38.6 C
ಪುತ್ತೂರು, ಬೆಳ್ತಂಗಡಿ
March 6, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಪ್ರಮುಖ ಸುದ್ದಿಬೆಳ್ತಂಗಡಿವರದಿ

ಉದ್ಯಮಿ ಶಶಿಧರ ಶೆಟ್ಟಿ- ಶ್ರೀಮತಿ ಪ್ರಮೀಳಾ ಎಸ್ ಶೆಟ್ಟಿ ಯವರಿಗೆ ವೈವಾಹಿಕ ದಾಂಪತ್ಯ ಜೀವನದ ಬೆಳ್ಳಿ ಹಬ್ಬದ ಸಂಭ್ರಮ: ಗೋಶಾಲೆಗೆ ರೂ. 1.50 ಲಕ್ಷ ಮೌಲ್ಯದ ಯಂತ್ರವನ್ನು ನೀಡುವುದಾಗಿ ಭರವಸೆ

ಬೆಳ್ತಂಗಡಿ: ವೈವಾಹಿಕ ಜೀವನದ ಬೆಳ್ಳಿ ಹಬ್ಬದ ಸಂಭ್ರಮವನ್ನು ಗೋಶಾಲೆಯಲ್ಲಿ ಸರಳವಾಗಿ ಆಚರಿಸುವ ಮೂಲಕ ಉದ್ಯಮಿ ಶಶಿಧ‌ರ್ ಶೆಟ್ಟಿ ದಂಪತಿ ಮಾದರಿಯಾಗಿದ್ದು ಡಿ.07 ರಂದು ಬೆಳ್ತಂಗಡಿ ತಾಲೂಕಿನ ಕಳೆಂಜ ಗ್ರಾಮದಲ್ಲಿರುವ ಸ್ವಾಮೀ ವಿವೇಕಾನಂದ ಸೇವಾಶ್ರಮ ಟ್ರಸ್ಟ್ ಪ್ರವರ್ತಿತ ನಂದಗೋಕುಲ ಗೋಶಾಲೆಗೆ ಪತ್ನಿ ಪ್ರಮೀಳಾ ಶಶಿಧರ್ ಶೆಟ್ಟಿ ಹಾಗೂ ಕುಟುಂಬಸ್ಥರ ಜೊತೆ ಭೇಟಿ ನೀಡಿ, ಅಲ್ಲಿನ ವ್ಯವಸ್ಥೆ ಸಮಸ್ಯೆಗಳ ಬಗ್ಗೆ ಚರ್ಚಿಸಿದ್ದರು.

ಈ ವೇಳೆ ಸುಮಾರು ಒಂದೂವರೆ ಲಕ್ಷ ರೂಪಾಯಿ ಮೌಲ್ಯದ ಯಂತ್ರವನ್ನು ನೀಡುವುದಾಗಿ ಭರವಸೆ ನೀಡಿದರಲ್ಲದೇ ಮುಂದಿನ ಹತ್ತು ದಿನಗಳ ಒಳಗೆ ಮೆಷಿನ್ ತರಿಸುವ ಬಗ್ಗೆಯೂ ತಿಳಿಸಿದರು.

ಈ ವೇಳೆ ಮಾತನಾಡಿದ ಶಶಿಧರ್ ಶೆಟ್ಟಿಯವರು ಗೋಶಾಲೆಯ ಕೆಲವೊಂದು ಸಮಸ್ಯೆಗಳ ಬಗ್ಗೆ ಟ್ರಸ್ಟ್ ನವರು ನನ್ನ ಗಮನಕ್ಕೆ ತಂದಾಗ ಪ್ರಮುಖವಾಗಿ ಗೋವುಗಳಿಗೆ ಅಡಿಕೆ ಹಾಳೆ ಅತ್ಯುತ್ತಮ ಆಹಾರವಾಗಿದ್ದು ಇದನ್ನು ಹುಡಿ ಮಾಡುವ ಯಂತ್ರದ ಅವಶ್ಯಕತೆ ಇದ್ದು ಇದಕ್ಕೆ ಸುಮಾರು 1.50 ಲಕ್ಷ ರೂ ಅವಶ್ಯಕತೆ ಇದೆ ಒಂದು ವೇಳೆ ಅಂತಹ ಮೆಷಿನ್ ಇದ್ದಲ್ಲಿ ತಿಂಗಳಲ್ಲಿ ಸುಮಾರು 50 ಸಾವಿರದಷ್ಟು ಖರ್ಚಿನ ಹೊರೆ ಕಡಿಮೆಯಾಗಲಿದೆ ಎಂಬ ಮಾಹಿತಿಯಂತೆ ಸಂತೋಷದಿಂದ ಒಪ್ಪಿ ಮೆಷಿನ್ ಖರೀದಿಯ ಬಗ್ಗೆ ತಿಳಿಸಿದ್ದೇನೆ. ಅದಲ್ಲದೇ ಮುಂದಿನ ದಿನಗಳಲ್ಲಿ ಗೋ ಶಾಲೆಯ ಎಲ್ಲಾ ಕಾರ್ಯಕ್ರಮಗಳಲ್ಲಿ ಭಾಗಿಯಾಗಲಿದ್ದು ಮಾದರಿ ರೀತಿಯಲ್ಲಿ ಈ ಗೋ ಶಾಲೆ ಮುನ್ನಡೆಯುವ ನಿಟ್ಟಿನಲ್ಲಿ ಸದಾ ಪ್ರೋತ್ಸಾಹ ನೀಡಲಿದ್ದೇನೆ ಎಂದರು. ಮುಂಬರುವ ಗೋಕುಲದ ದೀಪೋತ್ಸವ ಕಾರ್ಯಕ್ರಮಕ್ಕೂ ತನ್ನಿಂದಾಗುವ ನೆರವು ನೀಡುತ್ತೇನೆ ಎಂದು ಭರವಸೆ ನೀಡಿದ್ದಾರೆ.


ಈ ಸಂದರ್ಭದಲ್ಲಿ ಗೋಶಾಲೆಯ ವತಿಯಿಂದ ಶಶಿಧ‌ರ್ ಶೆಟ್ಟಿ ದಂಪತಿಗಳನ್ನು ಗೌರವಿಸಲಾಯಿತು.

ಈ ವೇಳೆ ಟ್ರಸ್ಟ್ ಅಧ್ಯಕ್ಷ ಡಾ.ದಯಾಕರ್, ಕಾರ್ಯದರ್ಶಿ ಸುಬ್ರಹ್ಮಣ್ಯ ಅಗರ್ತ, ಟ್ರಸ್ಟಿಗಳಾದ ರಮೇಶ್ ಪ್ರಭು, ಭಾಸ್ಕರ ಧರ್ಮಸ್ಥಳ, ದೀಪೋತ್ಸವ ಸಮಿತಿ ಅಧ್ಯಕ್ಷ ನಾರಾಯಣ ಗೌಡ ಕೊಳಂಬೆ, ಗಣೇಶ್ ಉಜಿರೆ, ಆದರ್ಶ್, ಶಶಿಧರ್ ಶೆಟ್ಟಿ ಕುಟುಂಬಸ್ಥರು ಸೇರಿದಂತೆ ಇತರರು ಉಪಸ್ಥಿತರಿದ್ದರು.

Related posts

ಉಜಿರೆ: ವೈದ್ಯರ ದಿನಾಚರಣೆಯ ಅಂಗವಾಗಿ ಹಿರಿಯ ವೈದ್ಯ ಡಾ.ಕೆ.ಎನ್.ಶೆಣೈರವರಿಗೆ ಸನ್ಮಾನ

Suddi Udaya

ಶ್ರೀ ಕ್ಷೇತ್ರ ಧರ್ಮಸ್ಥಳದಿಂದ ಸುಬ್ರಹ್ಮಣ್ಯ ಕ್ಷೇತ್ರಕ್ಕೆ ಹೋಗುವ ಹಾಗೂ ಬರುವ ಎಲ್ಲಾ ಸರ್ಕಾರಿ ಬಸ್ಸುಗಳು ಸೌತಡ್ಕ ಮಾರ್ಗವಾಗಿ ಚಲಿಸಲು: ಸೌತಡ್ಕ ಶ್ರೀ ಮಹಾಗಣಪತಿ ಕ್ಷೇತ್ರದ ವ್ಯವಸ್ಥಾಪನಾ ಸಮಿತಿಯಿಂದ ಪುತ್ತೂರು ಕ.ರಾ.ರ.ಸಾ.ನಿಗಮದ ನಿಯಂತ್ರಣಾಧಿಕಾರಿಯವರಿಗೆ ಮನವಿ

Suddi Udaya

ಭಾರೀ ಮಳೆಗೆ ತೆಕ್ಕಾರು ಜುಮ್ಮಾ ಮಸೀದಿಯ ಆವರಣದ ತಡೆಗೋಡೆ ಕುಸಿತ

Suddi Udaya

ಸುದ್ದಿ ಉದಯ ದೀಪಾವಳಿ ವಿಶೇಷಾಂಕ- 2024: ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ‌.ಡಿ ವೀರೇಂದ್ರ ಹೆಗ್ಗಡೆಯವರಿಂದ ಬಿಡುಗಡೆ

Suddi Udaya

ಲಾಯಿಲ: ಪ್ರಸನ್ನ ಆಯುರ್ವೇದ ಮತ್ತು ಆಸ್ಪತ್ರೆ ಕಾಲೇಜು ಹಾಗೂ ಪ್ರಸನ್ನ ನರ್ಸಿಂಗ್ ಕಾಲೇಜಿನ ಪದವಿ ಪ್ರದಾನ ಸಮಾರಂಭ

Suddi Udaya

ಉಜಿರೆ: ಶ್ರೀ ವನದುರ್ಗಾ ಶ್ರೀ ನಾಗರಕೇಶ್ವರಿ ಸಾನಿಧ್ಯ ಕ್ಷೇತ್ರದಲ್ಲಿ ವೈಭವದೊಂದಿಗೆ ನೆರವೇರಿದ ದೈವಗಳ ನರ್ತನ ಸೇವೆ

Suddi Udaya
error: Content is protected !!