ಪಡಂಗಡಿ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ. ಸಿ ಟ್ರಸ್ಟ್ (ರಿ.) ಗುರುವಾಯನಕೆರೆ ಯೋಜನಾ ಕಛೇರಿ ವ್ಯಾಪ್ತಿಯ ಮಹಿಳಾ ಜ್ಞಾನವಿಕಾಸ ಕಾರ್ಯಕ್ರಮದಡಿಯಲ್ಲಿ ಪಡಂಗಡಿ ವಲಯದ ಗರ್ಡಾಡಿ ಕಾರ್ಯಕ್ಷೇತ್ರದ ಅಚ್ಚಡಿಯ ಸಾಭಾಗ್ಯ ಕೇಂದ್ರದ ಮಾಸಿಕ ಸಭೆಯಲ್ಲಿ ಋತು ಚಕ್ರ ಸಂದರ್ಭದಲ್ಲಿ ಆರೋಗ್ಯದ ಮೇಲಾಗುವ ಸಮಸ್ಯೆಗಳು ಹಾಗೂ ಮುಟ್ಟು ನಿಲ್ಲುವ ಸಂದರ್ಭದಲ್ಲಿ ಆಗುವ ಸಮಸ್ಯೆಗಳು ಹಾಗೂ ಪರಿಹಾರದ ಬಗ್ಗೆ ಮಾಹಿತಿ ನೀಡಿದರು ಮತ್ತು ಎಲ್ಲಾ ಸದಸ್ಯರ ಬಿಪಿ, ಸುಗರ್, ಹಿಮೋಗೋಲ್ಬಿನ್ ಪರೀಕ್ಷೆ ಯನ್ನು ಪಡಂಗಡಿ ಅರೋಗ್ಯ ಕೇಂದ್ರದ ಅರೋಗ್ಯ ಸಹಾಯಕಿ ಶ್ರೀಮತಿ ಪ್ರೀತಿ ರವರು ನೆರವೇರಿಸಿದರು.
ಕಾರ್ಯಕ್ರಮದಲ್ಲಿ ಆಶಾಕಾರ್ಯ ಕರ್ತೆ ಶ್ರೀಮತಿ ಗೀತಾ, ಜ್ಞಾನ ವಿಕಾಸಮಾನ್ಯಯಧಿಕಾರಿ ಶ್ರೀಮತಿ ಹರಿಣಿ ಸೇವಾಪ್ರತಿನಿಧಿ ಹೇಮಾ, ಹಾಗೂ ಕೇಂದ್ರದ ಎಲ್ಲಾ ಸದಸ್ಯರು ಉಪಸ್ಥಿತರಿದ್ದರು
ಕೇಂದ್ರದ ಅಧ್ಯಕ್ಷ ತೆಯನ್ನು ಶ್ರೀಮತಿ ಸುಂದರಿ ರವರು ವಹಿಸಿದ್ದರು. ಸ್ವಾಗತ ವನ್ನು ತುಳಸಿ, ಧನ್ಯವಾದ ಡಿಕ್ಕಮ, ನಿರೂಪಣೆ ಸಂಯೋಜಕಿ ವಿಜಯರವರು ನೇರವೇರಿಸಿದರು.