24.2 C
ಪುತ್ತೂರು, ಬೆಳ್ತಂಗಡಿ
May 26, 2025
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿವರದಿಶುಭಾರಂಭ

ಬೆಳ್ತಂಗಡಿ: ಲಕ್ಷ್ಮೀ ಕಾಂಪ್ಲೆಕ್ಸ್‌ನಲ್ಲಿ ಮಂಜೂಷ ಗ್ಲಾಸ್ & ಪ್ಲೈವುಡ್ಸ್ ಸಂಸ್ಥೆಯ ಶುಭಾರಂಭ

ಬೆಳ್ತಂಗಡಿ: ಗ್ರಾಹಕರ ಪ್ರೀತಿ, ವಿಶ್ವಾಸ, ನಂಬಿಕೆ ಗಳಿಸಿ ಇದೀಗ ಬೆಳ್ತಂಗಡಿಯ ಮೂರು ಮಾರ್ಗದ ಬಳಿಯಿರುವ ಲಕ್ಷ್ಮೀ ಕಾಂಪ್ಲೆಕ್ಸ್‌ನಲ್ಲಿ ಮಂಜೂಷ ಗ್ಲಾಸ್ & ಪ್ಲೈವುಡ್ಸ್ ಸಂಸ್ಥೆಯು ಡಿ.4 ರಂದು ಶುಭಾರಂಭಗೊಂಡಿತ್ತು.

ನೂತನ ಸಂಸ್ಥೆಯ ಉದ್ಘಾಟನೆಯನ್ನು ಶ್ರೀ ಕ್ಷೇತ್ರ ಧರ್ಮಸ್ಥಳದ ನಿಶ್ಚಲ್ ಜೈನ್ ಉದ್ಘಾಟಿಸಿ ಸಂಸ್ಥೆಯು ಅಭಿವೃದ್ಧಿ ಪಥದಲ್ಲಿ ಸಾಗಲಿ ಎಂದು ಶುಭ ಹಾರೈಸಿದರು.

ಮುಖ್ಯ ಅತಿಥಿ ನೆಲೆಯಲ್ಲಿ ಬರೋಡದ ಶಶಿ ಕ್ಯಾಟರಿಂಗ್ ಆಡಳಿತ ನಿರ್ದೇಶಕ, ಖ್ಯಾತ ಉದ್ಯಮಿ ಶಶಿಧರ ಶೆಟ್ಟಿ ನವಶಕ್ತಿ ಗುರುವಾಯನಕೆರೆ ಮಾತನಾಡಿ ಮಂಜೂಷ ಗ್ಲಾಸ್ & ಪ್ಲೈವುಡ್ ಸಂಸ್ಥೆಯೊಂದಿಗೆ ಗ್ರಾಹಕರಿಗೆ ನಗುಮೊಗದ ಹಾಗೂ ಉತ್ತಮ ಗುಣಮಟ್ಟದ ವಸ್ತುಗಳನ್ನು ಪೂರೈಸಿ, ಪ್ರಾಮಾಣಿಕ ಸೇವೆ ಸಲ್ಲಿಸುವುದರಿಂದ ಪ್ರಗತಿ ಪಥದಲ್ಲಿ ಸಾಗುತ್ತದೆ ಎಂಬ ವಿಶ್ವಾಸವಿದೆ. ಸಂಸ್ಥೆಯನ್ನು ನಾವೆಲ್ಲರೂ ಸೇರಿ ಬೆಳೆಸೋಣ ಎಂದು ಶುಭಹಾರೈಸಿದರು.

ಉಜಿರೆ ಬೆನಕ ಕನ್ ಸ್ಟ್ರಕ್ಷನ್ ಇಂಜಿನಿಯರ್ ಗಣೇಶ್ ಉಜಿರೆ ನೂತನ ಸಂಸ್ಥೆಗೆ ಶುಭಕೋರಿದರು.

ಕಾರ್ಯಕ್ರಮದಲ್ಲಿ ಎಸ್‌.ಡಿ.ಎಂ ಕಾಲೇಜಿನ ನಿವೃತ ಪ್ರಾಂಶುಪಾಲರಾದ ಎ.ಜಯಕುಮಾರ್ ಶೆಟ್ಟಿ ಅರ್ಕುಳಬೀಡು, ಮಾಲಕರ ಮಾತ- ಪಿತರಾದ ಶ್ರಿಮತಿ ರಜನಿ ಮತ್ತು ಶ್ರೀಮಂದರ ಶೆಟ್ಟಿ, ಉಜಿರೆ ಪವರ್ ಹೌಸ್ ಮಾಲಕ ಜಿತೇಶ್ ಜೈನ್, ಶಾಂತಿಸಾಗರ್ ಕನ್ ಸ್ಟ್ರಕ್ಷನ್ ನ ಸಮೃದ್ದಿ ಜೈನ್, ವಿಜಯ್ ಸ್ಟೋರ್ ಉಜಿರೆಯ ವಿಜಯ ಇಂದ್ರ, ಎಸ್.ಡಿ.ಎಂ ಆಸ್ಪತ್ರೆಯ ಅಜೇಯ್ ಜೈನ್, ಅಕ್ಷಯ್ ಆರ್ ಜೈನ್, ಬ್ಯಾಂಕ್ ಆಫ್ ಬರೋಡ ಪ್ರಸಾದ್ ಕುಮಾರ್, ಸಾಯಿ ನವಶಕ್ತಿ, ಆದರ್ಶ್ ಗುರುವಾಯನಕೆರೆ, ಆಗ್ರೀಲಿಫ್ ನಿರ್ದೇಶಕ ಅತಿಶ್ರಯ ಜೈನ್ ಉಪಸ್ಥಿತರಿದ್ದರು.

ಮಂಜೂಷ ಗ್ಲಾಸ್ & ಪ್ಲೈವುಡ್ ಸಂಸ್ಥೆಯ ಪ್ರಿಯಾಂಕ್ ಜೈನ್, ಶ್ರಯಾಂಕ್ ಜೈನ್, ಶಶಾಂಕ್ ಜೈನ್ ಆಗಮಿಸಿದ ಅತಿಥಿ ಗಣ್ಯರನ್ನು ಸ್ವಾಗತಿಸಿ ಸತ್ಕರಿಸಿದರು.

ಆಧುನಿಕ ಮನೆಗಳ ಹಾಗೂ ಸಂಸ್ಥೆಗಳ ಇತ್ತೀಚಿನ ವಿನ್ಯಾಸಗಳು ಮತ್ತು ಮಾದರಿಗಳಿಗೆ ಸಂಬಂಧಿಸಿದಂತೆ ಹೆಚ್ಚಾಗಿ ಗ್ಲಾಸ್ & ಪ್ಲೈವುಡ್ಸ್ ಬಳಕೆಯನ್ನು ಒಳಗೊಂಡಿದೆ.

ಸಂಸ್ಥೆಯಲ್ಲಿ ಗ್ರಾಹಕರಿಗೆ ಕೈಗೆಟುಕುವ ದರದಲ್ಲಿ ಉತ್ತಮ ಗುಣಮಟ್ಟದ ಗ್ಲಾಸ್, ಪ್ಲೈವುಡ್ಸ್ ಹಾಗೂ ಮನೆ, ಸಂಸ್ಥೆಯ ಸೌಂದರ್ಯ ಹೆಚ್ಚಿಸುವ, ಉತ್ತಮ ಬೆಳಕು ಬೀಳುವಂತ ಐಟಂಗಳು ಲಭ್ಯವಿದೆ. ಪವರ್ ಟೂಲ್ಸ್, ಕಿಚನ್ ಸೆಟ್ಟಿಂಗ್, ಹಾರ್ಡ್‌ವೇರ್ ಸಿಗುತ್ತದೆ ಎಂದು ಸಂಸ್ಥೆಯ ಮಾಲಕರು ತಿಳಿಸಿದರು.

Related posts

ನಾರಾವಿ ಗ್ರಾಮ ಸಭೆ: ಗ್ರಾಮದ ಅಭಿವೃದ್ಧಿಗೆ ಪೂರಕವಾಗಿ ಗ್ರಾಮಸ್ಥರ ಚರ್ಚೆ

Suddi Udaya

ಮೌಲ್ಯ ಶಿಕ್ಷಣ” ಪುಸ್ತಕ ರಚನೆ ಸಮಿತಿಗೆ ಸಂಪನ್ಮೂಲ ವ್ಯಕ್ತಿಯಾಗಿ ಡಾ. ಐ. ಶಶಿಕಾಂತ್ ಜೈನ್ ಆಯ್ಕೆ

Suddi Udaya

ಕೊಕ್ಕಡ: ಮಿಯಾವಕಿ ಅರಣ್ಯೀಕರಣ ಗಿಡನಾಟಿ ಕಾರ್ಯಕ್ರಮ

Suddi Udaya

ಬೆಳ್ತಂಗಡಿ ತಾಲೂಕು ಆಡಳಿತ ಸೌಧದಲ್ಲಿ ಶ್ರೀ ಕೃಷ್ಣ ಜಯಂತಿ ಆಚರಣೆ

Suddi Udaya

ಫೆ.9: ಬದುಕು ಕಟ್ಟೋಣ ಬನ್ನಿ ಸೇವಾ ಟ್ರಸ್ಟ್ ನೇತೃತ್ವ ಯುವಸಿರಿ ರೈತ ಭಾರತದ ಐಸಿರಿ ವಿಶಿಷ್ಟ ಕಾರ್ಯಕ್ರಮ; ಬೆಳಾಲು ಅನಂತೋಡಿಯಲ್ಲಿ 1000 ಕ್ಕೂ ವಿಕ್ಕಿ ಯುವ ಜನತೆಯಿಂದ ಭತ್ತ ಕಟಾವು

Suddi Udaya

ಬಿಲ್ಡ‌ರ್ ಜಿತೇಂದ್ರ ಕೊಟ್ಟಾರಿಯವರ ಮನೆಗೆ ನುಗ್ಗಿ ಹಲ್ಲೆಗೆ ಯತ್ನ: ಎನ್.ಎಸ್.ಯು.ಐ ಕಾರ್ಯಕರ್ತ ಉಜಿರೆ ನಿವಾಸಿ ತನುಷ್ ಶೆಟ್ಟಿ ಮತ್ತು ಕದ್ರಿ ನಿವಾಸಿ ಅಂಕಿತ್ ಶೆಟ್ಟಿ ಬಂಧನ

Suddi Udaya
error: Content is protected !!