ಚಾರ್ಮಾಡಿ : ಚಾರ್ಮಾಡಿ ಘಾಟಿಯ ಮೂರನೇ ತಿರುವಿನಲ್ಲಿ ಒಂಟಿ ಸಲಗ ಪ್ರತ್ಯಕ್ಷವಾಗಿದ್ದು ವಾಹನ ಸವಾರರು ಭಯಭೀತರಾದರು.
ಭಾನುವಾರ ಸಂಜೆ ಚಾರ್ಮಾಡಿ ಘಾಟಿಯ ಎಂಟನೇ ತಿರುವಿನಲ್ಲಿ ಒಂಟಿ ಸಲಗವೊಂದು ರಸ್ತೆಗೆ ಬಂದಿದ್ದರಿಂದ ವಾಹನಗಳು ಸಾಲು ಗಟ್ಟಿ ನಿಂತಿದ್ದವು. ಒಂಟಿ ಸಲಗವು ಬೃಹದಾಕಾರವಾಗಿದ್ದು ಒಂದು ಗಂಟೆಗೂ ಅಧಿಕ ಕಾಲ ರಸ್ತೆಯಲ್ಲೇ ಇದ್ದು ನಂತರ ತಿರುವಿನಲ್ಲಿ ಅರಣ್ಯಕ್ಕೆ ಸಾಗಿದ್ದು ವಾಹನ ಸವಾರರು ಕಾಡಾನೆಯ ವೀಡಿಯೋವನ್ನು ಮೊಬೈಲ್ ನಲ್ಲಿ ಚಿತ್ರೀಕರಿಸಿದ್ದಾರೆ.
ಆದರೆ ವಾಹನ ಸವಾರರಿಗೆ ಯಾವುದೇ ತೊಂದರೆ ಉಂಟು ಮಾಡಿಲ್ಲ.ಈ ಕಾಡಾನೆ ಪ್ರತಿ ಈ ಸಮಯದಲ್ಲಿ ಹೆಚ್ಚಾಗಿ ಚಾರ್ಮಾಡಿಯಲ್ಲಿ ಬೀಡು ಬಿಟ್ಟಿದ್ದು ಚಾರ್ಮಾಡಿ ಘಾಟಿಯಲ್ಲಿ ವಾಹನ ಸವಾರರು, ದ್ವಿಚಕ್ರ ಸವಾರರು ಒಂಟಿ ಸಲಗದ ಭೀತಿಯಲ್ಲೇ ಸಾಗಬೇಕಿದೆ. ಅರಣ್ಯ ಇಲಾಖೆಯ ಅಧಿಕಾರಿಗಳು ಈ ಕಾಡಾನೆಯನ್ನು ಅರಣ್ಯಕ್ಕೆ ಓಡಿಸಬೇಕೆಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.