ರಕ್ತೇಶ್ವರಿಪದವು: ಭಜನಾ ವಾರ್ಷಿಕೋತ್ಸವ ವಿಶೇಷ ಭಜನೆ ಹಾಗೂ ವಿಶೇಷ ಪೂಜೆ ಮತ್ತು ಸನ್ಮಾನ

Suddi Udaya

ನ್ಯಾಯತರ್ಪು : ರಕ್ತೇಶ್ವರಿಪದವು ಶ್ರೀ ಮಂಜುನಾಥೇಶ್ವರ ಭಜನಾ ಮಂಡಳಿ 24 ನೇ ವರ್ಷದ ವಾರ್ಷಿಕೋತ್ಸವದ ಪ್ರಯುಕ್ತ ಗಣಹೋಮ ,ಸತ್ಯ ನಾರಾಯಣ ಪೂಜೆ ಹಾಗೂ ವಿಶೇಷ ಭಜನಾ ಸೇವೆ ಮತ್ತು ಸಾಧಕರಿಗೆ ಸನ್ಮಾನ ಕಾರ್ಯಕ್ರಮ ಡಿ.3 ರಂದು ಭಜನಾ ಮಂಡಳಿ ವಠಾರದಲ್ಲಿ ಜರುಗಿತು.


ಶ್ರೀ ರಕ್ತೇಶ್ವರಿಪದವು ಶ್ರೀ ಮಂಜುನಾಥೇಶ್ವರ ಭಜನಾ ಮಂಡಳಿ, ಶ್ರೀ ದುರ್ಗಾಪರಮೇಶ್ವರಿ ಭಜನಾ ಮಂಡಳಿ ತಾರೆಮಾರು ಮಚ್ಚಿನ ಮತ್ತು ನಾಳ ಶ್ರೀ ದುರ್ಗಾಪರಮೇಶ್ವರಿ ಭಜನಾ ಮಂಡಳಿ ವತಿಯಿಂದ ವಿಶೇಷ ಭಜನಾ ಸೇವೆ ಹಾಗೂ ಮಹಾ ಪೂಜೆ ಮತ್ತು ಅನ್ನಸಂತರ್ಪಣೆ ನಡೆಯಿತು.


ಜಿಲ್ಲಾ ಪ್ರಶಸ್ತಿ ಪಡೆದ ಉತ್ತಮ ಅಂಗನವಾಡಿ ಕೇಂದ್ರದ ಕಾರ್ಯಕರ್ತೆ ನಾಗವೇಣಿ ಕೆ.ಎಸ್ ರವರನ್ನು ಭಜನಾ ಮಂಡಳಿ ವತಿಯಿಂದ ಸನ್ಮಾನಿಸಿ, ಗೌರವಿಸಿದರು. ಪತಿ ಜನಾರ್ದನ ಪೂಜಾರಿ ಜೊತೆಗಿದ್ದರು.
ಈ ಸಂದರ್ಭದಲ್ಲಿ ಕಳಿಯ ಸಿ.ಎ.ಬ್ಯಾಂಕ್ ಅಧ್ಯಕ್ಷ ವಸಂತ ಮಜಲು,ನಿರ್ದೇಶಕರಾದ ಶೇಖರ ನಾಯ್ಕ,ರಾಜ್ ಪ್ರಕಾಶ ಶೆಟ್ಟಿ, ಶಶಿಧರ ಶೆಟ್ಟಿ,ಕಳಿಯ ಗ್ರಾಮ ಪಂಚಾಯತ್ ಸದಸ್ಯರಾದ ಮೋಹಿನಿ ಹೆಚ್,ವಿಜಯ ಕುಮಾರ್ ಕೆ,ಹರೀಶ್ ಕುಮಾರ್ ಬಿ, ನಾಳ ದೇವಸ್ಥಾನದ ವ್ಯವಸ್ಥಾನ ಸಮಿತಿ ಸದಸ್ಯರಾದ ದಿನೇಶ್ ಕುಮಾರ್ ಕೆ, ಉಮೇಶ್ ಕೇಲ್ದಡ್ಕ, ಅಭಿವೃದ್ಧಿ ಸಮಿತಿ ಅಧ್ಯಕ್ಷ ಯಾದವ ಗೌಡ ಎಮ್, ರಾಜೇಶ್ ಪೆಂರ್ಬುಡ, ಪ್ರಬಂಧಕ ಗಿರೀಶ್ ಶೆಟ್ಟಿ ಜಿ. ಗೇರುಕಟ್ಟೆ ಹಾಲು ಉತ್ಪಾದಕರ ಸಂಘದ ಅಧ್ಯಕ್ಷ ಜನಾರ್ಧನ ಗೌಡ ಕೆ, ವಿವಿಧ ಭಜನಾ ಮಂಡಳಿ ಅಧ್ಯಕ್ಷರು,ಪದಾಧಿಕಾರಿಗಳು ಸದಸ್ಯರು ಉಪಸ್ಥಿತರಿದ್ದರು.


ರಕ್ತೇಶ್ವರಿಪದವು ಭಜನಾ ಮಂಡಳಿ ಗೌರವಾಧ್ಯಕ್ಷ ರಂಜನ್ ಎಮ್, ಅಧ್ಯಕ್ಷ ವಸಂತ ಗೌಡ ಕೆ, ಉಪಾಧ್ಯಕ್ಷ ರಮೇಶ್ ಪೂಜಾರಿ,ಕಾರ್ಯದರ್ಶಿ ಯೋಗೀಶ್ ಎಮ್, ಜತೆ ಕಾರ್ಯದರ್ಶಿ ವಿನಯ ಹೆಚ್, ಕೋಶಾಧಿಕಾರಿ ಶೇಖರ ಗೌಡ ಎಮ್, ಮಂಡಳಿ ಅರ್ಚಕ ಜಗನ್ನಾಥ ವಿ, ಗೋಪಾಲ ಗೌಡ ಎಮ್ ಮತ್ತು ಸದಸ್ಯರು ಭಾಗವಹಿಸಿ, ಸಹಕರಿಸಿದರು. ಕು.ಶ್ರೇಯಾ ಎಮ್.ಸನ್ಮಾನ ಪತ್ರ ವಾಚಿಸಿದರು.
ನ್ಯಾಯತರ್ಪು ಅರಣ್ಯ ಸಮಿತಿ ಅಧ್ಯಕ್ಷ ವಸಂತ ಕುಮಾರ್ ಕಾರ್ಯಕ್ರಮ ನಿರೂಪಣೆ ಮಾಡಿದರು.

ನ.21 ರಿಂದ ನ.28 ರ ತನಕ ರಾತ್ರಿ 8 ರಿಂದ 10 ಗಂಟೆ ವರೆಗೆ ಗ್ರಾಮದಲ್ಲಿ ನಗರ ಭಜನೆ ಯಶಸ್ವಿಯಾಗಿ ನಡೆಯಿತು.

Leave a Comment

error: Content is protected !!