April 2, 2025
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಧಾರ್ಮಿಕವರದಿ

ಕೊರಿಂಜ ಶ್ರೀ ಪಂಚಲಿಂಗೇಶ್ವರ ದೇವಸ್ಥಾನದ ಪುನರ್ ಪ್ರತಿಷ್ಠಾ ಬ್ರಹ್ಮಕಲಶೋತ್ಸವ ಕಾರ್ಯಕ್ರಮದ ಪೂರ್ವಭಾವಿ ಸಭೆ

ಉರುವಾಲು: ಕೊರಿಂಜ ಶ್ರೀ ಪಂಚಲಿಂಗೇಶ್ವರ ದೇವಸ್ಥಾನದಲ್ಲಿ ಫೆಬ್ರವರಿ 15 ರಿಂದ 22.ರವರೆಗೆ ನಡೆಯುವ ಪುನರ್ ಪ್ರತಿಷ್ಠಾ ಬ್ರಹ್ಮಕಲಶೋತ್ಸವ ಕಾರ್ಯಕ್ರಮದ ಪೂರ್ವಭಾವಿ ಸಭೆ ಹಾಗೂ ಬ್ರಹ್ಮಕಲಶೋತ್ಸವದ ಸಮಿತಿ ರಚನೆ ಕಾರ್ಯಕ್ರಮ ದೇವಸ್ಥಾನದ ವಠಾರದಲ್ಲಿ ನೆರವೇರಿತು.

ಕಾರ್ಯಕ್ರಮದ ಮುಂದಿನ ಕಾರ್ಯಯೋಜನೆ, ರೋಪುರೇಷೆಗಳ ಬಗ್ಗೆ ಚರ್ಚಿಸಲಾಯಿತು. ಈ ಸಂದರ್ಭದಲ್ಲಿ ಮಡoತ್ಯಾರು ವರ್ತಕರ ಸಂಘದ ಅಧ್ಯಕ್ಷರಾದ ಜಯಂತ ಶೆಟ್ಟಿಯವರು ಸಭಾಧ್ಯಕ್ಷತೆ ವಹಿಸಿದ್ದರು.

ಮುಖ್ಯ ಅತಿಥಿಗಳಾಗಿ ಶ್ರೀ ಕುಕ್ಕೆ ಸುಬ್ರಮಣ್ಯ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಸದಸ್ಯರಾದ ಪ್ರಸನ್ನ ಧರ್ಬೆ , ದಿನಕರ ಪೂಜಾರಿ ಕಡ್ತಿಲ, ಕೊರಿಂಜ ದೇವಸ್ಥಾನದ ಆಡಳಿತ ಮೊಕ್ತೇಶರರಾದ ಯೋಗೀಶ್ ಪೂಜಾರಿ ಕಡ್ತಿಲ, ದೇವಸ್ಥಾನದ ಪವಿತ್ರ ಪಾಣಿಗಳಾದ ಹರೀಶ್ ಭಟ್ ತಾಳಿಂಜ, ಜೀರ್ಣೋದ್ಧಾರ ಸಮಿತಿ ಅಧ್ಯಕ್ಷರಾದ ದಾಸಪ್ಪ ಗೌಡ ಕೋಡಿಯಡ್ಕ, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಕಣಿಯೂರು ವಲಯದ ಮೇಲ್ವಿಚಾರಕರಾದ ಶಿವಾನಂದ ಉಪಸ್ಥಿತರಿದ್ದರು.

ಆಡಳಿತ ಮೊಕ್ತೇಶರರಾದ ಯೋಗೀಶ್ ಪೂಜಾರಿ ಕಡ್ತಿಲ ಪ್ರಾಸ್ತವಿಕ ಮಾತುಗಳನ್ನಾಡಿದರು. ಪ್ರಸಾದ್ ಕಡ್ತಿಲ ರವರು ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು. ವಿಜಯ ಕುಮಾರ್ ಕಳ್ಳಲಿಕೆ ಧನ್ಯವಾದವಿತ್ತರು.

Related posts

ಅಂಡಿಂಜೆ ಸ.ಉ.ಪ್ರಾ. ಶಾಲೆಯಲ್ಲಿ ರಾಷ್ಟ್ರೀಯ ವಿಜ್ಞಾನ ದಿನಾಚರಣೆ

Suddi Udaya

ಹೊಸಂಗಡಿ: ಪೆರಿಂಜೆ ನಿವಾಸಿ ಸುಂದರ ನೇಣು ಬಿಗಿದು ಆತ್ಮಹತ್ಯೆ

Suddi Udaya

ಪುಂಜಾಲಕಟ್ಟೆ: ಸೋಶಿಯಲ್ ಡೆಮೊಕ್ರಟಿಕ್ ಪಾರ್ಟಿ ಆಫ್ ಇಂಡಿಯಾ ನೂತನ ಕಛೇರಿ ಉದ್ಘಾಟನೆ ಹಾಗೂ ರಕ್ತದಾನ ಶಿಬಿರ

Suddi Udaya

ನಾಳ ಶ್ರೀ ದೇವಸ್ಥಾನದ ರಥಬೀದಿಯಲ್ಲಿ ಶನೀಶ್ವರ ಮಹಾತ್ಮೆ ಬಯಲಾಟ

Suddi Udaya

ಬರೆಂಗಾಯ ನಿಸರ್ಗ ಯುವಜನೇತರ ಮಂಡಲ ಹಾಗೂ ಅರಣ್ಯ ಇಲಾಖೆಯ ವತಿಯಿಂದ ವಿಶ್ವ ಪರಿಸರ ದಿನಾಚರಣೆ

Suddi Udaya

ನಿಡ್ಲೆ : ಕಾಟ್ಲಾ ನಿವಾಸಿ ಅನ್ನಪೂರ್ಣ ಜೋಶಿ ನಿಧನ

Suddi Udaya
error: Content is protected !!