September 6, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಪ್ರಮುಖ ಸುದ್ದಿಬೆಳ್ತಂಗಡಿವರದಿ

ಸದಸ್ಯರು ತಂದ ಅವಿಶ್ವಾಸ ನಿರ್ಣಯ ಮಂಡನೆ ಯಶಸ್ವಿ: ಅಧ್ಯಕ್ಷ ಗಾದಿ ಕಳೆದುಕೊಂಡ ಪುದುವೆಟ್ಟು ಗ್ರಾಪಂ ಅಧ್ಯಕ್ಷೆ ಅನಿತಾ ಕುಮಾರಿ – ಉಪಾಧ್ಯಕ್ಷ ಪೂರ್ಣಾಕ್ಷ ಪ್ರಭಾರ ಅಧ್ಯಕ್ಷರಾಗಿ ಕಾರ್ಯನಿರ್ವಹಣೆ

ಪುದುವೆಟ್ಟು: ಪುದುವೆಟ್ಟು ಗ್ರಾಮ ಪಂಚಾಯತದ ಅಧ್ಯಕ್ಷೆ ಶ್ರೀಮತಿ ಅನಿತಾ ಕುಮಾರಿ ಅವರ ವಿರುದ್ಧ ಸದಸ್ಯರು ತಂದ ಅವಿಶ್ವಾಸ ನಿರ್ಣಯ ಮಂಡನೆ ಯಶಸ್ವಿಯಾಗಿದ್ದು, ಅಧ್ಯಕ್ಷರು ತಮ್ಮ ಅಧ್ಯಕ್ಷ ಗಾದಿಯನ್ನು ಕಳೆದುಕೊಂಡಿದ್ದಾರೆ.

ಉಪಾಧ್ಯಕ್ಷ ಪೂರ್ಣಾಕ್ಷ


ಪುದುವೆಟ್ಟು ಗ್ರಾಮ ಪಂಚಾಯತದಲ್ಲಿ ಬಿಜೆಪಿ ಬೆಂಬಲಿತರ ಆಡಳಿತವಿದ್ದು, ಅಧ್ಯಕ್ಷರಾಗಿ ಶ್ರೀಮತಿ ಅನಿತಾ ಕುಮಾರಿ ಅವರು ಕಳೆದ ಒಂದೂವರೆ ವರ್ಷದಿಂದ ಕಾರ್ಯನಿರ್ವಹಿಸುತ್ತಿದ್ದಾರೆ. ಆದರೆ ಇತ್ತಿಚೀನ ದಿನಗಳಲ್ಲಿ ನಡೆದ ಕೆಲವೊಂದು ಬೆಳವಣಿಗೆಯಲ್ಲಿ ಅಧ್ಯಕ್ಷರ ವಿರುದ್ಧ ಅವರದೇ ಪಕ್ಷ ಬೆಂಬಲಿತ ಸದಸ್ಯರು ಅಸಮಾಧಾನಗೊಂಡು, ಅಧ್ಯಕ್ಷರ ಪದಚ್ಯುತಿಗೆ ನ.20ರಂದು ಪುತ್ತೂರು ಎ.ಸಿಯವರಿಗೆ ಅವಿಶ್ವಾಸ ಸೂಚನಾ ಪತ್ರ ಸಲ್ಲಿಸಿದ್ದರು.

ಇಂದು, ಡಿ.12ರಂದು ಬೆಳಿಗ್ಗೆ ಪುತ್ತೂರು ಸಹಾಯಕ ಕಮೀಷನರ್ ಅವರು ಉಪಸ್ಥಿತಿಯಲ್ಲಿ ಅವಿಶ್ವಾಸ ಸೂಚನೆ ನಿರ್ಣಯ ಸಭೆ ನಡೆಯಿತು. ಅಧ್ಯಕ್ಷರ ವಿರುದ್ಧ 7 ಮಂದಿ ಹಾಗೂ ಅಧ್ಯಕ್ಷರ ಪರ ಒಬ್ಬರು ಕೈ ಎತ್ತಿ ಬೆಂಬಲ ಸೂಚಿಸಿದರು. ಇದರಿಂದಾಗಿ ಅಧ್ಯಕ್ಷ ತಮ್ಮ ಅಧ್ಯಕ್ಷ ಗಾದಿಯನ್ನು ಕಳೆದುಕೊಂಡಿದ್ದಾರೆ.
ಉಪಾಧ್ಯಕ್ಷ ಸ್ಥಾನದಲ್ಲಿದ್ದ ಪೂರ್ಣಾಕ್ಷ ರವರು ಪ್ರಭಾರ ಅಧ್ಯಕ್ಷರಾಗಿ ಕಾರ್ಯ ನಿರ್ವಹಿಸಲಿದ್ದಾರೆ.

Related posts

ಧರ್ಮಸ್ಥಳ ಡಿ ಹರ್ಷೇಂದ್ರ ಕುಮಾರ್ ರಿಗೆ ಹುಟ್ಟು ಹಬ್ಬದ ಶುಭಾಶಯ ಕೋರಿದ ಕನ್ಯಾಡಿ ಗಣೇಶೋತ್ಸವ ಸಮಿತಿ

Suddi Udaya

ಸೆ.20-22: ಮಂಗಳೂರು- ಉಡುಪಿಯಲ್ಲಿ ಬಿಗ್ ಬ್ರಾಂಡ್ಸ್ ಎಕ್ಸ್ಪೋ 2024: ಒಂದೇ ಸೂರಿನಡಿಯಲ್ಲಿ 120 ಕ್ಕೂ ಹೆಚ್ಚಿನ ಪ್ರದರ್ಶನ ಮತ್ತು ಮಾರಾಟ ಮಳಿಗೆಗಳು

Suddi Udaya

ಅನುಗ್ರಹ ಆಂ.ಮಾ. ಶಾಲೆಯಲ್ಲಿ ದೀಪ ಪ್ರದಾನ ಕಾರ್ಯಕ್ರಮ

Suddi Udaya

ಎಸ್.ಡಿ.ಎಂ. ರಸಾಯಶಾಸ್ತ್ರ ರಾಷ್ಟ್ರೀಯ ವಿಚಾರ ಸಂಕಿರಣ: ಅನ್ವಯಿಕ ಪ್ರಯೋಗಗಳಿಂದ ಸುಸ್ಥಿರ ಬೆಳವಣಿಗೆ: ಡಾ. ಸತೀಶ್ಚಂದ್ರ ಎಸ್.

Suddi Udaya

ಮಹಿಳಾ ಹೆಡ್ ಕಾನ್ ಸ್ಟೇಬಲ್ ಹುದ್ದೆಗೆ ಮುಂಭಡ್ತಿಗೊಂಡ ವೇಣೂರು ಪೊಲೀಸ್ ಠಾಣೆಯ ಜಯಶ್ರೀ

Suddi Udaya

ಅಳದಂಗಡಿ ಗ್ರಾ.ಪಂ. ನ ಹಿಂದೂ ರುದ್ರ ಭೂಮಿ ಅಭಿವೃದ್ಧಿ ಸಮಿತಿ ರಚನೆ

Suddi Udaya
error: Content is protected !!