ಬೆಳ್ತಂಗಡಿ: ಜೂನಿಯರ್ ರೆಡ್ ಕ್ರಾಸ್ ಹಾಗೂ ಉಜಿರೆಯ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಪದವಿ ಕಾಲೇಜಿನ ಯೂತ್ ರೆಡ್ ಕ್ರಾಸ್ ವಿದ್ಯಾರ್ಥಿಗಳಿಗೆ ಪ್ರಥಮ ಚಿಕಿತ್ಸೆಯ ಬಗ್ಗೆ ಕಾರ್ಯಗಾರವು ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಆಂಗ್ಲ ಮಾಧ್ಯಮ ಶಾಲೆ ಬೆಳ್ತಂಗಡಿಯಲ್ಲಿ ನಡೆಯಿತು.
ಕಾರ್ಯಗಾರದಲ್ಲಿ ಮುಖ್ಯ ಅತಿಥಿಯಾಗಿ ಜಿಲ್ಲಾ ತರಬೇತುದಾರರಾದ ಸಚೇತ್ ಸುವರ್ಣ ಆಗಮಿಸಿದ್ದರು. ಹೃದಯಘಾತ ಆದ ಸಮಯದಲ್ಲಿ ಯಾವ ರೀತಿ ತಾವು ತಮ್ಮನ್ನು ತೊಡಗಿಸಿಕೊಳ್ಳಬೇಕು, ಯಾವ ರೀತಿ ಇತರರಿಗೆ ಸಹಾಯವನ್ನು ಮಾಡಬಹುದು ಎಂಬುದರ ಬಗ್ಗೆ ಹಾಗೂ ಹಲವಾರು ವಿಷಯಗಳ ಬಗ್ಗೆ ವಿದ್ಯಾರ್ಥಿಗಳಿಗೆ ತಿಳಿಯಪಡಿಸಿದರು.
ಕಾರ್ಯಕ್ರಮದಲ್ಲಿ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಆಂಗ್ಲ ಮಾಧ್ಯಮ ಶಾಲೆ ಬೆಳ್ತಂಗಡಿಯ ಮುಖ್ಯ ಶಿಕ್ಷಕಿ ಶ್ರೀಮತಿ ಹೇಮಲತಾ ಎಂ ಆರ್ ಉಪಸ್ಧಿತರಿದ್ದರು. ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಪದವಿ ಕಾಲೇಜಿನ ಕುಮಾರಿ ಮಂಜುಶ್ರೀ ಯೂತ್ ಇಂಡಿಯನ್ ರೆಡ್ ಕ್ರಾಸ್ ಕೌನ್ಸಿಲರ್ , ಶ್ರೀಮತಿ ಪ್ರಮೀಳ ಇಂಡಿಯನ್ ಜೂನಿಯರ್ ರೆಡ್ ಕ್ರಾಸ್ ಕೌನ್ಸಿಲರ್, ಹಾಗೂ ಶಿಕ್ಷಕ ಮಂಜುನಾಥ್ ಉಪಸ್ಥಿತರಿದ್ದರು.
ಜೂನಿಯರ್ ರೆಡ್ ಕ್ರಾಸ್ ಕುಮಾರಿ ಅನನ್ಯ ನಿರೂಪಿಸಿ ಸ್ವಾಗತಿಸಿದ ಕಾರ್ಯಕ್ರಮದಲ್ಲಿ, ಪದವಿ ಕಾಲೇಜಿನ ಯೂತ್ ರೆಡ್ ಕ್ರಾಸ್ ವಿದ್ಯಾರ್ಥಿಗಳಾದ ಸೌಖ್ಯ ಜೈನ್ ಹಾಗೂ ಶಿವಾನಿ ತಮ್ಮ ಅನಿಸಿಕೆಗಳನ್ನು ವ್ಯಕ್ತಪಡಿಸಿದರು. ಪದವಿ ಕಾಲೇಜ್ ನ ಯೂತ್ ರೆಡ್ ಕ್ರಾಸ್ ನ ವಿದ್ಯಾರ್ಥಿ ಮುನವರ ಧನ್ಯವಾದವಿತ್ತರು.