25.3 C
ಪುತ್ತೂರು, ಬೆಳ್ತಂಗಡಿ
April 4, 2025
ಗ್ರಾಮಾಂತರ ಸುದ್ದಿಚುನಾವಣೆತಾಲೂಕು ಸುದ್ದಿ

ನಾರಾವಿ ಮಾಂಡೋವಿ ಮೋಟಾರ್ಸ್ ನಲ್ಲಿ 100 ನೇ ಕಾರಿನ ಕೀ ಹಸ್ತಾಂತರ ಕಾರ್ಯಕ್ರಮ

ನಾರಾವಿ: ದ.ಕ ಜಿಲ್ಲೆಯ ಪ್ರತಿಷ್ಠಿತ ಮಾರುತಿ ಸುಝುಕಿ ಕಾರುಗಳ ಅಧಿಕೃತ ಮಾರಾಟಗಾರರಾದ ಮಾಂಡೋವಿ ಮೋಟಾರ್ಸ್ ಪ್ರೈ. ಲಿ. ಮಂಗಳೂರು ಇವರ ನೂತನ ಶಾಖೆ ನಾರಾವಿಯಲ್ಲಿ ನೂರನೇ ಕಾರಿನ ಕೀಲಿ ಹಸ್ತಾಂತರ ಕಾರ್ಯಕ್ರಮ ನ.24 ರಂದು ನಡೆಯಿತು.

ಈ ಸಂದರ್ಭದಲ್ಲಿ ನೂತನ ಕಾರಿನ ಕೀಲಿಯನ್ನು ಗ್ರಾಹಕರಾದ ಕರುಣಾಕರ ಜೈನ್ ನಾರಾವಿ,ಪದ್ಮಪ್ರಸಾದ್ ಜೈನ್ ನಾರಾವಿ, ಸುಬ್ರಹ್ಮಣ್ಯ ಭಟ್ ಪಣಕಾಜೆ, ಹಬೀಬ್ ಮುತ್ರಿಮಜಲು ರವರಿಗೆ ಹಸ್ತಾಂತರಿಸಲಾಯಿತು.

ಕಾರ್ಯಕ್ರಮದಲ್ಲಿ ನಾರಾವಿ ಗ್ರಾಮ ಪಂಚಾಯತ್ ಅಧ್ಯಕ್ಷ ರಾಜವರ್ಮ ಜೈನ್, ಉದ್ಯಮಿಗಳಾದ ರೋಶನ್ ಹೆಗ್ಡೆ, ಸುರೇಂದ್ರ ಕುಮಾರ್ ಹಾಗೂ ರವಿಕುಮಾರ್ ಅರಸಿಕಟ್ಟೆಉಪಸ್ಥಿತರಿದ್ದರು.

ಮಾಂಡೋವಿ ಮೋಟಾರ್ಸ್ ಮಂಗಳೂರು ರೂರಲ್ ಸೇಲ್ಸ್ ಮ್ಯಾನೇಜರ್ ಸುಜಿತ್ ಕಾರ್ಯಕ್ರಮ ನಿರೂಪಿಸಿ, ಎಜಿಎಂ Nexa ಸೇಲ್ಸ್ ಅಕ್ಷಯ್ ಕುಮಾರ್ ವಂದಿಸಿದರು.

ಈ ಸಂದರ್ಭದಲ್ಲಿ ಗಣೇಶ್ ಕುಲಾಲ್ (Works Manager)ನಾರಾವಿ, ಮಾಂಡೋವಿ ಮೋಟಾರ್ಸ್ ಕ್ಯಾಲಿಟಿ ಕೇರ್ ಮ್ಯಾನೇಜರ್ ಗಿರೀಶ್ ಎಲ್.ಪಿ, ಸೇಲ್ಸ್ ಆಫೀಸರ್ ಗಳಾದ ಕಿಶೋರ್ ಕುಮಾರ್, ಸುಹಾಸ್ ಜೈನ್, ಸುಮಂತ್ ರಾಜ್, ಲೋಕೇಶ್ ಉಪಸ್ಥಿತರಿದ್ದರು.

ಅತೀ ಕಡಿಮೆ ಸಮಯದಲ್ಲಿ ನಾರಾವಿ ಗ್ರಾಮೀಣ ಪ್ರದೇಶದಲ್ಲಿ ನೂರು ಕಾರುಗಳ ಮಾರಾಟಕ್ಕೆ ಸಹಕರಿಸಿದ ಎಲ್ಲಾ ನಾರಾವಿ ಪರಿಸರದ ಗ್ರಾಹಕರಿಗೆ ಮಾಂಡೋವಿ ಮೋಟಾರ್ಸ್ ಆಡಳಿತ ಮಂಡಳಿ ಕೃತಜ್ಞತೆ ಸಲ್ಲಿಸಿದೆ.

ಟೀಮ್ ಸೇಲ್ಸ್ ಮ್ಯಾನೇಜರ್ ಚರಣ್ ಕುಮಾರ್ ಆಗಮಿಸಿದ ಅತಿಥಿ ಗಣ್ಯರನ್ನು ಸ್ವಾಗತಿಸಿ , ಮಾಂಡೋವಿ ಮೋಟಾರ್ಸ್ಸ್ ಬಗ್ಗೆ ತಿಳಿಸಿದರು.

Related posts

ಬೆಳ್ತಂಗಡಿ ಕಾಂಗ್ರೆಸ್ ಕಚೇರಿಗೆ ಕೃಷಿ ಸಚಿವ ಚೆಲುವರಾಯಸ್ವಾಮಿ ಭೇಟಿ: ಹಲವು ಬೇಡಿಕೆಗಳಿಗೆ ಶೀಘ್ರವಾಗಿ ಸ್ಪಂದಿಸುವ ಭರವಸೆ ವ್ಯಕ್ತಪಡಿಸಿದ ಸಚಿವರು

Suddi Udaya

ಕಾಶಿಪಟ್ಣ ಬಿಜೆಪಿ ಶಕ್ತಿ ಕೇಂದ್ರದ ಅಧ್ಯಕ್ಷರಾಗಿ ಮೋಹನ್ ಶೆಟ್ಟಿ ಆಯ್ಕೆ

Suddi Udaya

ತಾಲೂಕು ಬಿಜೆಪಿ ಯುವಮೋರ್ಚಾದ ಅಧ್ಯಕ್ಷ ಶಶಿರಾಜ್ ಶೆಟ್ಟಿಯವರ ಅಜ್ಜಿ ಹೇಮಾವತಿ ಶೆಟ್ಟಿ ಹೃದಯಾಘಾತದಿಂದ ನಿಧನ

Suddi Udaya

ಬಡಗಕಾರಂದೂರು ಸ.ಉ.ಹಿ.ಪ್ರಾ ಶಾಲೆಯಲ್ಲಿ ಶಾಲಾಭಿವೃದ್ಧಿ-ಮೇಲುಸ್ತುವಾರಿ ಸಮಿತಿಯ ವತಿಯಿಂದ ಸ್ವಚ್ಚತಾ ಕಾರ್ಯಕ್ರಮ

Suddi Udaya

ಕಲ್ಮಂಜ ಪ್ರೌಢಶಾಲೆಯ ವಿದ್ಯಾರ್ಥಿಗಳು ಯೋಗಾಸನದಲ್ಲಿ ವಿಭಾಗಮಟ್ಟಕ್ಕೆ ಆಯ್ಕೆ

Suddi Udaya

ಧರ್ಮಸ್ಥಳದಲ್ಲಿ ನವಜೀವನ ಸದಸ್ಯರ ಶತದಿನೋತ್ಸವ: ಕಾರ್ಯಕ್ರಮದ ಅಂಗವಾಗಿ ವ್ಯಸನಮುಕ್ತ ಸಾಧಕರ ಸಮಾವೇಶ

Suddi Udaya
error: Content is protected !!