ಅಳದಂಗಡಿ ಅರಮನೆಗೆ ಶಿಲಾಮಯ ಆನೆಗಳ ಮೆರುಗು: ಪ್ರಸಿದ್ಧ ಬೆಂಗಳೂರು ಉದ್ಯಮಿ ದೇವೇಂದ್ರ ಹೆಗ್ಡೆಯವರಿಂದ ಕೊಡುಗೆ

Suddi Udaya

ಬೆಳ್ತಂಗಡಿ: ಅಳದಂಗಡಿ ಅರಮನೆಗೆ ಶಿಲಾಮಯ ಎರಡು ಆನೆಗಳನ್ನು ಪ್ರಸಿದ್ದ ಕೈಗಾರಿಕೋದ್ಯಮಿ, ಧಾರ್ಮಿಕ ಪರಿಷತ್ ಸದಸ್ಯ ದೇವೆಂದ್ರ ಹೆಗ್ಡೆ ಕೊಕ್ರಾಡಿ ಕೊಡುಗೆಯಾಗಿ ನೀಡಿದರು.

ಅಜಿಲ ಸೀಮೆಯ ಪರಂಪರೆಯನ್ನು ಉಳಿಸಿ ಬೆಳೆಸಿದ ಅಳದಂಗಡಿ ಅರಮನೆಯ ತಿಮ್ಮಣ್ಣರಸರಾದ ಡಾ.ಪದ್ಮಪ್ರಸಾದ ಅಜಿಲರು ಶಿಲಾಮಯ ಆನೆಗಳನ್ನು ಅರಮನೆಯ ರಾಜದ್ವಾರದ ಹತ್ತಿರದಲ್ಲಿ ಅಳವಡಿಸಿದರು.

ಆನೆ ಸುಮಾರು ಮೂರವೆರೆ ಪೀಟ್ ಎತ್ತರವಿದ್ದು 20 ಇಂಚು ಅಗಲ, 38 ಇಂಚು ಉದ್ದವಾಗಿದೆ.ಇದರ ಕೆತ್ತನೆ ಕೆಲಸವನ್ನು ಶಿಲ್ಪಿ ದಿನೇಶ್ ವಿಟ್ಲರವರು ಮಾಡಿದ್ದು ಅಂದಾಜು ವೆಚ್ಚ 2 ಲಕ್ಷದವರೆಗೆ ತಗಲುತ್ತದೆ ಎಂದು ಶಿಲ್ಪಿಯವರು ತಿಳಿಸಿದರು. ಅರಮನೆಯ ವತಿಯಿಂದ ದಾನಿ ದೇವೇಂದ್ರ ಹೆಗ್ಡೆ ಕೊಕ್ರಾಡಿ ಹಾಗೂ ಶಿಲ್ಪಿಯವರನ್ನು ಗೌರವಿಸಲಾಯಿತು.

ಈ ಸಂದರ್ಭದಲ್ಲಿ ಅಳದಂಗಡಿ ಅರಮನೆಯ ತಿಮ್ಮಣ್ಣರಸರಾದ ಡಾ‌.ಪದ್ಮಪ್ರಸಾದ್ ಅಜಿಲರು, ಅಳದಂಗಡಿ ಸತ್ಯದೇವತಾ ದೈವಸ್ಥಾನದ ಆಡಳಿತ ಮೊಕ್ತೇಸರ ಶಿವಪ್ರಸಾದ್ ಅಜಿಲ, ಕೈಗಾರಿಕೋದ್ಯಮಿ ದೇವೇಂದ್ರ ಹೆಗ್ಡೆ ಕೊಕ್ರಾಡಿ,ನಿವೃತ ಸೇನಾನಿ ಕ್ಯಾಪ್ಟನ್ ಬ್ರಿಜೇಶ್ ಚೌಟ,ಡಾ.ಪ್ರತಿತ್ ಪಿ ಅಜಿಲ,ಡಾ.ಪ್ರೌಷ್ಠಿಲ್ ಪಿ ಅಜಿಲ,ಜಗದೀಶ್ ಹೆಗ್ಡೆ ನಾವರ ಗುತ್ತು,ಚಾವಡಿ ನಾಯಕರು ರಾಜಶೇಖರ್ ಶೆಟ್ಟಿ, ಸುಪ್ರಿತ್ ಜೈನ್ ಅಳದಂಗಡಿ ಉಪಸ್ಥಿತರಿದ್ದರು.

Leave a Comment

error: Content is protected !!