37.9 C
ಪುತ್ತೂರು, ಬೆಳ್ತಂಗಡಿ
March 6, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿವರದಿ

ನಡ ಸ.ಪ.ಪೂ. ಕಾಲೇಜು ವಾರ್ಷಿಕ ಕ್ರೀಡಾಕೂಟ

ಕ್ರೀಡೆ ದೇಹಕ್ಕೆ ಮನಸಿಗೆ ಖುಷಿ ಕೊಡುವುದರ ಜೊತೆಗೆ ಜೀವನ ಮೌಲ್ಯಗಳನ್ನು ಕಲಿಸಿ ಕೊಡುತ್ತದೆ. ಸೋಲು ಗೆಲುವುಗಳನ್ನು ಸಮಾನವಾಗಿ ಸ್ವೀಕರಿಸುವ ಮನೋಭಾವವನ್ನು ಬೆಳೆಸಿ ಬದುಕಿಗೆ ಶಕ್ತಿ ತುಂಬಿ ಕೊಡುತ್ತದೆ ಎಂದು ನಾವುರದ ಆರೋಗ್ಯ ಕ್ಲಿನಿಕ್ ನ ಜನಪ್ರಿಯ ವೈದ್ಯರಾದ ಪ್ರದೀಪ್ ಕುಮಾರ್ ಇವರು ವಿದ್ಯಾರ್ಥಿಗಳಿಗೆ ಕರೆ ನೀಡಿದರು.

ಅವರು ನಡ ಸ.ಪ.ಪೂ. ಕಾಲೇಜು ಇಲ್ಲಿನ ವಾರ್ಷಿಕ ಕ್ರೀಡಾಕೂಟವನ್ನು ಉದ್ಘಾಟಿಸಿ ಮಾತನಾಡಿದರು.

ಕಾಲೇಜು ಅಭಿವೃದ್ಧಿ ಸಮಿತಿಯ ಕಾರ್ಯಾಧ್ಯಕ್ಷರಾದ ಅಜಿತ್ ಕುಮಾರ್ ಆರಿಗರು ಧ್ವಜಾರೋಹಣಗೈದರು. ಪ್ರಾಂಶುಪಾಲರಾದ ಚಂದ್ರಶೇಖರ್ ಅಧ್ಯಕ್ಷತೆ ವಹಿಸಿ ಶುಭ ಹಾರೈಸಿದರು. ಉಪನ್ಯಾಸಕರಾದ ಮೋಹನ ಗೌಡರು ನಿರೂಪಿಸಿದ ಕಾರ್ಯಕ್ರಮದಲ್ಲಿ ಲಿಲ್ಲಿ ಸ್ವಾಗತಿಸಿ, ಶಿಲ್ಪಾ ಧನ್ಯವಾದವಿತ್ತರು.

ಕ್ರೀಡಾ ಮಾರ್ಗದರ್ಶಿಯಾದ ವಸಂತಿ ತಂಡದ ನಾಯಕರಿಗೆ ಕ್ರೀಡಾ ಪ್ರತಿಜ್ಞಾ ವಿಧಿ ಬೋಧಿಸಿದರು. ಕೊಯ್ಯೂರು ಸರಕಾರಿ ಪ್ರೌಢ ಶಾಲೆಯ ದೈಹಿಕ ಶಿಕ್ಷಕರಾದ ಪ್ರವೀಣ್ ಅಚ್ಚುಕಟ್ಟಾಗಿ ಕ್ರೀಡೆಗಳನ್ನು ನಡೆಸಿಕೊಟ್ಟರು. ಎಲ್ಲಾ ಉಪನ್ಯಾಸಕರು ಸಹಕರಿಸಿದರು.

Related posts

ಬಿಜೆಪಿ ಅಭ್ಯರ್ಥಿ ಹರೀಶ್ ಪೂಂಜರಿಂದ ಬೆಳ್ತಂಗಡಿ ಕ್ಷೇತ್ರದ 81 ಗ್ರಾಮಗಳಿಗೆ ಭೇಟಿ

Suddi Udaya

ಕೂಕ್ರಬೆಟ್ಟು ಸರ್ಕಾರಿ ಶಾಲೆಗೆ ರೂ.1.10 ಕೋಟಿ ವೆಚ್ಚದಲ್ಲಿ ಸುಸಜ್ಜಿತ ಕಟ್ಟಡ ನಿರ್ಮಾಣ: ಫೆ.17: ಕಟ್ಟಡ ಲೋಕಾರ್ಪಣಾ ಸಮಾರಂಭ

Suddi Udaya

ಮಡಂತ್ಯಾರು ಗ್ರಾ.ಪಂ. ಹಾಗೂ ವಿವಿಧ ಸಂಘ ಸಂಸ್ಥೆಗಳ ಆಶ್ರಯದಲ್ಲಿ ಜಲ ಮೂಲ ಶುಚಿತ್ವ ಹಾಗೂ ಹಣ್ಣು ಹಂಪಲು ಗಿಡಗಳ ವಿತರಣಾ ಕಾರ್ಯಕ್ರಮ

Suddi Udaya

ಬೆಳ್ಳಿಹಬ್ಬದ ಸಂಭ್ರಮದಲ್ಲಿ ಎಸ್‌.ಡಿ.ಎಂ ಮನೋವಿಜ್ಞಾನ ವಿಭಾಗ: ಪ್ರಸಕ್ತ ಶೈಕ್ಷಣಿಕ ವರ್ಷದಲ್ಲಿ 25 ಬಗೆಯ ಅನನ್ಯ ಕಾರ್ಯಕ್ರಮಗಳ ಪ್ರಯೋಗ

Suddi Udaya

ವೇಣೂರು ವಲಯ ಸಮಿತಿಯ ಪದಾಧಿಕಾರಿಗಳ ಆಯ್ಕೆ

Suddi Udaya

ಗುರುವಾಯನಕೆರೆ ಸುಧೇಕಾರ್ ನಿವಾಸಿ ಭೂಮಾಪಕ ರಾಮಚಂದ್ರ ಕುಲಾಲ್ ಹೃದಯಾಘಾತದಿಂದ ನಿಧನ

Suddi Udaya
error: Content is protected !!