ಕಡಿರುದ್ಯಾವರ: ಕೆ. ಎನ್. ಭಟ್ ಶಿರಾಡಿಪಾಲ್ ಜನ್ಮ ಶತಮಾನೋತ್ಸವ ಸಮಾರಂಭದ ಆಮಂತ್ರಣ ಪತ್ರಿಕೆ ಬಿಡುಗಡೆ

Suddi Udaya

ಕಡಿರುದ್ಯಾವರ: ಶಿಕ್ಷಣ, ಸಾಹಿತ್ಯ, ಕಲೆ ಮತ್ತು ಹರಿಕಥಾ ಕ್ಷೇತ್ರದಲ್ಲಿ ಸ್ವ ಪರಿಶ್ರಮದ ಮೂಲಕ ಐದು ದಶಕಗಳಿಗೂ ಹೆಚ್ಚುಕಾಲ ಸೇವೆಗೈದು 1997ರಲ್ಲಿ ಗತರಾಗಿರುವ ದಿ. ಕೆ.ಎನ್. ಭಟ್ ಶಿರಾಡಿಪಾಲರ ಜನ್ಮ ಶತಮಾನೋತ್ಸವ ಕಾರ್ಯಕ್ರಮದ ಪೂರ್ವಯೋಜಿತ ಶತನಮನ ಶತಸನ್ಮಾನ ಕಾರ್ಯಕ್ರಮಗಳು ವಿಜೃಂಭಣೆಯಿಂದ ನಡೆಯುತ್ತಿದೆ.


ಜ. 13, 2024 ಶನಿವಾರದಂದು ಬೆಳ್ರಂಗಡಿ ತಾಲೂಕು ಕಡಿರುದ್ಯಾವರ ಗ್ರಾಮದ ಶಿರಾಡಿಪಾಲರ ಕಿನ್ಯಡ್ಕ ಮನೆಯಲ್ಲಿ ಜರಗಲಿರುವ ಕೆ. ಎನ್. ಭಟ್ ಶಿರಾಡಿಪಾಲ್ ಜನ್ಮ ಶತಮಾನೋತ್ಸವ ಸಮಾರಂಭದ ಆಮಂತ್ರಣ ಪತ್ರಿಕೆಯನ್ನು ಡಿ. 3ರಂದು ಕಡಿರುದ್ಯಾವರ ಗ್ರಾಮದ ಕಿನ್ಯಡ್ಕ ಮನೆಯಲ್ಲಿ ಬಿಡುಗಡೆಗೊಳಿಸಲಾಯಿತು. ಮೈಸೂರಿನ ಲೆಕ್ಕ ಪರಿಶೋಧಕರಾದ ಭಾಸ್ಕರ ರಾವ್-ಜಯಂತಿ ದಂಪತಿಗಳು ಆಮಂತ್ರಣ ಪತ್ರಿಕೆಯನ್ನು ಬಿಡುಗಡೆಗೊಳಿಸಿದರು.

ವೇ.ಮೂ. ರಜನೀಶ್ ಫಡ್ಕೆಯವರು ಶ್ರೀ ಸಪ್ತಶತಿ ಪಾರಾಯಣದೊಂದಿಗೆ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಶಿರಾಡಿಪಾಲರ ಪುತ್ರ ಶಶಿಧರ ಪರಾಂಜಪೆ- ರಮಾ ಪರಾಂಜಪೆ ದಂಪತಿಯ, ಪುತ್ರಿಯರಾದ ಅನುಪಮಾ ಚಿಪ್ಳೂಣಕರ್, ವಿದ್ಯಾಡೋಂಗ್ರೆ, ಮೊಮ್ಮಗ ಶರತ್ ಚಂದ್ರ ಪರಾಂಜಪೆ- ಅಪರ್ಣ ದಂಪತಿಗಳು, ಶತನಮನ ಶತಸನ್ಮಾನ ಕಾರ್ಯಕ್ರಮದ ಸಂಘಟಕ ಕೃಷ್ಣಕುಮಾರ್ ಮತ್ತಿತರರು ಉಪಸ್ಥಿತರಿದ್ದರು.

Leave a Comment

error: Content is protected !!