ನೆರಿಯ ಒಂಟಿ ಸಲಗ ಕಾರಿನ ಮೇಲೆ ದಾಳಿ ಪ್ರಕರಣ: ಇಬ್ಬರಿಗೆ ಗಾಯ ಐದು ಮಂದಿ ಪ್ರಾಣಾಪಾಯದಿಂದ ಪಾರು

Suddi Udaya

ಬೆಳ್ತಂಗಡಿ : ಪುತ್ತೂರಿನ ಕುಟುಂಬವೊಂದು ನೆರಿಯದ ಸಂಬಂಧಿಕರ ಮನೆಗೆ ಹೋಗುವಾಗ ಒಂಟಿ ಸಲಗ ಕಾರಿಗೆ ಮೇಲೆ ದಾಳಿ ಮಾಡಿದ್ದು ಇಬ್ಬರಿಗೆ ಗಾಯವಾಗಿದ್ದು , ಐದು ಮಂದಿ ಪ್ರಾಣಾಪಾಯದಿಂದ ಪಾರಾಗಿರುವ ಘಟನೆ ನೆರಿಯ ಗ್ರಾಮದಲ್ಲಿ ನ.27 ರಂದು ರಾತ್ರಿ ನಡೆದಿದೆ.


ಪುತ್ತೂರು ತಾಲೂಕಿನ ಅಬ್ದುಲ್ ರಹಮಾನ್(40) ಹಾಗೂ ನೆರಿಯ ಗ್ರಾಮದ ಹಿಟ್ಟಾಡಿ ನಾಸಿಯಾ(30) ಗಾಯಗೊಂಡಿದ್ದು, ಕಕ್ಕಿಂಜೆ ಶ್ರೀ ಕೃಷ್ಣ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಪುತ್ತೂರಿನ ಕುಟುಂಬ ನೆರಿಯದ ಸಂಬಂಧಿಕರ ಮನೆಗೆ ಹೋಗುವಾಗ ಒಂಟಿ ಸಲಗ ಕಂಡಿದ್ದು ತಕ್ಷಣ ಕಾರನ್ನು ಬಯಲು ಬಳಿ ನಿಲ್ಲಿಸಿದ್ದು ಆನೆ ಕಾರಿನ ಮೇಲೆ ದಾಳಿ ಮಾಡಿ ಕಾರನ್ನು ಪಲ್ಟಿ ಮಾಡಿದೆ. ದಂತದಿಂದ ಕಾರಿನ ಡೋರ್ ಮತ್ತು ಚಾಲಕನ ಸೀಟ್‌ಗೆ ಹಾನಿ ಮಾಡಿದೆ. ಅಲ್ಲಿಂದ ತೆಳಿದೆ. ತಕ್ಷಣ ಸಾರ್ವಜನಿಕರು ಸ್ಥಳಕ್ಕೆ ಬಂದು ಗಾಯಗೊಂಡ ಇಬ್ಬರನ್ನು ಕಕ್ಕಿಂಜೆ ಕೃಷ್ಣ ಆಸ್ಪತ್ರೆಗೆ ಸೇರಿಸಿದ್ದಾರೆ. ಇಬ್ಬರು ಕೂಡ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಬೆಳ್ತಂಗಡಿ ಅರಣ್ಯಾ ಇಲಾಖೆ ತಂಡ ಗಾಯಗೊಂಡವರನ್ನು ಭೇಟಿ ಮಾಡಿ ಘಟನಾ ಸ್ಥಳಕ್ಕೆ ಹೋಗಿ ಪರಿಶೀಲನೆ ನಡೆಸಿ ಆನೆ ಹೋದ ಸ್ಥಳಕ್ಕೆ ಹೋಗಿ ಮಾಹಿತಿ ಪಡೆದುಕೊಂಡಿದ್ದಾರೆ.


ಒಂಟಿ ಸಲಗ ನೆರಿಯ ಸುತ್ತಮುತ್ತ ತಿರುಗಾಟ ನಡೆಸುತ್ತಿದ್ದು ಈ ಬಗ್ಗೆ ಸಾರ್ವಜನಿಕರಿಗೆ ಬೆಳ್ತಂಗಡಿ ಅರಣ್ಯಾಧಿಕಾರಿ ಮೋಹನ್ ಕುಮಾರ್ ಮತ್ತಿ ಸಿಬ್ಬಂದಿ ರಾತ್ರಿ ಹೊತ್ತು ಸಂಚಾರಿಸುವ ಎಚ್ಚರಿಕೆಯಿಂದ ಇರಲು ಸೂಚನೆ ನೀಡಿದ್ದಾರೆ. ಅರಣ್ಯ ಇಲಾಖೆಯ ಇಬ್ಬರು ಸಿಬ್ಬಂದಿಗಳನ್ನು ಒಂಟಿ ಸಲಗದ ಬಗ್ಗೆ ನಿಗಾ ಇಡಲು ನೇಮಿಸಲಾಗಿದೆ ಎಂದು ಅರಣ್ಯಾಧಿಕಾರಿ ಮೋಹನ್ ಕುಮಾರ್ ಮಾಹಿತಿ ನೀಡಿದ್ದಾರೆ.

Leave a Comment

error: Content is protected !!