ಬೆಳ್ತಂಗಡಿ: ಬೆಳ್ತಂಗಡಿ ಠಾಣೆಯಲ್ಲಿ ದಾಖಲಾದ ಪ್ರಕರಣವೊಂದಕ್ಕೆ ಸಂಬಂಧಿಸಿದಂತೆ ನ್ಯಾಯಾಲಯದ ವಿಚಾರಣೆಗೆ ಹಾಜರಾಗದೇ ಕಳೆದ 56 ವರ್ಷಗಳಿಂದ ವಿವಿಧ ಹೆಸರುಗಳಿಂದ ತಲೆಮರೆಸಿಕೊಂಡಿದ್ದ ವ್ಯಕ್ತಿಯ ಕುಟುಂಬವನ್ನು ಪ್ರಕರಣವನ್ನು ಬೆಳ್ತಂಗಡಿ ಠಾಣಾ ಪೊಲೀಸರು ಪತ್ತೆ ಹಚ್ಚಿದ್ದಾರೆ. ಆದರೆ ಆರೋಪಿ ಮರಣ ಹೊಂದಿರುವುದು ಬೆಳಕಿಗೆ ಬಂದಿದೆ.
ವಿವಿಧ ಹೆಸರುಗಳಿಂದ ತಲೆಮರೆಸಿಕೊಂಡಿದ್ದ ಸಿ.ಎಂ ರಾಮಯ್ಯ @ ಸಿ.ಎಂ ರಾಮು @ ಸಿ.ಎಂ ಮಾಮು @ ಸಿ.ಎಂ ಬಿದ್ಧಪ್ಪ (33 ವ) ಎಂಬವರ ಪತ್ತೆಗಾಗಿ ಬೆಳ್ತಂಗಡಿ ಠಾಣಾ ಪೊಲೀಸ್ ಉಪನಿರೀಕ್ಷಕರಾದ ಪಿಎಸ್‌ಐ ಧನರಾಜ್ ಟಿ.ಎಂ. ಮತ್ತು ಪಿಎಸೈ(ತನಿಖೆ) ಚಂದ್ರಶೇಖರ್ ಎ ಎಮ್ ರವರ ನೇತೃತ್ವದಲ್ಲಿ ಹೆಚ್. ಸಿ. ಗಂಗಾಧರ್ ಬಿ. ಮತ್ತು ಹೆಚ್ .ಸಿ. ಆಶೋಕ್ ರವರು ಕೊಡಗು ಜಿಲ್ಲೆಯ ವಿರಾಜಪೇಟೆ ತಾಲೂಕಿನ ವಿವಿಧ ಕಡೆಗಳಲ್ಲಿ ಸಂಚರಿಸಿದ್ದರು. ಈ ವೇಳೆಯಲ್ಲಿ ಆರೋಪಿಯ ಮಗ ಮತ್ತು ಪತ್ನಿ ವಾಸ್ತವ್ಯವಿದ್ದ ಮನೆಯನ್ನು ಪತ್ತೆ ಹಚ್ಚಿ ಕೂಲಂಕುಷವಾಗಿ ವಿಚಾರಿಸಲಾಗಿತ್ತು.
ವಿಚಾರಣೆಯ ವೇಳೆಗೆ ಸದ್ರಿ ಸುದೀರ್ಘ ಕಾಲದಿಂದ ತಲೆಮರೆಸಿಕೊಂಡಿದ್ದ ಆರೋಪಿ 2019 ನ. 26 ರಂದು ಮರಣ ಹೊಂದಿರುವುದಾಗಿ ತಿಳಿದು ಬಂದಿರುತ್ತು.
ಸದ್ರಿ ವ್ಯಕ್ತಿಯ ಮರಣದ ಬಗ್ಗೆ ಸೂಕ್ತ ದಾಖಲಾತಿಗಳನ್ನು ಪಡೆದು, 56 ವರ್ಷಗಳಷ್ಟು ಹಳೆಯದಾದ ಪ್ರಕರಣವನ್ನು ಪತ್ತೆ ಹಚ್ಚಿ ಸಾರ್ವಜನಿಕ ವಲಯದಲ್ಲಿ ಪ್ರಶಂಸೆಗೆ ಪಾತ್ರರಾಗಿರುತ್ತಾರೆ.