಡೆದುಕೊಂಡರು.

Leave a Comment

error: Content is protected !!