25.7 C
ಪುತ್ತೂರು, ಬೆಳ್ತಂಗಡಿ
May 17, 2025
ಗ್ರಾಮಾಂತರ ಸುದ್ದಿಚಿತ್ರ ವರದಿವರದಿಶಾಲಾ ಕಾಲೇಜು

ನಡ: ತಾಲೂಕು ಮಟ್ಟದ ವಿಜ್ಞಾನ ಮೇಳ

ನಡ: ಕಪುಚಿನ್ ಕೃಷಿಕ ಸೇವಾ ಕೇಂದ್ರ, ವಿಮುಕ್ತಿ, ಲ್ಯಾಲ ಬೆಳ್ತಂಗಡಿ, ವೋಲ್ಕಾರ್ಟ್ ಫೌಂಡೇಶನ್ ಇಂಡಿಯನ್ ಟ್ರಸ್ಟ್, ಇದರ ಸಹಯೋಗದೊಂದಿಗೆ ಹಾಗೂ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ, ನಡ ಇದರ ಸಂಯುಕ್ತ ಆಶ್ರಯದಲ್ಲಿ ಬೆಳ್ತಂಗಡಿ ತಾಲೂಕಿನ ಆಯ್ದ ಸರಕಾರಿ ಪ್ರಾಥಮಿಕ ಶಾಲೆಗಳ ವಿಜ್ಞಾನ ಮೇಳ ಕಾರ್ಯಕ್ರಮವನ್ನು ನ.29 ರಂದು ನಡ ಪ್ರಾಥಮಿಕ ಶಾಲೆಯಲ್ಲಿ ಆಯೋಜಿಸಲಾಗಿತ್ತು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ನಡ ಗ್ರಾಮ ಪಂಚಾಯತ್ ಅಧ್ಯಕ್ಷೆ ಮಂಜುಳಾರವರು ವಹಿಸಿದ್ದರು. ವಿಮುಕ್ತಿ ಸಂಸ್ಥೆಯ ನಿರ್ದೇಶಕ ವಂ.ಫಾ ವಿನೋದ್ ಮಸ್ಕರೇನಸ್‌ರವರು ಪ್ರಾಸ್ತವಿಕವಾಗಿ ಮಾತನಾಡಿ ಕಾರ್ಯಕ್ರಮದಲ್ಲಿ ಭಾಗವಹಿಸಿದ ಮಕ್ಕಳು ಮತ್ತು ಶಿಕ್ಷಕರನ್ನು ಶ್ಲಾಘಿಸಿದರು.

ಭಾರತೀಯ ಸಂವಿಧಾನವು ತನ್ನ ಎಲ್ಲಾ ನಾಗರಿಕರಿಗೆ ಸ್ವಾತಂತ್ರ್ಯದಿಂದ ಬದುಕಲು ಸಮಾನ ಹಕ್ಕು ಮತ್ತು ಅವಕಾಶಗಳನ್ನು ನೀಡಿದೆ, ಯಾವುದೇ ಆಧ್ಯಾತ್ಮಿಕ ಪಕ್ಷಪಾತವಿಲ್ಲದೆ “ದ್ಯಾರ್ಥಿಗಳಾದ ನಾವು ತರ್ಕಬದ್ಧವಾಗಿ ಯೋಚಿಸಬೇಕು, ನಮ್ಮ ಜ್ಞಾನದ ದಾಹವನ್ನು ಶಮನಗೊಳಿಸಲು ಪ್ರಶ್ನೆಗಳನ್ನು ಕೇಳಬೇಕು ಮತ್ತು ಯಾವಾಗಲೂ ಎಲ್ಲಾ ಅಂಶಗಳಲ್ಲಿ ವಿಜ್ಞಾನಿಗಳಂತೆ ಬದುಕಬೇಕು. ಶಾಲೆಗಳಲ್ಲಿ ಶಿಕ್ಷಕರ ಅತ್ಯುನ್ನತ ಕರ್ತವ್ಯವೆಂದೆರೆ ಚಿಕ್ಕ ವಯಸ್ಸಿನಲ್ಲಿಯೇ ಮಕ್ಕಳನ್ನು ತರ್ಕಬದ್ಧವಾಗಿ, ಸೃಜನಾತ್ಮಕವಾಗಿ ರೂಪಿಸಲು, ಕ್ರಿಯಾತ್ಮಕ ನಾಗರಿಕರಾಗಲು ಸಮಸ್ಯೆಗಳನ್ನು ಪರಿಹರಿಸುವ ಕೌಶಲ್ಯಗಳನ್ನು ಪಡೆದುಕೊಳ್ಳುವುದು ಎಂಬುದಾಗಿ ಮಾತನಾಡಿದರು.

ನಡ ಗ್ರಾಮ ಪಂಚಾಯತ್ ಅಧ್ಯಕ್ಷೆ ಮಂಜುಳಾರವರು ಕಾರ್ಯಕ್ರಮವನ್ನು ಉದ್ಘಾಟಿಸಿ ಶುಭಕೋರಿದರು.

ಕಾರ್ಯಕ್ರಮದಲ್ಲಿ ಮೋಹನ್ ಕ್ಷೇತ್ರ ಸಂಪನ್ಮೂಲ ಸಂಯೋಜಕರು ಕ್ಷೇತ್ರ ಸಂಪನ್ಮೂಲ ಕೇಂದ್ರ, ಶಾಲಾ ಮೇಲುಸ್ತುವಾರಿ ಸಮಿತಿ ಅಧ್ಯಕ್ಷ ವಸಂತ ಗೌಡ, ಹಳೇ ವಿದ್ಯಾರ್ಥಿ ಸಂಘದ ಅಧ್ಯಕ್ಷ ಧರಣೇಂದ್ರ ಜೈನ್, ಸಿ.ಆರ್.ಪಿ ನಡ ರಮೇಶ ಹಾಗೂ ತೀರ್ಪುಗಾರರಾಗಿ ಇ.ಸಿ.ಓ ಚೇತಾನಾಕ್ಷಿ, ಸಿದ್ಧಲಿಂಗ ಸ್ವಾಮಿ, ಕೊಯ್ಯೂರು ಪ್ರೌಢಶಾಲಾ ಮುಖ್ಯೋಪಾದ್ಯಾಯ ರಾಧಕೃಷ್ಣ.ಟಿ ಉಪಸ್ಥಿತರಿದ್ದರು.

ತಾಲೂಕಿನ 30 ಸರಕಾರಿ ಪ್ರಾಥಮಿಕ ಶಾಲೆಗಳಿಂದ ವಿವಿಧ ವಿಜ್ಞಾನ ಮಾದರಿಗಳನ್ನು ಪ್ರದರ್ಶನ ಮಾಡಲಾಯಿತು. ನಡ ಶಾಲಾ ಮುಖ್ಯಶಿಕ್ಷಕಿ ಪುಷ್ಪ ಸ್ವಾಗತಿಸಿದರು. ವಿಕ್ಟರ್ ಮಾಡ್ತ ವಂದಿಸಿ, ಸುಜಾತ ಕಾರ್ಯಕ್ರಮ ನಿರೂಪಿಸಿದರು.

Related posts

ಪುಂಜಾಲಕಟ್ಟೆ- ಚಾರ್ಮಾಡಿ ರಾಷ್ಟ್ರೀಯ ಹೆದ್ದಾರಿ ಕಾಮಗಾರಿ: ಕಚ್ಚಾವಸ್ತು ಪೂರೈಕೆದಾರರಿಂದ ನಾಗಪುರದಲ್ಲಿ ಪ್ರತಿಭಟನೆ – ರೂ.11.50 ಕೋಟಿ ಪಾವತಿಗೆ ಕಂಪೆನಿ ಒಪ್ಪಿಗೆ

Suddi Udaya

ಕಾಯರ್ತಡ್ಕದಲ್ಲಿ ಮಾರಕಾಯುಧದಿಂದ ಹಲ್ಲೆ ಪ್ರಕರಣ: ಆಸ್ಪತ್ರೆಗೆ ಭೇಟಿ ನೀಡಿದ ಸಂಸದ ಬ್ರಿಜೇಶ್ ಚೌಟ : ಗಂಭೀರ ಗಾಯಗೊಂಡ ರಾಜೇಶ್ ರವರ ಆರೋಗ್ಯ ವಿಚಾರಣೆ

Suddi Udaya

ಎಸ್.ಎಸ್.ಎಲ್.ಸಿ. ಫಲಿತಾಂಶ: ಧರ್ಮಸ್ಥಳದ ಆಂಗ್ಲಮಾಧ್ಯಮ ಶಾಲೆಗೆ ಶೇ. 100 ಫಲಿತಾಂಶ

Suddi Udaya

ನಾರಾವಿ: ಮರಕ್ಕೆ ಡಿಕ್ಕಿ ಹೊಡೆದ ಬೈಕ್ – ಇಬ್ಬರು ಸ್ಥಳದಲ್ಲಿಯೇ ಸಾವು

Suddi Udaya

ನಾಗರಿಕ ಯುವಜನ ವೇದಿಕೆಯಿಂದ ಯೂತ್ ಸಿವಿಲ್ ಫಾರಂ ಬೆಳ್ತಂಗಡಿ ಇದರ ನೂತನ ಸಮಿತಿ ರಚನೆ

Suddi Udaya

ಶ್ರೀರಾಮ ನವಮಿ ಪ್ರಯುಕ್ತ ಮಠದ ಪಟ್ಟದ ದೇವರಿಗೆ ಪಂಚಾಮೃತ ಅಭಿಷೇಕ ರಾಮೋತ್ಸವ

Suddi Udaya
error: Content is protected !!