32.9 C
ಪುತ್ತೂರು, ಬೆಳ್ತಂಗಡಿ
April 1, 2025
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿವರದಿ

ಕೊಕ್ಕಡ: ಉಪ್ಪಾರಪಳಿಕೆ ಸ.ಉ. ಹಿ. ಪ್ರಾ. ಶಾಲಾ ಕ್ರೀಡೋತ್ಸವ

ಕೊಕ್ಕಡ: ಇಲ್ಲಿಯ ಉಪ್ಪಾರಪಳಿಕೆ ಸರಕಾರಿ ಉನ್ನತೀಕರಿಸಿದ ಹಿರಿಯ ಪ್ರಾಥಮಿಕ ಶಾಲೆ, ಇದರ ವಾರ್ಷಿಕೋತ್ಸವವು ಡಿ.9 ರಂದು ನಡೆಯಲಿದ್ದು ಈ ಪ್ರಯುಕ್ತ ನ.26 ರಂದು ಶಾಲಾ ಕ್ರೀಡೋತ್ಸವ ಜರಗಿತು.

ಘಟಕರಾಗಿ ಆಗಮಿಸಿದ ಸೌತಡ್ಕ ಸ್ಪೈಸಸ್ ಹೌಸ್ ಉದ್ಯಮಿ ಬಾಲಕೃಷ್ಣ ನೈಮಿಶ ದೀಪ ಪ್ರಜ್ವಲಿಸಿ ಉದ್ಘಾಟಿಸಿ ಶುಭಕೋರಿದರು. ಶಾಲೆಯ ಎಸ್‌ಡಿಎಂಸಿ ಉಪಾಧ್ಯಕ್ಷೆ ಶ್ರೀಮತಿ ಕಾವ್ಯ ಭಾಸ್ಕರ ಕೊಡಿಂಗೇರಿ ಇವರು ಅಧ್ಯಕ್ಷತೆ ವಹಿಸಿದ್ದರು.

ಈ ಸಂದರ್ಭದಲ್ಲಿ ವಾರ್ಷಿಕೋತ್ಸವ ಸಮಿತಿಯ ಅಧ್ಯಕ್ಷರಾದ ರಮೇಶ್ ಕುಡಾಲ, ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷರಾದ ಶ್ರೀನಾಥ್ ಬಡೆಕೈಲು, ಮಾತೆಯರ ಸಮಿತಿಯ ಅಧ್ಯಕ್ಷೆ ಶ್ರೀಮತಿ ಸಾವಿತ್ರಿ ಬಡೆಕೈಲು ಮೊದಲಾದವರು ಉಪಸ್ಥಿತರಿದ್ದರು.

ಶಾಲಾ ಮುಖ್ಯ ಶಿಕ್ಷಕಿ ಶ್ರೀಮತಿ ಸರಸ್ವತಿ ಸ್ವಾಗತಿಸಿದರು. ಸಹಾಯಕ ಶಿಕ್ಷಕ ದಾಮೋದರ ಅಜ್ಜಾವರ ನಿರೂಪಿಸಿದರು.

Related posts

ಹೇರಾಜೆ ಶ್ರೀ ವಿಘ್ನೇಶ್ವರ ಭಜನಾ ಮಂಡಳಿ ವಾರ್ಷಿಕೋತ್ಸವದಲ್ಲಿ ಪದ್ಮರಾಜ್ ಆರ್. ಪೂಜಾರಿ ಭಾಗಿ

Suddi Udaya

ಲೋಕಸಭಾ ಚುನಾವಣೆ ಹಿನ್ನೆಲೆ: ಸಿಯೋನ್ ಆಶ್ರಮ ರಜತಮಹೋತ್ಸವ ಹಾಗೂ ಕರ್ನಾಟಕ ಸುವರ್ಣ ಸಂಭ್ರಮ ಕಾರ್ಯಕ್ರಮ ಮುಂದೂಡಿಕೆ

Suddi Udaya

ಮಡಂತ್ಯಾರು: ಕೊಲ್ಪೆದಬೈಲು ಅತಿ೯ಲ ನಿವಾಸಿ ಜನಾನಂದ ಆಚಾರ್ಯ ನಿಧನ

Suddi Udaya

ಶತಮಾನದ  3ನೇ ವೇಣೂರು ಮಹಾಮಸ್ತಕಾಭಿಷೇಕ ಮಹೋತ್ಸವಕ್ಕೆ ಚಾಲನೆ: ಯುಗಳ ಮುನಿಗಳು, ಮಾತಾಜಿಗಳು, ಧಮಾ೯ಧಿಕಾರಿ ಡಾ.ಹೆಗ್ಗಡೆ ಹಾಗೂ ಗಣ್ಯರು ಉಪಸ್ಥಿತಿ

Suddi Udaya

ಪಡಂಗಡಿ: ನವ ವಿವಾಹಿತೆ ನೇಣು ಬಿಗಿದು ಆತ್ಮಹತ್ಯೆ

Suddi Udaya

ಕನ್ಯಾಡಿ : ಶ್ರೀ ರಾಮ ಕ್ಷೇತ್ರದ ಗುರುದೇವ ಮಠದಲ್ಲಿ ಆಯುಧ ಪೂಜೆ

Suddi Udaya
error: Content is protected !!