ಕಳೆಂಜ : ಜನನಿ ಸಂಜೀವಿನಿ ಮಹಿಳಾ ಒಕ್ಕೂಟ ಕಳೆಂಜ (ರಿ ) ಇದರ ಒಕ್ಕೂಟದ ಮಹಾಸಭೆಯು ಸೈಂಟ್ ಸೆಬಾಸ್ಟಿಯನ್ ಚರ್ಚ್ ಕಾಯಾರ್ತಡ್ಕ ಇಲ್ಲಿಯ ಸಭಾಭವನದಲ್ಲಿ ಒಕ್ಕೂಟದ ಅಧ್ಯಕ್ಷರ ಅಧ್ಯಕ್ಷತೆಯಲ್ಲಿ ನ.28 ರಂದು ನಡೆಯಿತು.
ಮಹಾಸಭೆಯಲ್ಲಿ ಒಕ್ಕೂಟದ ಅಧ್ಯಕ್ಷರು, ಉಪಾಧ್ಯಕ್ಷರು, ಕಾರ್ಯದರ್ಶಿ, ತಾಲೂಕು ವ್ಯವಸ್ಥಾಪಕರು, ವಲಯ ಮೇಲ್ವಿಚಾರಕರು, ಪಂಚಾಯತ್ ಉಪಾಧ್ಯಕ್ಷರು, ಗ್ರಾಮ ಪಂಚಾಯತ್ ಸದಸ್ಯರು, ಒಕ್ಕೂಟದ ಪದಾಧಿಕಾರಿಗಳು, ಪಂಚಾಯತ್ ಅಭಿವೃದ್ದಿ ಅಧಿಕಾರಿ ಇವರ ಉಪಸ್ಥಿತಿಯಲ್ಲಿ ದೀಪ ಬೆಳಗಿಸುವುದರ ಮೂಲಕ ಮಹಾಸಭೆಯನ್ನು ಪ್ರಾರಂಭಿಸಲಾಯಿತು.
ತಾಲೂಕು ವ್ಯವಸ್ಥಾಪಕ ನಿತೇಶ್ ಒಕ್ಕೂಟದ ನಿಯಮ ನಿಬಂಧನೆಗಳು, ಕೃಷಿಯೇತರ ಚಟುವಟಿಕೆಗಳ ಬಗ್ಗೆ ಸಮಗ್ರವಾದ ಮಾಹಿತಿಯನ್ನು ನೀಡಿದರು ಹಾಗೂ ಒಕ್ಕೂಟದ ನೂತನ ಪದಾಧಿಕಾರಿಗಳಿಗೆ ಪದಗ್ರಹಣ ಕಾರ್ಯಕ್ರಮ ಹಾಗೂ ಒಕ್ಕೂಟದ ನಿಯಮ ಹಾಗೂ ಕಾರ್ಯವೈಖರಿ ಬಗ್ಗೆ ತಿಳಿಸಿದರು.
KSRLPS ಬೆಳ್ತಂಗಡಿಯ NRLM ನ MIS ಯಲ್ಲಿ ಉತ್ತಮ ಸಾಧನೆ ಮಾಡಿ ರಾಜ್ಯಮಟ್ಟದಲ್ಲಿ ಪ್ರಶಸ್ತಿಯನ್ನು ಪಡೆದಿರುವ ನಿತೇಶ್ ಇವರನ್ನು ಸನ್ಮಾನಿಸಲಾಯಿತು. ವಲಯ ಮೇಲ್ವಿಚಾರಕರಾದ ವೀಣಾ ಹಾಜರಿದ್ದರು. ಒಕ್ಕೂಟದ ಹೊಸ ಅಧ್ಯಕ್ಷ , ಕಾರ್ಯದರ್ಶಿ , ಕೋಶಾಧಿಕಾರಿ ಆಯ್ಕೆ ಮಾಡಲಾಯಿತು.
ಸಂಘದ ಸದಸ್ಯೆ ಶ್ರೀಮತಿ ಸರಸ್ವತಿರವರು ಕಾರ್ಯಕ್ರಮ ನಿರೂಪಣೆ ಮಾಡಿ, ಒಕ್ಕೂಟದ ಪದಾಧಿಕಾರಿ ಶ್ರೀಮತಿ ಗೀತಾರವರು ಸ್ವಾಗತಿಸಿದರು. ಕಾರ್ಯದರ್ಶಿ ಶ್ರೀಮತಿ ಜಯಶ್ರೀಯವರು ವರದಿ ಮತ್ತು ವಿಮಲ ಎನ್ ಜಮಾ ಖರ್ಚು ಮಂಡನೆ ಮಾಡಿದರು. ಈ ಸಭೆಯಲ್ಲಿ ಸಂಜೀವಿನಿ ಸಂಘದ ಸದಸ್ಯರು, ಸ್ತ್ರೀ ಶಕ್ತಿ ಸದಸ್ಯರು, ಎಮ್.ಬಿ.ಕೆ, ಎಲ್.ಸಿಆರ್ ಪಿ, ಕೃಷಿಸಖಿ, ಪಶು ಸಖಿಯರು ಹಾಜರಿದ್ದರು. ಒಕ್ಕೂಟದ ಪದಾಧಿಕಾರಿ ಉಷಾ ಧನ್ಯವಾದವಿತ್ತರು.