38.6 C
ಪುತ್ತೂರು, ಬೆಳ್ತಂಗಡಿ
April 1, 2025
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಪ್ರಮುಖ ಸುದ್ದಿವರದಿ

ಲಾಯಿಲ: ಹಾಡಹಗಲೇ ಕಾರಿನಲ್ಲಿಟ್ಟಿದ್ದ ನಗದು, ಚಿನ್ನಾಭರಣ ಕಳವು

ಬೆಳ್ತಂಗಡಿ: ಲಾಯಿಲದ ಗ್ಯಾರೇಜ್ ಬಳಿ ಹಾಡಹಗಲೇ ಕಾರಿನಲ್ಲಿಟ್ಟಿದ್ದ ನಗದು, ಚಿನ್ನಾಭರಣ ಹಾಗೂ ಮಕ್ಕಳ ವಸ್ರ್ತವಿದ್ದ ಬ್ಯಾಗ್ ಕಳವಾದ ಬಗ್ಗೆ ವರದಿಯಾಗಿದೆ.


ಕಕ್ಕಿಂಜೆ ಸನಿಹದ ಚಿಬಿದ್ರೆ ನಿವಾಸಿ ಅಬ್ದುಲ್‌ಜಲೀಲ್ ಅವರ ಕಾರಿನಿಂದ ಈ ಬ್ಯಾಗ್ ಕಳವಾಗಿದೆ.
ಜಲೀಲ್ ಅವರು ಪತ್ನಿ, ನಾಲ್ವರು ಮಕ್ಕಳು ಹಾಗೂ ಸಹೋದರಿ ಜೊತೆ ಪ್ರಯಾಣಿಸುತ್ತಿದ್ದ ವೇಳೆ ಲಾಯಿಲ ಜಂಕ್ಷನ್ ಬಳಿ ಗ್ಯಾರೇಜ್‌ಗೆ ತೆರಳಿದ್ದರು. ಈ ವೇಳೆ ಚಾಣಾಕ್ಷ ಕಳ್ಳರು ಕಾರಿನಲ್ಲಿದ್ದ ನಗದು, ಚಿನ್ನಾಭರಣ ಹಾಗೂ ಬಟ್ಟೆ ಇದ್ದ ಬ್ಯಾಗನ್ನು ಎಗರಿಸಿದ್ದಾರೆ.

ಈ ಸಂಬಂಧ ಜಲೀಲ್ ಅವರು ಬೆಳ್ತಂಗಡಿ ಪೊಲೀಸರಿಗೆ ದೂರು ನೀಡಿದ್ದಾರೆ. ಬ್ಯಾಗಿನಲ್ಲಿ ರೂ 1,500/- ನಗದು ಹಣ, ಮಕ್ಕಳ ಬಟ್ಟೆ ಹಾಗೂ ರೂ 3,34,400 ಮೌಲ್ಯದ ಒಟ್ಟು 88 ಗ್ರಾಂ ಚಿನ್ನಾಭರಣಗಳಿತ್ತು ಎಂದು ವಿವರಿಸಲಾಗಿದೆ. ಘಟನೆಯ ಬಗ್ಗೆ ಪೊಲೀಸ್ ಠಾಣೆಯಲ್ಲಿ 117/2023 ಕಲಂ; 379 ಐಪಿಸಿ ಯಂತೆ ಪ್ರಕರಣ ದಾಖಲಾಗಿದ್ದು ತನಿಖೆ ಮುಂದುವರಿದಿದೆ.

Related posts

ಮಾಜಿ ಮುಖ್ಯ ಮಂತ್ರಿ ಹೆಚ್. ಡಿ ಕುಮಾರ ಸ್ವಾಮಿ ನಾಳ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನಕ್ಕೆ ಭೇಟಿ

Suddi Udaya

ನಡ ಗ್ರಾ.ಪಂ ನಲ್ಲಿ ಸಾಮಾಜಿಕ ಲೆಕ್ಕ ಪರಿಶೋಧನಾ ವಿಶೇಷ ಗ್ರಾಮ ಸಭೆ

Suddi Udaya

ಪಿಲಿಚಾಮುಂಡಿಕಲ್ಲಿನಲ್ಲಿ ಭಕ್ತಿ -ಭಾವ ಸಂಭ್ರಮದಿಂದ ಆದ್ದೂರಿಯಾಗಿ ನಡೆದ ದೊಂಪದಬಲಿ ಉತ್ಸವ

Suddi Udaya

ಕನ್ಯಾಡಿ-I ಸರಕಾರಿ ಉನ್ನತೀಕರಿಸಿದ ಪ್ರಾಥಮಿಕ ಶಾಲಾ ಸಂಸತ್ ಚುನಾವಣೆ

Suddi Udaya

ನಿಡ್ಲೆ: ಬೂಡುಜಾಲು ನಾಡ ದೈವ ಮತ್ತು ಉಳ್ಳಾಲ್ತಿ ಅಮ್ಮನವರ ವರ್ಷಾವಧಿ ಸೋಣ ನಡಾವಳಿ ದೊಂಪದ ಬಲಿ ಜಾತ್ರಾ ಮಹೋತ್ಸವ

Suddi Udaya

ಶಿಬಾಜೆ ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯಿಂದ ವಿನೂತನ ಯೋಜನೆ: ಕ್ಷೇತ್ರದಿಂದ ಹೊರಗಿದ್ದರೂ ಪ್ರತಿದಿನದ ಪೂಜೆಯನ್ನು ಯೂಟ್ಯೂಬ್ ಮೂಲಕ ನೇರವಾಗಿ ನೋಡುವ ಅವಕಾಶ

Suddi Udaya
error: Content is protected !!