April 2, 2025
ಗ್ರಾಮಾಂತರ ಸುದ್ದಿಚಿತ್ರ ವರದಿಜಿಲ್ಲಾ ಸುದ್ದಿತಾಲೂಕು ಸುದ್ದಿಬೆಳ್ತಂಗಡಿವರದಿ

ಶ್ರೀಕ್ಷೇತ್ರ ಧರ್ಮಸ್ಥಳ ಲಕ್ಷದೀಪೋತ್ಸವದ ಅಂಗವಾಗಿ ಡಿ.8 (ನಾಳೆ) 11ನೇ ವರ್ಷದ ಪಾದಯಾತ್ರೆ: ಉಜಿರೆ ಶ್ರೀ ಜನಾರ್ದನ ದೇವಸ್ಥಾನದಲ್ಲಿ ಮಧ್ಯಾಹ್ನ 3 ಕ್ಕೆ ಪಾದಯಾತ್ರೆಗೆ ಚಾಲನೆ

ಧರ್ಮಸ್ಥಳ: ನಾಡಿನ ಪವಿತ್ರ ಕ್ಷೇತ್ರ ಧರ್ಮಸ್ಥಳದಲ್ಲಿ ಕಾರ್ತಿಕ ಮಾಸದಲ್ಲಿ ನಡೆಯುವ ಲಕ್ಷದೀಪೋತ್ಸವವು ಡಿಸೆಂಬರ್ 8 ರಿಂದ ಪ್ರಾರಂಭಗೊಂಡು ಡಿ. 12 ರ ವರೆಗೆ ವೈಭವಪೂರ್ಣವಾಗಿ ನಡೆಯಲಿದ್ದು, ಇದರ ಅಂಗವಾಗಿ ಪ್ರತಿವರ್ಷದಂತೆ ಈ ವರ್ಷವೂ 11 ನೇ ವರ್ಷದ ಪಾದಾಯಾತ್ರೆಯು ಡಿ.8 ರಂದು(ನಾಳೆ) 3 ಗಂಟೆಗೆ ಉಜಿರೆ ಜನಾರ್ದನ ದೇವಸ್ಥಾನದಿಂದ ಧರ್ಮಸ್ಥಳದವರೆಗೆ ನಡೆಯಲಿದೆ.


ತಾಲೂಕಿನ ವಿವಿಧ ಗ್ರಾಮಗಳ ಹಾಗೂ ಹೊರ ತಾಲೂಕಿನ ಸುಮಾರು 20 ಸಾವಿರಕ್ಕೂ ಮಿಕ್ಕಿ ಭಕ್ತರು ಪ್ರತಿವರ್ಷವೂ ಭಾಗವಹಿಸುತ್ತಿದ್ದು, ಈ ವರ್ಷ ಸುಮಾರು 25 ಸಾವಿರಕ್ಕೂ ಮಿಕ್ಕಿ ಭಾಗವಹಿಸುವ ಸಾಧ್ಯತೆಗಳು ಕಂಡು ಬರುತ್ತಿದೆ.
ಶ್ರೀ ಮಂಜುನಾಥ ಸ್ವಾಮಿಯ ಭಾವಚಿತ್ರವುಳ್ಳ ಟ್ಯಾಬ್ಲೋ, ವಿವಿಧ ಯಕ್ಷಗಾನ ವೇಷ ಭೂಷಣಗಳು, ಭಜನಾ ತಂಡಗಳು, ಗ್ರಾಮಾಭಿವೃದ್ಧಿ ಯೋಜನೆಯ ವಿವಿಧ ವಲಯಗಳಿಂದ ಬಂದ ಕಾರ್ಯಕರ್ತರು, ವಿಪತ್ತು ನಿರ್ವಹಣಾ ತಂಡ, ಉಜಿರೆಯ ಬದುಕು ಕಟ್ಟೋಣ ಬನ್ನಿ ತಂಡ, ವಿವಿಧ ಸಂಘ ಸಂಸ್ಥೆಯವರು ಪಾದಯಾತ್ರೆಯಲ್ಲಿ ಶಿಸ್ತಿನಿಂದ ಪ್ರತಿವರ್ಷ ಭಾಗವಹಿಸುತ್ತಿದ್ದಾರೆ. ಈ ವರ್ಷವೂ ಇವರು ಪಾದಯಾತ್ರೆಯಲ್ಲಿ ಭಾಗವಹಿಸಲಿದ್ದಾರೆ. ಚೆಂಡೆ, ವಾದ್ಯ, ಸಮವಸ್ತ್ರಧಾರಿ ಭಕ್ತರು, ಯಕ್ಷಗಾನ ವೇಷಧಾರಿಗಳು, ವಿವಿಧ ಗ್ರಾಮಗಳಿಂದ ಭಜನಾ ತಂಡಗಳು ಆಗಮಿಸಲಿದ್ದು, ಕುಣಿತ ಭಜನೆ ಪಾದಯಾತ್ರೆಯ ವಿಶೇಷ ಆಕರ್ಷಣೆಯಾಗಲಿದೆ.


ಉಜಿರೆ ದೇವಸ್ಥಾನದ ವಠಾರದಲ್ಲಿ ಪ್ರತಿವರ್ಷದಂತೆ ಈ ವರ್ಷವೂ ಮಧ್ಯಾಹ್ನ ಶ್ರೀ ಭಗವಾನ್ ಶಿರಡಿಸಾಯಿ ಸತ್ಯಸಾಯಿ ಸೇವಾ ಕ್ಷೇತ್ರ ಹಳೆಕೋಟೆ ಬೆಳ್ತಂಗಡಿ ಇವರಿಂದ ಭಜನಾ ಸಂಕಿರ್ತನೆ ನಡೆಯಲಿದೆ. ಬಳಿಕ ಶ್ರೀ ಜನಾರ್ಧನ ದೇವಸ್ಥಾನದ ಎದುರು ದೀಪ ಪ್ರಜ್ವಲಿಸಿ ಪಾದಯಾತ್ರೆಗೆ ಚಾಲನೆ ದೊರೆಯಲಿದೆ. ಪಾದಯಾತ್ರೆಯಲ್ಲಿ ವಿವಿಧ ಕ್ಷೇತ್ರಗಳ ಗಣ್ಯರು, ಜನಪ್ರತಿನಿಧಿಗಳು, ತಾಲೂಕಿನ ದೇವಸ್ಥಾನಗಳ ಮುಖ್ಯಸ್ಥರು, ಸಂಘ-ಸಂಸ್ಥೆಯವರು, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಮೇಲ್ವಿಚಾರಕರು, ಸೇವಾ ಪ್ರತಿನಿಧಿಗಳು, ಒಕ್ಕೂಟಗಳ ಪದಾಧಿಕಾರಿಗಳು, ಜ್ಞಾನವಿಕಾಸ ಕೇಂದ್ರದ ಸದಸ್ಯರು, ನಾಗರಿಕರು, ಅಭಿಮಾನಿಗಳು ಮೆರವಣಿಗೆಯ ಜೊತೆ ಸಾಗಲಿದ್ದಾರೆ.


ಉಜಿರೆಯಿಂದ ಸುಮಾರು ಹತ್ತು ಕಿ.ಮೀ ದೂರದ ಧರ್ಮಸ್ಥಳಕ್ಕೆ ಬರುವ ಪಾದಯಾತ್ರಿಗಳನ್ನು ಧರ್ಮಸ್ಥಳ ಮಹಾದ್ವಾರದ ಬಳಿ ಕ್ಷೇತ್ರದ ವತಿಯಿಂದ ವಾದ್ಯಘೋಷಗಳೊಂದಿಗೆ ಸ್ವಾಗತಿಸುವ ಕಾರ್ಯಕ್ರಮವಿದೆ. ಅಮೃತವರ್ಷಿಣಿ ಸಭಾ ಭವನದಲ್ಲೂ ಹಳೆಕೋಟೆಯ ಶ್ರೀ ಭಗವಾನ್ ಶಿರ್ಡಿ ಸಾಯಿ ಸತ್ಯಸಾಯಿ ಭಜನಾ ತಂಡದವರಿಂದ ಭಜನಾ ಕಾರ್ಯಕ್ರಮ ನಡೆಯಲಿದೆ. ಪಾದಯಾತ್ರೆಯುದ್ದಕ್ಕೂ ಜನರು ದೇವರ ನಾಮಸ್ಮರಣೆ ಮಾಡುತ್ತಾ ಸಾಗಲಿದ್ದು, ಕನ್ಯಾಡಿಯಲ್ಲಿ ಸೇವಾ ಭಾರತಿ, ಶಾಂತಿವನ ಹಾಗೂ ಇತರ ಕಡೆಗಳಲ್ಲೂ ಪಾದಯಾತ್ರಿಗಳಿಗೆ ಶರಬತ್, ಕುಡಿಯುವ ನೀರು, ಪಾನೀಯ, ಪಾನಕದ ವ್ಯವಸ್ಥೆಯನ್ನು ಸಂಘ-ಸಂಸ್ಥೆಯವರು ಮಾಡಲಿದ್ದಾರೆ.

Related posts

ಉಜಿರೆ ಎಸ್.ಡಿ.ಎಂ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ಮಕ್ಕಳ ದಿನಾಚರಣೆ

Suddi Udaya

ಡಾ. ಪ್ರಸನ್ನಕುಮಾರ ಐತಾಳರಿಗೆ “ಎ. ಶಾಮ ರಾವ್ ಸ್ಮಾರಕ ಉತ್ತಮ ಶಿಕ್ಷಕ” ಪ್ರಶಸ್ತಿ

Suddi Udaya

ಮುಂಡಾಜೆ ಶ್ರೀ ಮೂರ್ತಿಲ್ಲಾಯ ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷರಾಗಿ ರಾಘವ ಶೆಟ್ಟಿ, ಕಾರ್ಯದರ್ಶಿಯಾಗಿ ಬಾಬು ಪೂಜಾರಿ ಆಯ್ಕೆ

Suddi Udaya

ಬಂದಾರಿನಲ್ಲಿ ಮತ್ತೆ ತೋಟಕ್ಕೆ ನುಗ್ಗಿದ್ದ ಕಾಡಾನೆ: ಕೃಷಿ ಹಾನಿ

Suddi Udaya

ಉಜಿರೆಯ ಎಸ್.ಡಿ.ಎಂ. ಕಾಲೇಜಿನ ಸಮುದಾಯ ಬಾನುಲಿ ಕೇಂದ್ರ ರೇಡಿಯೋ ನಿನಾದ 90.4 ಎಫ್.ಎಂ. ವತಿಯಿಂದ ‘ನಮ್ಮ ಹಿರಿಯರು ನಮ್ಮ ಗೌರವ’ ಮಾಹಿತಿ ಕಾರ್ಯಕ್ರಮ

Suddi Udaya

ಕಲ್ಮಂಜ ಪ್ರೌಢಶಾಲೆಯಲ್ಲಿ ಪ್ರೇರಣಾ ತರಗತಿ

Suddi Udaya
error: Content is protected !!