ಕೊಕ್ಕಡ : ಸೌತಡ್ಕ ಶ್ರೀ ಮಹಾಗಣಪತಿ ದೇವಸ್ಥಾನದಲ್ಲಿ ನಡೆದ ಅಷ್ಟಮಂಗಳ ಪ್ರಶ್ನೆಯಲ್ಲಿ ದೇವಸ್ಥಾನದ ಹತ್ತಿರ ಕಡಿರ ಬನ ಎಂಬಲ್ಲಿ ನಾಗನ ಸಾನಿಧ್ಯ ಇದ್ದು, ನಾಗನ ಬಗ್ಗೆ ಕಂಡು ಬರಲಿಲ್ಲ. ದೇವಸ್ಥಾನದಲ್ಲಿ 2 ವರ್ಷಗಳ ಹಿಂದೆ ಪ್ರಶ್ನೆ ಚಿಂತನೆಯಲ್ಲಿ ಕಂಡು ಬಂದಂತೆ ನಾಗತಂಬಿಲ ನೆರವೇರಿಸಲಾಯಿತು. ಆ ಜಾಗ ಸರಕಾರ ಎಂದು ತಿಳಿದು ಬಂದ ಕೂಡಲೇ ಜಿಲ್ಲಾಧಿಕಾರಿಗಳಿಗೆ ಜಾಗವನ್ನು ದೇವಸ್ಥಾನಕ್ಕೆ ಮಾಡಿಕೊಡಬೇಕೆಂದು ಬರೆದುಕೊಳ್ಳಲಾಯಿತು. ಅದರಂತೆ 5ಎಕ್ರೆ ಜಾಗವನ್ನು ಜಿಲ್ಲಾಧಿಕಾರಿಯವರು ಧಾರ್ಮಿಕ ದತ್ತಿ ಇಲಾಖೆಗೆ ಮಂಜೂರುಗೊಳಿಸಿ ದೇವಸ್ಥಾನಕ್ಕೆ ಹಸ್ತಾಂತರಿಸಲಾಯಿತು.
ದೇವಸ್ಥಾನದ ವತಿಯಿಂದ 12 ದಿನಗಳ ಹಿಂದೆ ಅನುಜ್ಞ ಕಲಶ ನೆರವೇರಿಸಿ ಡಿ.2ರಂದು ಜೀರ್ಣೋದ್ದಾರ ಕೆಲಸ ಪ್ರಾರಂಭಿಸಲಾಯಿತು. ಈ ಸಂಧರ್ಭ ತಂಬೂರಿ ನಾಗ, ನಾಗ, ಕಾಡ್ಯಾ ನಾಗ ಎನ್ನುವ ನಾಲ್ಕು ನಾಗನ ಕಲ್ಲುಗಳು ಹಾಗೂ ನಾಗನ ಉಬ್ಬು ಚಿತ್ರಗಳನ್ನು ಹೊಂದಿದ ಗಟ್ಟಿಮುಟ್ಟಾದ 2ಮಣ್ಣಿನ ಮಡಕೆ, 1ತಿಬಿಲೆ ದೊರೆತಿದೆ. ಜಗನ್ನಿವಾಸ ರಾವ್ ರವರು ಇದು ಸುಮಾರು 500ವರ್ಷಗಳ ಹಿಂದಿನ ವಸ್ತುಗಳು ಹಾಗೂ ಇದು ಬಹಳ ಅಪರೂಪ ಎಂದು ವಿವರಿಸಿದ್ದಾರೆ.