24.7 C
ಪುತ್ತೂರು, ಬೆಳ್ತಂಗಡಿ
May 18, 2025
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿವರದಿ

ಮುಂಡಾಜೆ ಶ್ರೀ ಸನ್ಯಾಸಿಕಟ್ಟೆ ಪರಶುರಾಮ ದೇವಸ್ಥಾನದ ವಾರ್ಷಿಕ ದೀಪೋತ್ಸವ ಸಂಪನ್ನ

ಬೆಳ್ತಂಗಡಿ: ಮುಂಡಾಜೆಯ ಶ್ರೀ ಸನ್ಯಾಸಿಕಟ್ಟೆ ಪರಶುರಾಮ ದೇವಸ್ಥಾನದ ವಾರ್ಷಿಕ ದೀಪೋತ್ಸವ ಕಾರ್ಯಕ್ರಮ ಡಿ.1 ರಂದು ಜರಗಿತು.

ವೇದಮೂರ್ತಿ ರವಿಕಿರಣ ಮರಾಠೆ ಅವರ ನೇತೃತ್ವದಲ್ಲಿ ಬೆಳಿಗ್ಗೆ ಪರಶುರಾಮ, ಸಿದ್ಧಿ ವಿನಾಯಕ, ಅನ್ನಪೂರ್ಣೇಶ್ವರಿ ಸನ್ನಿಧಿಯಲ್ಲಿ ವಿಶೇಷ ಸೇವೆಗಳು ಜರಗಿದವು. ದೇವರಿಗೆ ಅಡಕೆ, ತೆಂಗು ಹಾಗೂ ಇತರ ಕೃಷಿ ಉತ್ಪನ್ನಗಳ ರಾಶಿ ಪೂಜೆ,ಆಹ್ವಾನಿತ ಭಜನಾ ತಂಡಗಳಿಂದ ಕುಣಿತ ಭಜನೆ ಸಾರ್ವಜನಿಕ ಅನ್ನ ಸಂತರ್ಪಣೆ ನಡೆಯಿತು.


ಸಂಜೆ ಸ್ಯಾಕ್ಸೋಫೋನ್ ವಾದನ, ನೃತ್ಯ ಕಾರ್ಯಕ್ರಮ, ದೇವರ ಉತ್ಸವ, ಅಷ್ಟಸೇವೆ, ಮಹಾಪೂಜೆ ನಡೆಯಿತು.
ರಾಕೇಶ ಫಡಕೆ, ಋತುಪರ್ಣ ಡೋಂಗ್ರೆ, ಪ್ರೇಮಾನಂದ ಫಡಕೆ, ಶಶಾಂಕ ಮರಾಠೆ, ಶ್ರೀಕಾಂತ ಗೋರೆ, ಸುಧೀರ ಪರಾಂಜಪೆ, ರಾಘವೇಂದ್ರ ಪಟವರ್ಧನ್ ಮತ್ತಿತರರು ವೈದಿಕ ಕಾರ್ಯಕ್ರಮಗಳಲ್ಲಿ ಸಹಕಾರ ನೀಡಿದರು.


ಆಡಳಿತ ಮೊಕ್ತೇಸರ ವೆಂಕಟೇಶ್ವರ ಭಟ್, ಗೌರವಾಧ್ಯಕ್ಷ ಜಗದೀಶ್ ಆರ್‌.ಫಡಕೆ,ಅಧ್ಯಕ್ಷ ವಾಸುದೇವ ಗೋಖಲೆ, ಉಪಾಧ್ಯಕ್ಷ ವಿಶ್ವನಾಥ ಶೆಟ್ಟಿ,ಕಾರ್ಯದರ್ಶಿ ಬಾಬು ಪೂಜಾರಿ, ಖಜಾಂಜಿ ಪ್ರಹ್ಲಾದ್ ಫಡಕೆ, ಜಾತ್ರೋತ್ಸವ ಸಮಿತಿಯ ಅಧ್ಯಕ್ಷ ಅಗರಿ ರಾಮಣ್ಣ ಶೆಟ್ಟಿ, ಕಾರ್ಯದರ್ಶಿ ಜಯಚಂದ್ರ ಎಂ.ಪಿ.,ಖಜಾಂಜಿ ರಾಮಚಂದ್ರ ಭಟ್ ಸದಸ್ಯರು ಹಾಗೂ ಭಕ್ತಾದಿಗಳು ಉಪಸ್ಥಿತರಿದ್ದರು.

Related posts

ಲಾಯಿಲ ಜ್ಯೋತಿ ಆಸ್ಪತ್ರೆಯಲ್ಲಿ ಕೆಎಂಸಿ ಸಹಯೋಗದೊಂದಿಗೆ ತುರ್ತು ಚಿಕಿತ್ಸಾ ಘಟಕದ ಲೋಕಾರ್ಪಣೆ: ಗ್ರಾಮೀಣ ಭಾಗದ ಜನರಿಗೆ ಉತ್ತಮ ಆರೋಗ್ಯ ಸೇವೆ: ಬಿಷಪ್

Suddi Udaya

ಬೆಳ್ತಂಗಡಿ: ವಾಣಿ ಕಾಲೇಜಿನಲ್ಲಿ ಪೋಷಕರ ಸಭೆ

Suddi Udaya

ದ‌.ಕ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ನಿಂದ ವೇಣೂರು ಸಿಎ ಬ್ಯಾಂಕಿಗೆ ಪ್ರೋತ್ಸಾಹಕ ಪ್ರಶಸ್ತಿ

Suddi Udaya

ಡಾನ್ಸ್ ರಿಯಾಲಿಟಿ ಶೋ: ಬೆಳ್ತಂಗಡಿಯ ಟಿವಾ ಡಾನ್ಸ್ ಕ್ರೀವ್ ವಿದ್ಯಾರ್ಥಿನಿ ಕು| ವಂಶಿ ತಂಡ ದ್ವಿತೀಯ ಸ್ಥಾನ

Suddi Udaya

ಪಾದಾಯಾತ್ರಿಗಳಿಗೆ ಕಲ್ಮಂಜದ ಮದಿಮಾಲಕಟ್ಟೆಯ ಜಾನಕಿ ಮತ್ತು ಮಕ್ಕಳಿಂದ ಅನ್ನದಾನ ಸೇವೆ

Suddi Udaya

ಉಜಿರೆ ಹಳೆಪೇಟೆ ಬಳಿ ಮತ್ತೆ ರಸ್ತೆಗುರುಳಿದ ಮರ: ತಪ್ಪಿದ ಭಾರಿ ಅಪಾಯ

Suddi Udaya
error: Content is protected !!