ಬೆಳ್ತಂಗಡಿ : ಸರ್ಕಾರಿ ಪ್ರೌಢಶಾಲೆ ಕೊಯ್ಯೂರು ಶಾಲಾ ರಜತ ಮಹೋತ್ಸವ ಡಿ.09 ರಂದು ಶಾಲಾ ಆವರಣದಲ್ಲಿ ನಡೆಯಿತು. ಕಾರ್ಯಕ್ರಮವನ್ನು ಮಾಜಿ ಶಾಸಕ ಕೆ. ವಸಂತ ಬಂಗೇರ ಉದ್ಘಾಟಿಸಿ ಶುಭಹಾರೈಸಿದರು.
ಮುಖ್ಯ ಅತಿಥಿಗಳಾಗಿ ಬೆಂಗಳೂರು ಉಪನಿಬಂಧಕರು ಸಹಕಾರಿ ಇಲಾಖೆಯ ಬಿ. ಕೆ. ಸಲೀಂ ಕೆ. ಸಿ. ಎಸ್, ಹಾಸನದ ಖಜಾಂಚಿ ಉಪ ಅಂಚೆ ಕಚೇರಿಯ ಉಮೇಶ್, ಬೆಳ್ತಂಗಡಿ ಕ್ಷೇತ್ರ ಶಿಕ್ಷಣಾಧಿಕಾರಿಗಳು ಶಾಲಾ ಶಿಕ್ಷಣ ಇಲಾಖೆಯ ತಾರಕೇಸರಿ, ಕೊಯ್ಯೂರು ಗ್ರಾ.ಪಂ. ಅಧ್ಯಕ್ಷೆ ಶ್ರೀಮತಿ ದಯಾಮಣಿ, ಕೊಯ್ಯೂರು ಸ.ಪ.ಪೂ ಕಾಲೇಜು ಪ್ರಾಚಾರ್ಯರಾದ ಮೋಹನ ಗೌಡ, ಕೊಯ್ಯೂರು ಗ್ರಾ. ಪಂ ಉಪಾಧ್ಯಕ್ಷರಾದ ಹರೀಶ್ ಗೌಡ ಬಜಿಲ, ಸಂಚಾಲಕ ಬಾಲಕೃಷ್ಣ ಪೂಜಾರಿ ಬಜೆ, ಗೌರವಾಧ್ಯಕ್ಷ ಅಶೋಕ್ ಭಟ್, ಅಧ್ಯಕ್ಷ ಪ್ರಚಂಡ ಭಾನು ಭಟ್, ಕಾರ್ಯದರ್ಶಿ ದಾಮೋದರ ಗೌಡ ಬೆರ್ಕೆ, ಕೋಶಾಧಿಕಾರಿ ಮಹಮ್ಮದ್ ಹಾರೂನು, ಹಿರಿಯ ವಿದ್ಯಾರ್ಥಿ ಸಂಘದ ಅಧ್ಯಕ್ಷ ಯತೀಶ ದಡ್ದು, ಶಾಲಾ ನಾಯಕ ಪೂರ್ಣೇಶ್ ಉಪಸ್ಥಿತರಿದ್ದರು.
ಸ್ವಸ್ತಿ ವಚನವನ್ನು ಪುಂಜಾಲಕಟ್ಟೆ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ದೈಹಿಕ ಶಿಕ್ಷಣ ನಿರ್ದೇಶಕರಾದ ಲೆಫ್ಟಿನೆಂಟ್ ಡಾ. ಶೈಲೇಶ್ ಕುಮಾರ್ ಡಿ. ಎಚ್. ಮಾಡಿದರು.
ಕಾರ್ಯಕ್ರಮದಲ್ಲಿ ಅನುದಾನ ಮಂಜೂರುಗೊಳಿಸಿದ ಮಾಜಿ ಶಾಸಕ ವಸಂತ ಬಂಗೇರರವನ್ನು ಸನ್ಮಾನಿಸಿ ಗೌರವಿಸಲಾಯಿತು. ಹಾಗೆಯೇ ಶಾಲೆಯಲ್ಲಿ ಸೇವೆ ಸಲ್ಲಿಸಿದ ಬಾಲಕೃಷ್ಣ ಭಟ್, ಧರ್ಣಪ್ಪ ಗೌಡ, ಪ್ರಚಂಡ ಬಾನು, ಅನಂತ್ ಕೃಷ್ಣ, ಉಮೇಶ್ ಇವರನ್ನು ಸನ್ಮಾನಿಸಲಾಯಿತು.
ಈ ಸಂದರ್ಭದಲ್ಲಿ ಸಮಿತಿಯ ಪದಾಧಿಕಾರಿಗಳು, ಶಿಕ್ಷಕ ವೃಂದ, ಶಾಲಾ ಅಭಿವೃದ್ಧಿ ಮತ್ತು ಮೇಲುಸ್ತುವರಿ ಸಮಿತಿ ಸದಸ್ಯರು, ಪೋಷಕರು, ವಿದ್ಯಾರ್ಥಿಗಳು, ಊರವರು, ಉಪಸ್ಥಿತರಿದ್ದರು.
ಮುಖ್ಯೋಪಾಧ್ಯಾಯ ರಾಧಾಕೃಷ್ಣ ಪ್ರಾಸ್ತವಿಕವಾಗಿ ಮಾತನಾಡಿದರು. ಕಾರ್ಯಾಧ್ಯಕ್ಷ ಪ್ರವೀಣ್ ಗೌಡ ಸ್ವಾಗತಿಸಿದರು. ಶಿಕ್ಷಕ ರಾಮಚಂದ್ರ ನಿರೂಪಿಸಿ, ಧನ್ಯವಾದವಿತ್ತರು.
ಸಂಜೆ 300 ಕಲಾವಿದರಿಂದ ಮೂರು ಗಂಟೆಗಳ ಕಾಲ ಆಳ್ವಾಸ್ ಸಾಂಸ್ಕೃತಿಕ ವೈಭವ ನಡೆಯಲಿದೆ.