ಅಳದಂಗಡಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಮೂಡಯಿತ್ತಿಲು ಎಸ್.ಸಿ ಕಾಲೋನಿಯಲ್ಲಿ ಮಹಾತ್ಮ ಗಾಂಧಿ ನರೇಗಾ ಯೋಜನೆ ಮತ್ತು 15 ಹಣಕಾಸು ಯೋಜನೆಯ ಸಾಮಾಜಿಕ ಪರಿಶೋಧನಾ ಕುರಿತು ಐಇಸಿ ಚಟುವಟಿಕೆಗಳನ್ನು ಹಮ್ಮಿಕೊಳ್ಳಲಾಯಿತು.
ಈ ಸಂದರ್ಭ ಸಾಮಾಜಿಕ ಪರಿಶೋಧನೆಯ ತಾಲೂಕು ಕಾರ್ಯಕ್ರಮ ವ್ಯವಸ್ಥಾಪಕರಾದ ಶ್ರೀಮತಿ ಜಯಲಕ್ಷ್ಮಿ ಯವರು ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯ ಸಾಮಾಜಿಕ ಪರಿಶೋಧನೆಯ ಪ್ರಕ್ರಿಯೆಯ ಕುರಿತು ಮಾಹಿತಿ ನೀಡಿದರು.
ಈ ವೇಳೆ ಸ್ವಚ್ಚತಾ ವಾಹನದಲ್ಲಿ ಸಾಮಾಜಿಕ ಸಭೆಯ ಕುರಿತಂತೆ ಪ್ರಚಾರ ಮಾಡಲಾಯಿತು.
ಕಾಲೋನಿ ಭೇಟಿ ಸಂದರ್ಭ ಗ್ರಾ.ಪಂ ಅಭಿವೃದ್ಧಿ ಅಧಿಕಾರಿ ಶ್ರೀಮತಿ ಪೂರ್ಣಿಮಾ ಜೆ., ದ್ವಿತೀಯ ಲೆಕ್ಕ ಸಹಾಯಕರಾದ ಪೂವಪ್ಪ ಮಡಿವಾಳ, ಸಾಮಾಜಿಕ ಪರಿಶೋಧನಾ ತಂಡದ ಗ್ರಾಮ ಸಂಪನ್ಮೂಲ ವ್ಯಕ್ತಿ ಶ್ರೀಮತಿ ಸುಮಲತಾ, ತಾಲೂಕು ಐಇಸಿ ಸಂಯೋಜಕರು ಶ್ರೀಮತಿ ವಿನಿಷ, ಗ್ರಾ.ಪಂ ಸಿಬ್ಬಂದಿಗಳಾದ ರವಿ ಕುಮಾರ್, ಮೋಹನ್ ಗೌಡ, ಕೃಷ್ಣ ,ಸ್ವಚ್ಚತಾ ವಾಹನ ಚಾಲಕಿಯಾದ ಶ್ರೀಮತಿ ಸುರೇಖ ಆನಂದ ಉಪಸ್ಥಿತರಿದ್ದರು.