ಬೆಳ್ತಂಗಡಿ: ಇತಿಹಾಸ ಪ್ರಸಿದ್ದ ಅಳದಂಗಡಿ ಅರಮನೆಯ ವತಿಯಿಂದ ಪ್ರತಿ ವರ್ಷದಂತೆ ಈ ವರ್ಷವು ನ. 30ರಂದು ಪಟ್ಟದ ಕಂಬಳವು ಅಳದಂಗಡಿ ತಿಮ್ಮಣ್ಣರಸರಾದ ಡಾ. ಪದ್ಮಪ್ರಸಾದ ಅಜಿಲರವರು ನೇತೃತ್ವದಲ್ಲಿ ಅದ್ದೂರಿಯಾಗಿ ಜರುಗಿತು.

ಅರಮನೆಯ ರಾಜನ್ ದೈವಕ್ಕೆ ನೇಮವಾಗಿ ನಂತರ ಮೆರವಣಿಗೆಯಲ್ಲಿ ಊರವರು, ಸೀಮೆಯ ಗುರಿಕಾರರು ಸೇರಿ ಕಂಬಳ ಗದ್ದೆಗೆ ಬಂದು ಕಂಬಳದ ಗದ್ದೆಯ ಮಧ್ಯೆದಲ್ಲಿ ನಾಲ್ಕು ಕಂಬಗಳ ‘ಪೂಕರೆ’ಯನ್ನು ಹಾಕಲಾಯಿತು. ಪೂಕರೆ ಹಾಕಿದ ಮರುದಿನ ಗದ್ದೆ ನಾಟಿ ಕಾರ್ಯ ನಡೆಯಲಿದೆ.