September 6, 2026
ಗ್ರಾಮಾಂತರ ಸುದ್ದಿಚಿತ್ರ ವರದಿವರದಿಶಾಲಾ ಕಾಲೇಜು

ನಡ: ತಾಲೂಕು ಮಟ್ಟದ ವಿಜ್ಞಾನ ಮೇಳ

ನಡ: ಕಪುಚಿನ್ ಕೃಷಿಕ ಸೇವಾ ಕೇಂದ್ರ, ವಿಮುಕ್ತಿ, ಲ್ಯಾಲ ಬೆಳ್ತಂಗಡಿ, ವೋಲ್ಕಾರ್ಟ್ ಫೌಂಡೇಶನ್ ಇಂಡಿಯನ್ ಟ್ರಸ್ಟ್, ಇದರ ಸಹಯೋಗದೊಂದಿಗೆ ಹಾಗೂ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ, ನಡ ಇದರ ಸಂಯುಕ್ತ ಆಶ್ರಯದಲ್ಲಿ ಬೆಳ್ತಂಗಡಿ ತಾಲೂಕಿನ ಆಯ್ದ ಸರಕಾರಿ ಪ್ರಾಥಮಿಕ ಶಾಲೆಗಳ ವಿಜ್ಞಾನ ಮೇಳ ಕಾರ್ಯಕ್ರಮವನ್ನು ನ.29 ರಂದು ನಡ ಪ್ರಾಥಮಿಕ ಶಾಲೆಯಲ್ಲಿ ಆಯೋಜಿಸಲಾಗಿತ್ತು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ನಡ ಗ್ರಾಮ ಪಂಚಾಯತ್ ಅಧ್ಯಕ್ಷೆ ಮಂಜುಳಾರವರು ವಹಿಸಿದ್ದರು. ವಿಮುಕ್ತಿ ಸಂಸ್ಥೆಯ ನಿರ್ದೇಶಕ ವಂ.ಫಾ ವಿನೋದ್ ಮಸ್ಕರೇನಸ್‌ರವರು ಪ್ರಾಸ್ತವಿಕವಾಗಿ ಮಾತನಾಡಿ ಕಾರ್ಯಕ್ರಮದಲ್ಲಿ ಭಾಗವಹಿಸಿದ ಮಕ್ಕಳು ಮತ್ತು ಶಿಕ್ಷಕರನ್ನು ಶ್ಲಾಘಿಸಿದರು.

ಭಾರತೀಯ ಸಂವಿಧಾನವು ತನ್ನ ಎಲ್ಲಾ ನಾಗರಿಕರಿಗೆ ಸ್ವಾತಂತ್ರ್ಯದಿಂದ ಬದುಕಲು ಸಮಾನ ಹಕ್ಕು ಮತ್ತು ಅವಕಾಶಗಳನ್ನು ನೀಡಿದೆ, ಯಾವುದೇ ಆಧ್ಯಾತ್ಮಿಕ ಪಕ್ಷಪಾತವಿಲ್ಲದೆ “ದ್ಯಾರ್ಥಿಗಳಾದ ನಾವು ತರ್ಕಬದ್ಧವಾಗಿ ಯೋಚಿಸಬೇಕು, ನಮ್ಮ ಜ್ಞಾನದ ದಾಹವನ್ನು ಶಮನಗೊಳಿಸಲು ಪ್ರಶ್ನೆಗಳನ್ನು ಕೇಳಬೇಕು ಮತ್ತು ಯಾವಾಗಲೂ ಎಲ್ಲಾ ಅಂಶಗಳಲ್ಲಿ ವಿಜ್ಞಾನಿಗಳಂತೆ ಬದುಕಬೇಕು. ಶಾಲೆಗಳಲ್ಲಿ ಶಿಕ್ಷಕರ ಅತ್ಯುನ್ನತ ಕರ್ತವ್ಯವೆಂದೆರೆ ಚಿಕ್ಕ ವಯಸ್ಸಿನಲ್ಲಿಯೇ ಮಕ್ಕಳನ್ನು ತರ್ಕಬದ್ಧವಾಗಿ, ಸೃಜನಾತ್ಮಕವಾಗಿ ರೂಪಿಸಲು, ಕ್ರಿಯಾತ್ಮಕ ನಾಗರಿಕರಾಗಲು ಸಮಸ್ಯೆಗಳನ್ನು ಪರಿಹರಿಸುವ ಕೌಶಲ್ಯಗಳನ್ನು ಪಡೆದುಕೊಳ್ಳುವುದು ಎಂಬುದಾಗಿ ಮಾತನಾಡಿದರು.

ನಡ ಗ್ರಾಮ ಪಂಚಾಯತ್ ಅಧ್ಯಕ್ಷೆ ಮಂಜುಳಾರವರು ಕಾರ್ಯಕ್ರಮವನ್ನು ಉದ್ಘಾಟಿಸಿ ಶುಭಕೋರಿದರು.

ಕಾರ್ಯಕ್ರಮದಲ್ಲಿ ಮೋಹನ್ ಕ್ಷೇತ್ರ ಸಂಪನ್ಮೂಲ ಸಂಯೋಜಕರು ಕ್ಷೇತ್ರ ಸಂಪನ್ಮೂಲ ಕೇಂದ್ರ, ಶಾಲಾ ಮೇಲುಸ್ತುವಾರಿ ಸಮಿತಿ ಅಧ್ಯಕ್ಷ ವಸಂತ ಗೌಡ, ಹಳೇ ವಿದ್ಯಾರ್ಥಿ ಸಂಘದ ಅಧ್ಯಕ್ಷ ಧರಣೇಂದ್ರ ಜೈನ್, ಸಿ.ಆರ್.ಪಿ ನಡ ರಮೇಶ ಹಾಗೂ ತೀರ್ಪುಗಾರರಾಗಿ ಇ.ಸಿ.ಓ ಚೇತಾನಾಕ್ಷಿ, ಸಿದ್ಧಲಿಂಗ ಸ್ವಾಮಿ, ಕೊಯ್ಯೂರು ಪ್ರೌಢಶಾಲಾ ಮುಖ್ಯೋಪಾದ್ಯಾಯ ರಾಧಕೃಷ್ಣ.ಟಿ ಉಪಸ್ಥಿತರಿದ್ದರು.

ತಾಲೂಕಿನ 30 ಸರಕಾರಿ ಪ್ರಾಥಮಿಕ ಶಾಲೆಗಳಿಂದ ವಿವಿಧ ವಿಜ್ಞಾನ ಮಾದರಿಗಳನ್ನು ಪ್ರದರ್ಶನ ಮಾಡಲಾಯಿತು. ನಡ ಶಾಲಾ ಮುಖ್ಯಶಿಕ್ಷಕಿ ಪುಷ್ಪ ಸ್ವಾಗತಿಸಿದರು. ವಿಕ್ಟರ್ ಮಾಡ್ತ ವಂದಿಸಿ, ಸುಜಾತ ಕಾರ್ಯಕ್ರಮ ನಿರೂಪಿಸಿದರು.

Related posts

ಬೆಳ್ತಂಗಡಿ ಟೀಚರ್ಸ್ ಕೋ-ಆಪರೇಟಿವ್ ಬ್ಯಾಂಕ್ ವತಿಯಿಂದ ನಿವೃತ್ತ ಶಿಕ್ಷಕರಿಗೆ-ಶಾಖ ಸಿಬ್ಬಂದಿಗಳಿಗೆ ಗೌರವ ಪುರಸ್ಕಾರ ಸಮಾರಂಭ

Suddi Udaya

ಕೊಕ್ಕಡ: ಮುಂಡೂರುಪಳಿಕೆ ಯುವಶಕ್ತಿ ಫ್ರೆಂಡ್ಸ್ ವತಿಯಿಂದ ಕೆಸರ್ ದ ಕಂಡೊಡು ಒಂಜಿ‌ದಿನ

Suddi Udaya

ಬೆಳ್ತಂಗಡಿ: ಅಖಿಲ ಕರ್ನಾಟಕ ರಾಜಕೇಸರಿ ಟ್ರಸ್ಟ್ ವತಿಯಿಂದ ಉಚಿತ ಪುಸ್ತಕ, ಬ್ಯಾಗ್ ವಿತರಣೆ

Suddi Udaya

ಧರ್ಮಸ್ಥಳದಲ್ಲಿ ವಿಜಯದಶಮಿ ಪ್ರಯುಕ್ತ ತೆನೆಹಬ್ಬ ಆಚರಣೆ

Suddi Udaya

ಬೆಳ್ತಂಗಡಿಯ ಸಿಮ್ರಾ ಪರ್ವಿನ್ ಗೆ ಬ್ಯಾರೀಸ್ ವೆಲ್‌ಫೇರ್ ಅಸೋಸಿಯೇಷನ್ ಮೂಲಕ ಶಿಕ್ಷಣ ಸಚಿವರಿಂದ ಸನ್ಮಾನ

Suddi Udaya

ಶ್ರೀ ಕೃಷ್ಣ ಜನ್ಮಾಷ್ಟಮಿಯ ಪ್ರಯುಕ್ತ ಆದೂರು ಪೇರಲ್ ನ ಶ್ರೀ ಕೃಷ್ಣ ಭಜನಾ ಮಂದಿರದಲ್ಲಿ ದೇವರಿಗೆ ವಿಶೇಷ ಭಜನಾ ಕಾರ್ಯಕ್ರಮ

Suddi Udaya
error: Content is protected !!