24.1 C
ಪುತ್ತೂರು, ಬೆಳ್ತಂಗಡಿ
May 25, 2025
ಗ್ರಾಮಾಂತರ ಸುದ್ದಿಚಿತ್ರ ವರದಿ

ಬಂಟರಯಾನೆ ನಾಡವರ ಸಂಘ ಬೆಳ್ತಂಗಡಿ, ತಾಲೂಕು ಮಹಿಳಾ ಬಂಟರ ವಿಭಾಗ ಹಾಗೂ ತಾಲೂಕು ಯುವ ಬಂಟರ ವಿಭಾಗ ನೇತೃತ್ವ ಗುರುವಾಯನಕೆರೆಯಲ್ಲಿ ಸಂಭ್ರಮದ ಬಂಟೋತ್ಸವ

ಬೆಳ್ತಂಗಡಿ: ಬಂಟರಯಾನೆ ನಾಡವರ ಸಂಘ ಬೆಳ್ತಂಗಡಿ, ಬಂಟರ ಭವನ, ಗುರುವಾಯನಕೆರೆ, ಮತ್ತು ತಾಲೂಕು ಮಹಿಳಾ ವಿಭಾಗ ಹಾಗೂ ತಾಲೂಕು ಯುವ ಬಂಟರ ವಿಭಾಗ ಇವುಗಳ ಸಂಯುಕ್ತ ಆಶ್ರಯದಲ್ಲಿ ಬಂಟೋತ್ಸವ- 2023 ಕಾರ್ಯಕ್ರಮವು ಡಿ.3 ರಂದು ಬಂಟರ ಭವನ ಗುರುವಾಯನಕೆರೆಯಲ್ಲಿ ಆದ್ದೂರಿಯಾಗಿ ನಡೆಯಿತು.

ಕಾರ್ಯಕ್ರಮ ಉದ್ಘಾಟನೆಯನ್ನು ಹೇರಾಂಭ ಇಂಡಸ್ಟ್ರೀಸ್ ಮುಂಬಯಿ ಇದರ ಸಿ.ಎಂ.ಡಿ ಸದಾಶಿವ ಶೆಟ್ಟಿ ಕನ್ಯಾನ ನೆರವೇರಿಸಿದರು . ಬಂಟರ ಯಾನೆ ನಾಡವರ ಸಂಘ ಬೆಳ್ತಂಗಡಿ ಇದರ ಅಧ್ಯಕ್ಷ ಜಯರಾಮ ಶೆಟ್ಟಿ ಮುಂಡಾಡಿಗುತ್ತು ಅಧ್ಯಕ್ಷತೆ ವಹಿಸಿದರು.

ಮುಖ್ಯ ಅತಿಥಿಗಳಾಗಿ ಬಂಟರ ಸಂಘ ಹುಬ್ಬಳ್ಳಿ, ಧಾರವಾಡ ಅಧ್ಯಕ್ಷ ಸುಗ್ಗಿ ಸುಧಾಕರ ಶೆಟ್ಟಿ, ಪಂಜುರ್ಲಿ ಗ್ರೂಪ್ ಆಫ್‌ ಹೋಟೆಲ್ಸ್‌ ಹುಬ್ಬಳ್ಳಿ ಉದ್ಯಮಿ ರಾಜೇಂದ್ರ ವಿ.ಶೆಟ್ಟಿ, ಬಂಟರ ಸಂಘ ಪಿಂಪ್ರಿ-ಚಿಂಕ್ವಾಡ್ ಅಧ್ಯಕ್ಷ ರಾಕೇಶ್‌ ರೈ ಬೆಳ್ಳಾರೆ ಭಾಗವಹಿಸಿದ್ದರು. ಪ್ರಶಾಂತ್ ಶೆಟ್ಟಿ, ಉದ್ಯಮಿಗಳೆ ಕನಕ ಹಾಸ್ಪಿಟಾಲಿಟಿ, ಕುರ್ಕಾಲು ಹರೀಶ್ ಶೆಟ್ಟಿ, ಉದ್ಯಮಿಗಳು, ಪುಣೆ, ಅಧ್ಯಕ್ಷರು, ತುಳುಕೂಟ ಪಿಂಪ್ರಿ- ಚಿಂಕ್ವಾಡ್, ಉಜಿರೆ ದಿನೇಶ್ ಶೆಟ್ಟಿ, ಉದ್ಯಮಿಗಳು ಪುಣೆ.ಉಪಾಧ್ಯಕ್ಷರು, ತುಳುಕೂಟ ಪಿಂಪ್ರಿ- ಚಿಂಕ್ವಾಡ್ ಉಪಸ್ಥಿತರಿದ್ದರು.ವೇದಿಕೆಯಲ್ಲಿ ಸಂಜೀವ ಶೆಟ್ಟಿ ಕುಂಟಿನಿ ಕಾರ್ಯದರ್ಶಿ, ಕೆ.ಎನ್. ಆನಂದ ಶೆಟ್ಟಿ ಕೋಶಾಧಿಕಾರಿಕೆ. ವಿಠಲ ಶೆಟ್ಟಿ ಕೊಲ್ಲೊಟ್ಟು ಉಪಾಧ್ಯಕ್ಷರು, ಸುರೇಶ್ ಶೆಟ್ಟಿ ಲ್ಯಾಲ ಜತೆ ಕಾರ್ಯದರ್ಶಿ , ಸುಜಯ್ ಶೆಟ್ಟಿ ಬಾರ್ದಾಜೆ ಅಧ್ಯಕ್ಷರು, ಯುವ ವಿಭಾಗ, ಶ್ರೀಮತಿ ಶೋಭಾ ವಿ. ಶೆಟ್ಟಿಅಧ್ಯಕ್ಷರು, ಮಹಿಳಾ ವಿಭಾಗ ಉಪಸ್ಥಿತರಿದ್ದರು. ಬಂಟ ಸಮಾಜದ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದವರನ್ನು ಸನ್ಮಾನಿಸಲಾಯಿತು.

ಭಾಸ್ಕರ ಕಾಯಾ೯ನ ಇವರ ಪ್ರಾಥ೯ನೆ ಬಳಿಕ ಬಂಟರ ಸಂಘದ ಮಾಜಿ ಅಧ್ಯಕ್ಷ ಎ. ಜಯರಾಮ್ ಶೆಟ್ಟಿ ಸ್ವಾಗತಿಸಿದರು. ನಿತೇಶ್ ಶೆಟ್ಟಿ ಎಕ್ಕಾರು ಕಾಯ೯ಕ್ರಮ ನಿರೂಪಿಸಿದರು.

Related posts

ಆರಂಬೋಡಿ ಉಚಿತ ವೈದ್ಯಕೀಯ ತಪಾಸಣಾ ಶಿಬಿರ: 500ಕ್ಕಿಂತ ಹೆಚ್ಚು ಜನರು ವಿವಿಧ ರೀತಿಯ ಆರೋಗ್ಯ ತಪಾಸಣೆ ಮಾಡಿದ್ದು ವಿಶೇಷವಾಗಿತ್ತು

Suddi Udaya

ಧರ್ಮಸ್ಥಳ ಶ್ರೀ ಮಂ.ಸ್ವಾ.ಅ. ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಬೇಸಿಗೆ ಶಿಬಿರದ ಉದ್ಘಾಟನೆ

Suddi Udaya

ಚಾರ್ಮಾಡಿ: ಕಂದಕಕ್ಕೆ ಉರುಳಿ ಬಿದ್ದ ಕಾರು: ಓರ್ವ ಮಹಿಳೆ ಸಾವು, ಮಕ್ಕಳು ಸಹಿತ ನಾಲ್ವರಿಗೆ ಗಂಭೀರ ಗಾಯ

Suddi Udaya

ಧರ್ಮಸ್ಥಳ: ನೇತ್ರಾವತಿ ಸೇತುವೆಯ ಕೆಳಗೆ ಅಪರಿಚಿತ ಶವ ಪತ್ತೆ

Suddi Udaya

ಶಾಸಕ ಹರೀಶ್ ಪೂಂಜರ‌ ವಿರುದ್ಧ ಬೆಳ್ತಂಗಡಿ ಠಾಣೆಯಲ್ಲಿ ಮತ್ತೊಂದು ಪ್ರಕರಣ ದಾಖಲು

Suddi Udaya

ಶ್ರೀ ಕೃಷ್ಣ ಭಜನಾ ಮಂದಿರದ ಸಭಾ ಭವನದ ನಿರ್ಮಾಣಕ್ಕೆ ಶ್ರೀ ಕ್ಷೇತ್ರ ಧ.ಗ್ರಾ. ಯೋ. ವತಿಯಿಂದ ರೂ.2ಲಕ್ಷ ಸಹಾಯಧನ

Suddi Udaya
error: Content is protected !!