April 2, 2025
ಗ್ರಾಮಾಂತರ ಸುದ್ದಿಚಿತ್ರ ವರದಿಜಿಲ್ಲಾ ಸುದ್ದಿತಾಲೂಕು ಸುದ್ದಿ

ಡಿ.17: ಬೆಳ್ತಂಗಡಿ ತಾಲೂಕು18 ನೇ ಕನ್ನಡ ಸಾಹಿತ್ಯ ಸಮ್ಮೇಳನ: ಡಾ. ಡಿ ವೀರೇಂದ್ರ ಹೆಗ್ಗಡೆಯವರಿಂದ ಆಮಂತ್ರಣ ಪತ್ರಿಕೆ ಬಿಡುಗಡೆ

ಬೆಳ್ತಂಗಡಿ: ಬೆಳ್ತಂಗಡಿ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ಇದರ ವತಿಯಿಂದ ದಶಂಬರ 17 ರಂದು ಬೆಳ್ತಂಗಡಿ ಹಳೆಕೋಟೆ ವಾಣಿ ಶಿಕ್ಷಣ ಸಂಸ್ಥೆಗಳ ಆವರಣದಲ್ಲಿ ನಡೆಯಲಿರುವ ತಾಲೂಕಿನ 18 ನೇ ಕನ್ನಡ ಸಾಹಿತ್ಯ ಸಮ್ಮೇಳನದ ಆಮಂತ್ರಣ ಪತ್ರಿಕೆಯನ್ನು ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆಯವರು ಧರ್ಮಸ್ಥಳದ ಅವರ ನಿವಾಸದಲ್ಲಿ ಡಿ.4 ರಂದು ಬಿಡುಗಡೆಗೊಳಿಸಿದರು.

ನಾಡು ನುಡಿಯ ಸಂರಕ್ಷಣೆಗೆ ಕನ್ನಡ ಸಾಹಿತ್ಯ ಪರಿಷತ್ತು ನಡೆಸುತ್ತಿರುವ ಕಾರ್ಯಕ್ಕೆ ಶ್ಲಾಘನೆ ವ್ಯಕ್ತಪಡಿಸಿದ ಅವರು ಕಾರ್ಯಕ್ರಮಕ್ಕೆ ಶುಭಕೋರಿದರು.

ಕನ್ನಡ ಸಾಹಿತ್ಯ ಪರಿಷತ್ತು ಬೆಳ್ತಂಗಡಿ ಘಟಕದ ಅಧ್ಯಕ್ಷ ಡಿ‌.ಯದುಪತಿ‌ ಗೌಡ, ಗೌರವ ಕಾರ್ಯದರ್ಶಿ ರಾಮಕೃಷ್ಣ ಭಟ್ ಬೆಳಾಲು, ಸಮ್ಮೇಳನ ಸಂಯೋಜನಾ ಸಮಿತಿ ಅಧ್ಯಕ್ಷ ಜಯಾನಂದ ಗೌಡ ಬೆಳ್ತಂಗಡಿ, ಪ್ರಧಾನ ಕಾರ್ಯದರ್ಶಿ ಮೋಹನ‌ ಗೌಡ, ಕೋಶಾಧಿಕಾರಿ ಮೀನಾಕ್ಷಿ ಮಹಾಬಲ‌ ಗೌಡ, ಉಪಾಧ್ಯಕ್ಷ ವಿಷ್ಣುಪ್ರಕಾಶ, ಕಸಾಪ ಸಂಘ ಸಂಸ್ಥೆಗಳ ಪ್ರತಿನಿಧಿ ಅಶ್ರಫ್ ಆಲಿಕುಂಞಿ ಮುಂಡಾಜೆ, ಮಾಧ್ಯಮ ಪ್ರಚಾರ ಸಮಿತಿ ಸಂಚಾಲಕ ಚೈತ್ರೇಶ್ ಇಳಂತಿಲ ಉಪಸ್ಥಿತರಿದ್ದರು.

ಬಳಿಕ ನಿಯೋಗದಿಂದ ಎಸ್.ಡಿ.ಎಂ. ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ ಡಿ‌‌.ಹರ್ಷೇಂದ್ರ ಕುಮಾರ್ ಅವರಿಗೂ ಆಮಂತ್ರಣ ನೀಡಲಾಯಿತು.

Related posts

ಅ.22 : ಉಜಿರೆ ಗ್ರಾ.ಪಂ.ನಲ್ಲಿ ಅಣಬೆ ಬೇಸಾಯದ ತರಬೇತಿ

Suddi Udaya

ಬಳಂಜ: ಶ್ರೀಮಾತ ನಾಲ್ಕೂರು ಸಂಘಟನೆಯಿಂದ ವಾಲಿಬಾಲ್ ಪಂದ್ಯಾವಳಿ, ಸಾಧಕರಿಗೆ ಸನ್ಮಾನ

Suddi Udaya

ಜಾರಿಗೆಬೈಲು-ಮಚ್ಚಿನ ರಸ್ತೆ ಕಾಮಗಾರಿ ಸ್ಥಗಿತ: ಗ್ರಾಮಸ್ಥರಿಂದ ರಸ್ತೆ ತಡೆ

Suddi Udaya

ಗುರಿಪಳ್ಳ ಸಮೀಪದ ಬಂಡ್ರತ್ತಿಲ್ ಬಳಿ ಟವರ್ ಮೇಲೆ ಬಿದ್ದ ಮರ ಸ್ಕೂಟರ್ ನಲ್ಲಿ ಹೋಗುತ್ತಿದ್ದ ವ್ಯಕ್ತಿಗೆ ಗಾಯ

Suddi Udaya

ಶ್ರೀ.ಕ್ಷೇ.ಧ.ಗ್ರಾ.ಯೋಜನೆಯಿಂದ ಯೋಜನೆಯ ಸೇವಾ ಪ್ರತಿನಿಧಿ ಕೇಶವ ಅಚ್ಚಿನಡ್ಕರವರಿಗೆ ಆರ್ಥಿಕ ಧನಸಹಾಯ

Suddi Udaya

ಅರೆಮಲೆಬೆಟ್ಟ ಶ್ರೀ ಕೊಡಮಣಿತ್ತಾಯ ದೈವಸ್ಥಾನದಲ್ಲಿ ಕುಂಭಾಭಿಷೇಕ ಪೂರ್ವಭಾವಿಯಾಗಿ ಚಪ್ಪರ ಮೂಹೂರ್ತ

Suddi Udaya
error: Content is protected !!