ಕಣಿಯೂರು: ದೀಪಾ ಸಂಜೀವಿನಿ ಗ್ರಾಮ ಪಂಚಾಯತ್ ಮಹಿಳಾ ಒಕ್ಕೂಟದ ವಾರ್ಷಿಕ ಮಹಾಸಭೆಯು ನ.27 ರಂದು ಒಕ್ಕೂಟದ ಅಧ್ಯಕ್ಷರ ಅಧ್ಯಕ್ಷತೆಯಲ್ಲಿ ಕೃಷಿ ಪತ್ತಿನ ಸೇವಾ ಸಹಕಾರಿ ಸಂಘ ಪದ್ಮುಂಜದ ಸಭಾಂಗಣದಲ್ಲಿ ನಡೆಯಿತು.
ಮಹಾಸಭೆಯಲ್ಲಿ ಒಕ್ಕೂಟದ ಅಧ್ಯಕ್ಷರು , ಉಪಾಧ್ಯಕ್ಷರು, ಕಾರ್‍ಯದರ್ಶಿ, ವಲಯ ಮೇಲ್ವಿಚಾರಕರು ವೀಣಾಶ್ರೀ , ಪಂಚಾಯತ್ ನ ಅಧ್ಯಕ್ಷರು, ಉಪಾಧ್ಯಕ್ಷರು, ಪಂಚಾಯತ್ ಅಭಿವೃದ್ಧಿ ಅಧಿಕಾರಿ ಸಂತೋಷ್ ಪಾಟೀಲ್ ಹಾಗೂ ಒಕ್ಕೂಟದ ಪದಾಧಿಕಾರಿಗಳ ಉಪಸ್ಥಿತಿಯಲ್ಲಿ ಪಂಚಾಯತ್‌ನ ಅಧ್ಯಕ್ಷರಾದ ಯಶವಂತ್ ಎನ್ ರವರು ದೀಪ ಬೆಳಗಿಸುವುದರ ಮೂಲಕ ಮಹಾಸಭೆಯನ್ನು ಪ್ರಾರಂಭಿಸಲಾಯಿತು.
ವೀಣಾಶ್ರೀ ರವರು ಪ್ರಾಸ್ತಾವಿಕವಾಗಿ ಮಾತನಾಡಿದರು. ಒಕ್ಕೂಟದ ನೂತನ ಪದಾಧಿಕಾರಿಗಳ ಪದಗ್ರಹಣ ನಡೆಯಿತು.
ಕಾರ್ಯಕ್ರಮದಲ್ಲಿ ಪಂಚಾಯತ್ ನಿಂದ ವರ್ಗಾವಣೆಗೊಂಡಿರುವ ಶ್ರೀಮತಿ ಪೂರ್ಣಿಮಾ ಜೆ, ಹಾಗೂ ನಿವೃತ್ತಿಗೊಂಡಿರುವ ಪಂಚಾಯತ್ ಸಿಬ್ಬಂದಿ ಗಿರಿಯಪ್ಪ ನಾಯ್ಕ ಇವರನ್ನು ಒಕ್ಕೂಟದ ಪರವಾಗಿ ಸನ್ಮಾನಿಸಲಾಯಿತು.
ಈ ಸಂದರ್ಭದಲ್ಲಿ ಸಂಜೀವಿನಿ ಸಂಘದ ಸದಸ್ಯರು, ಸ್ತ್ರೀ ಶಕ್ತಿ ಸಂಘದ ಸದಸ್ಯರು , ಅಂಗನವಾಡಿ ಕಾರ್‍ಯಕರ್ತೆಯರು, ಆಶಾಕಾರ್ಯಕರ್ತೆಯರು, ಸಿಬ್ಬಂದಿಗಳು, ಪಂಚಾಯತ್ ಸದಸ್ಯರು ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ಶ್ರೀಮತಿ ಪ್ರೇಮಾ ರವರ ಪ್ರಾರ್ಥನೆಯೊಂದಿಗೆ ಒಕ್ಕೂಟದ ಕೋಶಾಧಿಕಾರಿ ಶರ್ಮಿಳಾ ರವರು ಸ್ವಾಗತಿಸಿದರು. ಒಕ್ಕೂಟದ ಎಮ್.ಬಿ.ಕೆ ರತ್ನಾವತಿ ಕೆ. ವರದಿ ಮತ್ತು ಜಮಾಖರ್ಚಿನ ಮಂಡನೆ ಮಾಡಿದರು. ಎಲ್.ಸಿಆರ್.ಪಿ ಲೋಕಮ್ಮ ಕಾರ್‍ಯಕ್ರಮ ನಿರೂಪಿಸಿದರು. ಕೃಷಿ ಸಖಿ ಶ್ರಾವ್ಯ ಧನ್ಯವಾದವಿತ್ತರು.