ಮಚ್ಚಿನ: ಕುತ್ತಿನ ಶಾಲೆಯಲ್ಲಿ ಬೀಳ್ಕೊಡುಗೆ ಮತ್ತು ಮಕ್ಕಳ ಹಬ್ಬ

Suddi Udaya

ಮಚ್ಚಿನ : ಸರಕಾರಿ ಕಿರಿಯ ಪ್ರಾಥಮಿಕ ಶಾಲೆ ಕುತ್ತಿನ ಇತ್ತೀಚೆಗೆ ಶಾಲಾ ಮಕ್ಕಳಿಂದ ಮತ್ತು ಅಂಗನಾಡಿ ಮಕ್ಕಳಿಂದ ಹಾಗೂ ಹಳೆ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು.
ಸಭಾ ಕಾರ್ಯಕ್ರಮ ಅಧ್ಯಕ್ಷತೆ ಯನ್ನು ಎಸ್ ಡಿ ಎಮ್ ಸಿ ಅಧ್ಯಕ್ಷ ಗಂಗಾಧರ ಕುಲಾಲ್ ವಹಿಸಿದ್ದರು.
ಕಾರ್ಯಕ್ರಮದ ಉದ್ಘಾಟನೆಯನ್ನು ಗ್ರಾಮ ಪಂಚಾಯತ್ ಅಧ್ಯಕ್ಷೆ ಶ್ರೀಮತಿ ರುಕ್ಮಿಣಿ ನೆರವೇರಿಸಿದರು.

ಮುಖ್ಯ ಅತಿಥಿಗಳಾಗಿ ಓಡಿಲ್ನಾಳ ಸ.ಹಿ. ಪ್ರಾ ಶಾಲೆ ಶಿಕ್ಷಕಿ ಶ್ರೀಮತಿ ವಿಲ್ಮೆಂಟ್ ಸೆರಾವೋ , ಸೋಣಂದೂರು ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಪ್ರಭಾರ ಮುಖ್ಯ ಗುರುಗಳು ಶ್ರೀಮತಿ ಅನಿತಾ ರೇಷ್ಮಾ ಡಿಸೋಜಾ, ಹಳೆ ವಿದ್ಯಾರ್ಥಿ ಸಂಘ ಕುತ್ತಿನ ಅಧ್ಯಕ್ಷ ರಾಘವೇಂದ್ರ ಪ್ರಭು , ಸೇವಾ ಪ್ರತಿನಿಧಿ ಶ್ರೀಮತಿ ಮಂಜುಳಾ ಶರ್ಮ, ಸಿದ್ಧಿವಿನಾಯಕ ಭಜನಾ ಮಂಡಳಿ ಕುತ್ತಿನ ಅಧ್ಯಕ್ಷ ದಿನೇಶ್ ಕುಲಾಲ್, ಮಚ್ಚಿನ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಎಸ್ಡಿಎಂಸಿ ಅಧ್ಯಕ್ಷ ಪರಮೇಶ್ವರ್ , ಶ್ರೀ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಅಧಿಕಾರಿ ಧರ್ಣಪ್ಪ ಸಾಲಿಯಾನ್, ಶ್ರೀ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಒಕ್ಕೂಟದ ಅಧ್ಯಕ್ಷ ಜಯ ಪೂಜಾರಿ, ಮಚ್ಚಿನ ಗ್ರಾಮ ಪಂಚಾಯತ್ ಸದಸ್ಯರಾದ ಚಂದ್ರಶೇಖರ ಬಿ ಎಸ್ , ಶ್ರೀಮತಿ ಪ್ರತಿಭಾ ರೈ ಅಂಗನವಾಡಿ ಕೇಂದ್ರ ಕುತ್ತಿನ ಅಧ್ಯಕ್ಷರು ಶ್ರೀಮತಿ ಪ್ರತಿಮಾ ,
ಶ್ರೀಮತಿ ಚೇತನ ಸಿ ಆರ್ ಪಿ ಪುಂಜಾಲಕಟ್ಟೆ ಕ್ಲಸ್ಟರ್, ಶಾಲಾ ನಾಯಕಿ ಕುಮಾರಿ ಸಮೃದ್ಧಿ ಭಾಗವಹಿಸಿದರು.

ಕಾರ್ಯಕ್ರಮದಲ್ಲಿ ಇತ್ತೀಚೆಗೆ ಶಾಲೆಯಿಂದ ವರ್ಗಾವಣೆಗೊಂಡ ಶಿಕ್ಷಕಿಯರಾದ ಶ್ರೀಮತಿ ಅನಿತಾ ರೇಷ್ಮ ಡಿಸೋಜಾ ಮತ್ತು ಶ್ರೀಮತಿ ವಿಲ್ಮೆಂಟ್ ಸೆರಾವೋ ಇವರನ್ನು ಗೌರವ ಪೂರ್ವಕವಾಗಿ ಬೀಳ್ಕೊಡಲಾಯಿತು.

ಶಾಲಾ ಮಕ್ಕಳ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಶಿಕ್ಷಕಿಯಾದ ಕುಮಾರಿ ಲೋಲಾಕ್ಷಿ ಸಂಯೋಜಿಸಿದರು.

ಅಂಗನವಾಡಿ ಕೇಂದ್ರದ ಮಕ್ಕಳ ಕಾರ್ಯಕ್ರಮಗಳನ್ನು ಶಿಕ್ಷಕಿ ಶ್ರೀಮತಿ ನವನೀತ ಮತ್ತು ಸಹಾಯಕಿ ರೇಖಾ ಸಂಯೋಜಿಸಿದರು.

ಹಳೆ ವಿದ್ಯಾರ್ಥಿನಿ ಕು| ಸೌಜನ್ಯ ಸ್ವಾಗತಿಸಿದರು. ಶಾಲಾ ಮುಖ್ಯ ಶಿಕ್ಷಕ ಲೋಕೇಶ್ ಇವರು ಪ್ರಸ್ತಾವಿಕ ನುಡಿಗಳನ್ನಾಡಿದರು. ವರ್ಗಾವಣೆಗೊಂಡ ಶಿಕ್ಷಕರ ಅಭಿನಂದನಾ ಪತ್ರಗಳನ್ನು ಹಳೆ ವಿದ್ಯಾರ್ಥಿನಿಯಾದ ಕುಮಾರಿ ದೀಕ್ಷ ಹಾಗೂ ಶಾಲಾ ಎಸ್ಡಿಎಂಸಿ ಉಪಾಧ್ಯಕ್ಷರಾದ ಶ್ರೀಮತಿ ನೀತಾ ವಾಚಿಸಿದರು. ಹರೀಶ್ ಶೆಟ್ಟಿ ಮುದಲಡ್ಕ ಕಾರ್ಯಕ್ರಮವನ್ನು ನಿರೂಪಿಸಿದರು.

ಕಾರ್ಯಕ್ರಮದ ಯಶಸ್ಸಿಗೆ ಮಹೇಶ್ ನಾಯಕ್ ಮತ್ತು ಪುಷ್ಪರಾಜ, ಹಳೆ ವಿದ್ಯಾರ್ಥಿಗಳು ಮತ್ತು ಪೋಷಕರು ಸಹಕರಿಸಿದರು.

ಹಿರಿಯ ವಿದ್ಯಾರ್ಥಿಯಾದ ಪ್ರಭಾಕರ ಪೂಜಾರಿ ಇವರು ಧನ್ಯವಾದ ನೀಡಿದರು.

Leave a Comment

error: Content is protected !!