ಬೆಳ್ತಂಗಡಿ: ಬೆಂಗಳೂರಿನ ವಿಭಾಗೀಯ ರೈಲ್ವೆ ಕಚೇರಿಯಲ್ಲಿ ಹಿರಿಯ ಅಧಿಕಾರಿಗಳ ಸಮ್ಮುಖದಲ್ಲಿ ಮೂರನೇ ತ್ರೈಮಾಸಿಕ ರೈಲ್ವೆ ಸಲಹಾ ಮಂಡಳಿಯ ಸಭೆಯು ಇತ್ತೀಚೆಗೆ ಏರ್ಪಡಿಸಲಾಗಿತ್ತು. ಸಭೆಯಲ್ಲಿ ನೈರುತ್ಯ ರೈಲ್ವೇ DRUCC ಸದಸ್ಯರಾದ ರಾಜೇಶ್ ಪುದುಶೇರಿ ಭಾಗವಹಿಸಿದರು.
ಸಭೆಯಲ್ಲಿ ಬೆಂಗಳೂರಿನಿಂದ ಮಂಗಳೂರಿಗೆ ವಂದೇ ಭಾರತ್ ಹೊಸ ರೈಲು ಮಾರ್ಗವನ್ನು ಅಳವಡಿಸಲು ಕೋರಲಾಗಿತ್ತು ಹಾಗೂ ಮಂಗಳೂರು ವಿಭಾಗದ ಹಲವಾರು ರೈಲ್ವೆ ಸಮಸ್ಯೆಗಳನ್ನು ಚರ್ಚಿಸಲಾಗಿ ಈ ಬಗ್ಗೆ ಹಿರಿಯ ರೈಲ್ವೆ ಅಧಿಕಾರಿಗಳು ಕೂಲಂಕುಷವಾಗಿ ಪರಿಶೀಲಿಸಿ ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.











